Breaking News

ನೂತನ ಕುಷ್ಟಗಿ ಪೊಲೀಸ್ ಠಾಣೆ, ಕುಷ್ಟಗಿ ವೃತ್ತ ಕಾರ್ಯಾಲಯ ಕಟ್ಟಡದ ಲೋಕಾರ್ಪಣೆ

Inauguration of New Kushtagi Police Station, Kushtagi Circle Office Building

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ ೧೩ : ನೂತನ ಕುಷ್ಟಗಿ ಪೊಲೀಸ್ ಠಾಣೆ ಕಟ್ಟಡ ಮತ್ತು ಕುಷ್ಟಗಿ ವೃತ್ತ ಕಾರ್ಯಾಲಯದ ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಸೆಪ್ಟೆಂಬರ್ 12 ರಂದು ಲೋಕರ್ಪಾಣೆಗೊಳಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕುಷ್ಟಗಿ ಪಟ್ಟಣದ ಹಳೆಯ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ
ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದನಾರ್ಹರಾಗಿದ್ದಾರೆ ಎಂದರು. ಎಲ್ಲ ಇಲಾಖೆಗಳಿಗಿಂತ ಪೊಲೀಸ್ ಇಲಾಖೆಯು ಅತೀ ಮಹತ್ವದ್ದಾಗಿದೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಇನ್ನು ಹೆಚ್ಚಿನ ರೀತಿಯಲ್ಲಿ ಶ್ರದ್ದೆ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಉತ್ತಮ ಹೆಸರು ಬರಲಿದೆ ಎಂದು ತಿಳಿಸಿದರು. ಪೊಲೀಸ್ ಇಲಾಖೆಗೆ ಹೊಸ
ವಾಹನಗಳನ್ನು ನೀಡುವುದು ಸೇರಿದಂತೆ ಮೂಲಭೂತ ಸೌಕರ್ಯಗಳು ಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆಯ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಮನವಿ ಮಾಡಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ ಅನುದಾನ ಕೊಡಲು ಕ್ರಮ ವಹಿಸಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಶ್ರದ್ದೆ ಹಾಗೂ ನಿಷ್ಠೆಗೆ ಹೆಸರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಗೌರವ ಸ್ಥಾನವಿದೆ ಎಂದು ತಿಳಿಸಿದರು. ಗದಗ-ವಾಡಿ ರೈಲ್ವೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಸಂಸದರು, ಸರ್ವೀಸ್ ರಸ್ತೆ ಸೇರಿದಂತೆ ಇನ್ನೀತರ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಜನವರಿ ಮೊದಲ ವಾರದೊಳಗೆ ಕುಷ್ಟಗಿವರೆಗಿನ 57 ಕಿ.ಮೀವರೆಗೆ ರೈಲ್ವೆ ಸಂಚಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಮಾತನಾಡಿ, ಬೇರೆ ಬೇರೆ ಇಲಾಖೆಗಳು ಬೆಳಗ್ಗೆ 10 ರಿಂದ ಸಂಜೆವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಪೊಲೀಸ್ ಇಲಾಖೆಯ ಬಾಗಿಲು ದಿನದ 24 ಗಂಟೆಗಳ ಕಾಲವೂ ತೆರೆದಿರುತ್ತದೆ‌. ಇದು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಮಹತ್ವವನ್ನು ತಿಳಿಸುತ್ತದೆ. ಹಿಂದಿನ ಸರ್ಕಾರವು 100 ಪೊಲೀಸ್ ಠಾಣೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಿದಂತೆ ಇದೀಗ ಕುಷ್ಟಗಿ ಪಟ್ಟಣದಲ್ಲಿ ನೂತನವಾಗಿ ಪೊಲೀಸ್ ಠಾಣೆ ನಿರ್ಮಾಣವಾಗಿ ಲೋಕಾರ್ಪಣೆ ಆಗುತ್ತಿರುವುದು ಸಂತಷದ ಸಂಗತಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಅಂದಾನಗೌಡ ಬಯ್ಯಾಪುರ ಅವರು ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ
ಬಿ ಎಸ್ ಲೋಕೇಶಕುಮಾರ, ಪೊಲೀಸ್ ಉಪಾಧೀಕ್ಷಕರಾದ ಶರಣಬಸಪ್ಪ ಸುಬೇದಾರ, ಶೇಖರಗೌಡ ಪಾಟೀಲ, ಕುಷ್ಟಗಿ ತಹಸೀಲ್ದಾರ ಶ್ರುತಿ, ಕುಷ್ಟಗಿ ಠಾಣೆಯ ಪಿಎಸ್ಐ ಮುದ್ದರಂಗಸ್ವಾಮಿ,
ತನಿಖಾ ಪಿಎಸ್ಐ
ಮಾನಪ್ಪ ವಾಲ್ಮೀಕಿ ಸೇರಿದಂತೆ ಇನ್ನೀತರರು ಇದ್ದರು.
ಡಾ.ಜೀವನಸಾಬ ವಾಲಿಕಾರ ಬಿನ್ನಾಳ ನಿರೂಪಿಸಿದರು.
ಸುಸ್ರಾವ್ಯ ಕಂಠಗಾಯನದ
ಕಲಾವಿದರಾದ ದುರುಗೇಶ ಹಿರೇಮನಿ ಪ್ರಾರ್ಥಿಸಿದರು.
ಸಸಿ ನೆಟ್ಟರು: ನೂತನ ಪೊಲೀಸ್ ಠಾಣೆ ಕಟ್ಟಡದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಟ್ಟಡದ ಆವರಣವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಪೊಲೀಸ್ ಸಿಬ್ಬಂದಿಯು ಹೊಸ ಬಟ್ಟೆ ಧರಿಸಿ ಶಿಸ್ತಿನಿಂದ ಭಾಗಿಯಾದರು. ನೂತನ ಕಟ್ಟಡದ ಲೋಕಾರ್ಪಣೆ ನಿಮಿತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬ‌ಂದಿಯ ಸಮ್ಮುಖದಲ್ಲಿ
ಸಚಿವರು, ಸಂಸದರು, ಶಾಸಕರು
ಠಾಣೆಯ ಆವರಣದಲ್ಲಿ ಸಸಿ ನೆಟ್ಟರು

About Mallikarjun

Check Also

ಕನಕಗಿರಿ ಭಾಗದ ವಿವಿಧ ಗ್ರಾಮಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಸ್ಥಗಿತ: ರೈತರ ಪರದಾಟಕ್ರಿಮಿಕೀಟಗಳ ಭೀತಿಯಲ್ಲಿ ರೈತರ ಕುಟುಂಬ

Midnight power outage in various villages of Kanakagiri region: farmers protest Farmer family in fear …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.