Breaking News

ತಾಪಮಾನ ಕಡಿಮೆಯಾಗಬೇಕಾದರೆ  ಪ್ರತಿಯೊಬ್ಬರು ಗಿಡ ನೆಡಲೇಬೇಕು..  ಪರಿಸರ ಪ್ರೇಮಿ ಗುಡ್ಲಾನೂರ

ಪರಿಸರಪ್ರೇಮಿಗಳಿಂದ  ಬೆಟ್ಟಗಳಲ್ಲಿ ಸೀಡ್ ಬಾಲ್ ಬಿತ್ತುವ ಕಾರ್ಯಕ್ರಮ

ಗಂಗಾವತಿ:  ಪರಿಸರ ಅಸಮತೋಲನದಿಂದ ಜೀವರಾಶಿಗಳಿಗೆ ಕಂಟಕ ಒದಗಿ ಬಂದಿದೆ  ಈ ವರ್ಷದ ಬೇಸಿಗೆಯಲ್ಲಿನ ತಾಪಮಾನ ನೆನೆಸಿಕೊಂಡರೆ ಮತ್ತು ತಾಪಮಾನದಿಂದ ಮಾನವ ಸಂಕುಲ ಹಾಗೂ ಸರ್ವ ಜೀವ ರಾಶಿಗಳು ಪರದಾಡಿದ್ದನ್ನು ನೋಡಿದರೆ  ಮುಂದಿನ ವರ್ಷದ ತಾಪಮಾನ ನೆನೆಸಿಕೊಂಡರೆ ಭಯವಾಗುತ್ತದೆ.   ತಾಪಮಾನ ಕಡಿಮೆಯಾಗಬೇಕಾದರೆ ಇಂದಿನಿಂದಲೇ ಪ್ರತಿಯೊಬ್ಬರು ಗಿಡ ನೆಡಲೇಬೇಕು ಮತ್ತು ಪೋಷಣೆ ಮಾಡಲೇಬೇಕು   ಎಂದರು..

 ರವಿವಾರದಂದು ಲಿವ್ ವಿಥ್ ಹ್ಯುಮಾನಿಟಿ ಮತ್ತು ಕಿಷ್ಕಿಂಧ ಯುವ ಚಾರಣ ಬಳಗ ಆಯೋಜಿಸಿದ ಸಿದ್ದಿಕೇರಿಯ ವಾಣಿಭದ್ರೇಶ್ವರ ಬೆಟ್ಟದಲ್ಲಿ ಸೀಡ್ ಬಾಲ್ ಬಿತ್ತುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಜುನ್ ನೂರಾರು ಊರು ಸುತ್ತಿ ಬಂದ ಮೇಲೇ ನಮ್ಮೂರೆ ನಮಗೆ ಮೇಲು ಅನ್ನುವ ಹಾಗೆ ನಮ್ಮ ಗಂಗಾವತಿಯ ಸುತ್ತಲಿನ  ಪ್ರವಾಸಿತಾಣಗಳು ಅದ್ಭುತವಾಗಿವೆ. ಬೆಟ್ಟಗಳು ಹಸುರಿನಿಂದ ಕಂಗೊಳಿಸಲು ಕಿಷ್ಕಿಂಧ ಯುವ ಚಾರಣಬಳಗ ಹಾಗೂ ಲಿವ್ ವಿತ್ ಹ್ಯೂಮಾನಿಟಿ ಸಂಸ್ಥೆಯ ಸದಸ್ಯರು ಸದಾ ಸಿದ್ದರಿದ್ದು   ಒಂದು ಎಕರೆಯಷ್ಟು  ಮಾದರಿ ದಟ್ಟ ಕಾಡು  ಬೆಳೆಸುವ ಉದ್ದೇಶವಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಸದಸ್ಯರ ಹಾಗೂ  ಪದಾಧಿಕಾರಿಗಳಾದ ಹರನಾಯಕ ,ಪಂಪಾಪತಿ, .,ಸಂತೋಷ್,, ಆಕಾಶ್ ನಾಗಲೀಕರ್, ಮಂಜುಳಾ, ಮಂಜುನಾಥ ಇಂಡಿ, ನಿರುಪಾದಿ ಭೋವಿ, ಬಾಲಪ್ಪ ತಾಳಕೇರಿ, ದೇವರಾಜ್ ಇತರರು ಇದ್ದರು

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.