Breaking News

ನರೇಗಾ ಕೂಲಿ ಕಾರ್ಮಿಕರ ವಿಮಾ ಸೌಲಭ್ಯ ನೊಂದಣಿ ಕಾರ್ಯಕ್ರಮ

NREGA wage laborers insurance benefit registration program

ಜಾಹೀರಾತು

ಗಂಗಾವತಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ಅಡಿ ಕೆಲಸ ಮಾಡುವ ನೊಂದಾಯಿತ ಕೂಲಿಕಾರ್ಮಿಕರಿಗೆ ವಿಮಾ ಖಾತ್ರಿ ಸೌಲಭ್ಯ ಒದಗಿಸಿಕೊಳ್ಳಲು 2 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯ ಇದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಗಂಗಾವತಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಇಂದು ಸಾನಾಪುರ ಗ್ರಾಮ ಪಂಚಾಯಿತಿಯ ಕೂಲಿ ಕಾರ್ಮಿಕರು ಗಡ್ಡಿ ಸೇತುವೆ ಭಾಗ ಮತ್ತು ತಿರುಮಲಾಪುರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಪ್ರದೇಶಗಳಿಗೆ ಭೇಟಿ ನೀಡಿ ಕೇಂದ್ರ ಸರಕಾರದ ಮಹತ್ವದ ಯೋಜನೆಗಳಾದ ಸಾಮಾಜಿಕ ಭದ್ರತಾ ಯೋಜನೆಯ ವಿವರಗಳನ್ನು ಕೂಲಿ ಕಾರ್ಮಿಕರಿಗೆ ನೀಡಿದರು
ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಮತ್ತು ವಿಮಾ ಸೌಲಭ್ಯವನ್ನು ಕಾರ್ಮಿಕರ ಹಿತಕ್ಕಾಗಿ ಪಡೆದುಕೊಳ್ಳುವ ಮಾಹಿತಿ ನೀಡುವ ಕಾರ್ಯ ಗಳನ್ನು ಏರ್ಪಡಿಸಿ ಸೌಲಭ್ಯ ಪಡೆದುಕೊಳ್ಳುವ ಮಹತ್ವದ ಕಾರ್ಯವನ್ನು ರಾಜ್ಯ ಮಾರ್ಗದರ್ಶಿ ಬ್ಯಾಂಕ್, ರಾಜ್ಯ ಸರ್ಕಾರ ,ಕೇಂದ್ರ ಸರ್ಕಾರ ಮತ್ತು ಜಿಲ್ಲಾ ಪಂಚಾಯತಿಯ ನಿರ್ದೇಶನದಂತೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ 2 ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯವುಳ್ಳ ಅತಿ ಕಡಿಮೆ ದರದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸುಮಾರು ಎರಡು 250ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿ ಹೆಸರು ನೊಂದಾಯಿಸಿ ಕೊಂಡರು
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಶ್ರೀಮತಿ ಕಿರಣಮ್ಮ ,ಮತ್ತು ವೆಂಕಟೇಶ್ ಉಪಸ್ಥಿತರಿದ್ದು ನಮ್ಮ ಎಲ್ಲಾ ಕಾರ್ಮಿಕರು ಬ್ಯಾಂಕಿನ ವಿಮಾ ಯೋಜನೆಯ ಪಡೆದುಕೊಳ್ಳಲು ತಿಳೆಸಿದರು
ನರೇಗಾ ಕೂಲಿಕಾರ್ಮಿಕರಿಗೆ ಅತಿ ಕಡಿಮೆ ಪ್ರೀಮಿಯಂ ನಲ್ಲಿ ಎರಡು ಲಕ್ಷ ರೂಪಾಯಿ ಮೊತ್ತದ ವಿಮಾ ಸೌಲಭ್ಯವುಳ್ಳ ಮಾಹಿತಿಯನ್ನು ಎಲ್ಲಾ ಕಾರ್ಮಿಕರು ಉಪಯೋಗಿಸಿಕೊಳ್ಳಲು ಸಂಜೀವಿನಿ ಒಕ್ಕೂಟದ ಎನ್ ಆರ್ ಎಲ್ ಎಂ ಪದಾಧಿಕಾರಿಗಳಾದ ಶ್ರೀಮತಿ ಅಂಜಲಿ, ಶ್ರೀಮತಿ ಪಾರ್ವತಿ, ಶ್ರೀಮತಿ ಸುನಿತಾ,ಸವಿತಾ ,ಜಯಾ ರವರು ಕಾರ್ಮಿಕರಿಗೆ ಒಳ್ಳೆಯ ನೆರವು ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು
ಈ ಕಾರ್ಯಕ್ರಮದಲ್ಲಿ ಕಾಯಕ ಬಂದು, ಮೇಟಿಗಳಾದ ಅಶೋಕ, ಪೀರ್ ಸಾಬ್, ರಾಮಚಂದ್ರ, ಮಂಜುನಾಥ, ಶಿಲ್ಪ ,ಜಯಮ್ಮ,ಶಶಿಕಲಾ, ರೋಜಾ ರಾಣಿ ಇತರರು ಹಾಜರಿದ್ದರು

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *