The development of the state is the agenda of our government: Rayardi

ಸುನಾಮಿ ಅಲೆಯಂತೆ ಕ್ಷೇತ್ರದ ಅಭಿವೃದ್ದಿ,,,,
ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ ( ಕುಕನೂರು ) : ಸಿಎಂ ಸಿದ್ರಾಮಯ್ಯ ನೇತೃತ್ವದ ಸರ ಕಾರ ಜನಪರ ಯೋಜನೆಗಳನ್ನು ನೀಡುತ್ತಿದ್ದು, ರಾಜ್ಯದ ಅಭಿವೃದ್ದಿಯೇ ನಮ್ಮ ಸರಕಾರದ ಅಜೇಂಡಾವಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ 7. 30 ಕೋಟಿ ವೆಚ್ಚದ ಕೋಲ್ಡ್ ಸ್ಟೋರೆಜ್ ಘಟಕ, ಹಾಗೂ ಸಿಸಿ ರಸ್ತೆಗಳ ಭೂಮಿ ಪೂಜೆ, ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿ ಉದ್ಘಾಟನೆ, ಹಾಗೂ ತಾಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪಿಯು ಕಾಲೇಜಿನ ವಸತಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸುಮಾನಿ ರೀತಿಯಲ್ಲಿ ಆಗುತ್ತಿವೆ. ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಗಳಿಗೆ ಜನರು ಜಮೀನು ನೀಡಿ ಸಹಕರಿಸುವ ಅಗತ್ಯತೆ ಇದೆ ಎಂದರು.
ವಿರೋಧ ಪಕ್ಷಗಳಿಗೆ ವಿರೋಧ ಮಾಡಲು ಬೇರೆ ವಿಷಯಗಳೇ ಇಲ್ಲಾ, ಹಾಗಾಗಿ ಈಗಾಗಲೇ ರದ್ದಾಗಿರುವ ಮುಡಾ ವಿಷಯವನ್ನು ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ.
ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಸುಮಾರು 60 ಸಾವಿರ ಕೋಟಿ ರೂಪಾಯಿ ಒಂದು ವರ್ಷಕ್ಕೆ ಖರ್ಚು ಮಾಡುತ್ತಿದೆ , ರಾಜ್ಯದ ಜನತೆಗೆ ನೀಡುತ್ತಿರುವ ಹತ್ತು ಕೆ ಜಿ ಅಕ್ಕಿ ಯೋಜನೆಯನ್ನು ದೇಶದ ಬೇರೆ ಯಾವ ರಾಜ್ಯದಲ್ಲಿ ಕೊಡುತ್ತಿಲ್ಲ, ಮನ ಮೋಹನ್ ಸಿಂಗ್ ನೇತೃತ್ವದ ಯು. ಪಿ.ಯ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಲಾಗಿದೆ,
ಕಳೆದ ಲೋಕಸಭಾ ಚುನಾವಣೆಯ ನಿಮಿತ್ತ ನೀತಿ ಸಂಹಿತೆ ಇದ್ದ ಕಾರಣ ಮೂರು ನಾಲ್ಕು ತಿಂಗಳು ಯಾವುದೇ ಕಾಮಗಾರಿಗಳು ಮಾಡಲು ಆಗಲಿಲ್ಲಾ.
ಕ್ಷೇತ್ರದಲ್ಲಿ 12 ಪ್ರೌಢ ಶಾಲೆ, 6 ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೇನೆ. 15 ಬಸ್ ನಿಲ್ದಾಣ, ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹಾಗೂ ತಹಸೀಲ್ದಾರ ಕಟ್ಟಡಕ್ಕೆ 30 ಕೋಟಿ ಅನುದನ ಸೇರಿದಂತೆ ಕುಕನೂರು ಕುಡಿಯುವ ನೀರಿನ ಯೋಜನೆಗೆ ಸಹ 210 ಕೋಟಿಯನ್ನು ಮಂಜೂರು ಮಾಡಿಸಿದ್ದೇನೆ ಎಂದರು.
ರಾಜ್ಯದ ರೈತರ ಪಂಪ್ ಸೆಟ್ ಗಳ ನಿರಂತರ ವಿದ್ಯುತ್ ಗಾಗಿ ಸೋಲಾರ್ : ರಾಜ್ಯದ 32 ಲಕ್ಷ ರೈತರ ಪಂಪಸೆಟ್ ಗೆ ಸೋಲಾರ್ ವಿದ್ಯುತ್ ನೀಡಲು ಈಗಾಗಲೇ ರಾಜ್ಯ ಸರ್ಕಾರ ಮುಂದಾಗಿದ್ದು ಶೇ.80 ರಷ್ಟು ರಿಯಾಯತಿಯಲ್ಲಿ ಸೋಲಾರ್ ಅಳವಡಿಕೆ ಮಾಡಿಕೊಡಲಾಗುವುದು, ಗೃಹಜ್ಯೋತಿ 8500 ಕೋಟಿ ಹಾಗೂ ರೈತರ ಪಂಪಸೆಟ್ ಬಿಲ್ 13 ಸಾವಿರ ಕೋಟಿ ಹಿಡಿದು 22 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರವೇ ಪಾವತಿ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸುರೇಶ ಕೊಕ್ರೆ, ತಹಸೀಲ್ದಾರ ಪ್ರಾಣೇಶ,ಇಒ ಸಂತೋಷ ಬಿರಾದಾರ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ, ಸಿಪಿಆಯ್ ಮೌನೇಶ್ವರ ಪಾಟೀಲ್, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಚಂದ್ರಶೇಖರಯ್ಯ ಹಿರೇಮಠ, ವೀರನಗೌಡ ಬಳೂಟಗಿ, ಕೆರಿಬಸಪ್ಪನಿಡಗುಂದಿ,ಸತ್ಯನಾರಾಯಣಪ್ಪ ಹರಪನಹಳ್ಳಿ, ಮಂಜುನಾಥ ಕಡೇಮನಿ, ಸಿದ್ದಯ್ಯ ಕಳ್ಳಿಮಠ, ಪಪಂ ಸದಸ್ಯರಾದ ಸಿರಾಜ್ ಕರಮುಡಿ, ಗಗನ ನೋಟಗಾರ, ನೂರುದ್ದೀನ್ ಗುಡಿಹಿಂದಲ್ ಇತರರಿದ್ದರು.