Breaking News

ಕೇಂದ್ರ ಸಚಿವ ವಿ ಸೋಮಣ್ಣನವರಿಂದಬಿದರೆ ಗುಡಿ ಹೋನ್ನವಳ್ಳಿ ಗೇಟ್‌ನ ಮೇಲ್ಸೇತುವೆ ಶಂಕುಸ್ಥಾಪನೆ

Union Minister V Somanna lays foundation stone for flyover at Bidde Gudi Honnavalli Gate

ಜಾಹೀರಾತು

ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ಹೊನ್ನವಳ್ಳಿ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು
ಕಷ್ಟಪಟ್ಟು ಕೆಲಸ ಮಾಡೋರಿಗೆ ಅವಕಾಶ ನೀಡಿ,ಸಣ್ಣಪುಟ್ಟ ವಿಚಾರಗಳಿಗೆ ಮನಸ್ಥಾಪ ಮಾಡಿಕೊಂಡು ಚುನಾವಣೆ ವೇಳೆ ಕೈಕೊಡ ಬ್ಯಾಡ್ರಪ್ಪ ನೀವು ಕೊಟ್ಟ ಕೆಲಸವನ್ನ ಪ್ರಾಮಾಣಿಕವಾಗಿ ಕಷ್ಟಪಟ್ಟ ಮಾಡುತ್ತಿದ್ದೇನೆ ಎಂದು ಮನವಿ ಮಾಡಿದ ವಿ.ಸೋಮಣ್ಣ ನರೇಂದ್ರ ಮೋದಿಯವರ ಅಭಿವೃದ್ದಿ ಭಾರತದ ಕನಸಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ,ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತ ಸಮಗ್ರವಾಗಿ ಅಭಿವೃದ್ದಿ ಕಾಣುತ್ತಿದೆ,ಒಬ್ಬರ ಭಾರತೀಯರ ಸಿಂಧೂರಕ್ಕೆ ಪ್ರತಿಯಾಗಿ ಅಪರೇಷನ್ ಸಿಂಧೂರದ ಮೂಲಕ ಜಗತ್ತಿಗೆ ನಮ್ಮ ಶಕ್ತಿ ಏನು ಎಂಬುದನ್ನ ತೋರಿಸಿದ್ದಾರೆ,ನಿಮ್ಮೆಲ್ಲರ ಆಶೀರ್ವಾದದಿಂದ ನಾನು ತುಮಕೂರು ಜಿಲ್ಲೆ ಸಂಸದನಾಗಿ ಕೇಂದ್ರಸಚಿವನಾಗಿದ್ದೇವೆ,ನಿಮ್ಮ ಋಣದಿಂದ ತುಮಕೂರು ಜಿಲ್ಲೆಗೆ ಸುಮಾರು ಒಂದು ಸಾವಿರ ಕೋಟಿ ಅನುದಾನ ತಂದಿದ್ದೇನೆ,ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ,ಹೊನ್ನವಳ್ಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಜನರಿಗೆ ಭಾರೀ ತೊಂದರೆಯಾಗುತ್ತಿತ್ತು,ನಾನು ಈ ಹಿಂದೆ ಶ್ರೀ ಕ್ಷೇತ್ರ ಹೊಸಪಟ್ಟಣದ ಶ್ರೀ ದುರ್ಗಾಂಬ ದೇವಾಲಯಕ್ಕೆ ಬರುವಾಗ ಸಮಸ್ಯೆ ಅನುಭವಿಸಿದ್ದೆ,ಆದರೆ ದೇವಿಯ ಅನುಗ್ರಹದಿಂದ ಮಂತ್ರಿಯಾಗಿದ್ದೇನೆ.ನಿಮ್ಮ ಋಣ ತೀರಿಸುವ ಅವಕಾಶ ಸಿಕ್ಕಿದೆ,ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ,ತಾಲ್ಲೋಕಿಗೆ ಅಗತ್ಯವಿರುವ ರೈಲ್ವೆ ಯೋಜನೆಗಳು ಹಾಗೂ ನೀರಾವರಿಗೆ ಸಂಬಂದಿಸಿದ ಕೆಲಸಗಳನ್ನ ಸಾಧ್ಯವಾದಷ್ಟು ಮಾಡುತ್ತೇನೆ,ಆದರೆ ಸಮುದಾಯ ಭವನಗಳಿಗೆ ಅನುದಾನ ದೇವಾಲಯಗಳ ನಿರ್ಮಾಣಕ್ಕೆ ಅನುದಾನ ಕೋರಿ ಹೆಚ್ಚುಜನ ಬರುತ್ತಾರೆ,ಅದರೆ ಅನುದಾನದ ಕೊರತೆಯಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ,ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಚುನಾವಣೆ ವೇಳೆ ಕೈಕೊಡಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್. ಜೆಡಿಎಸ್ ಮುಖಂಡ ಕೆಟಿ ಶಾಂತಕುಮಾರ್. ಗ್ರಾಮ ಪಂಚಾಯಿತಿ ಅಧ್ಯಕ್ಷರು ಜ್ಯೋತಿ. ಇಂಜಿನಿಯರ್ ಶಿವಪ್ರಸಾದ್. ಬೋಜೇಗೌಡ ಟಿಂಬರ್. ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ. ಶಶಿಧರ್. ಗಂಗಾಧರ್. ಗುರುಮೂರ್ತಿ. ಗಿರಿಧರ್ಮ ರಾಜ್. ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು.ಪಕ್ಷದ ಮುಖಂಡರುಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *