
I am always committed to the development of the Congress party - Somanath Pattanshetty, lawyer

ನಾನು ಯಾವಾಗಲೂ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಬದ್ಧ.ರಾಜಕೀಯಕ್ಕಾಗಿ ರಾಜಕೀಯ ಮಾಡದೇ ಗಂಗಾವತಿ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಮಾಡುತ್ತೇನೆ: ಸೋಮನಾಥ ಪಟ್ಟಣಶೆಟ್ಟಿ ವಕೀಲರು

ಗಂಗಾವತಿ: ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅನಾಥವಾಗಿದೆ ಮತ್ತು ಪಕ್ಷದ ಅಭಿವೃದ್ಧಿಗೆ ಕುಂಠಿತವಾಗಿದೆ. ಯಾರೂ ಸಹಿತ ಪಕ್ಷದ ಹಿತದೃಷ್ಟಿಗೆ ಕಾಳಜಿವಹಿಸುತ್ತಿಲ್ಲ. ಆದರೆ ಪಕ್ಷದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ನಾನು ರಾಜಕೀಯಕ್ಕಾಗಿ ರಾಜಕೀಯ ಮಾಡುವುದಿಲ್ಲ. ಆದರೆ ನಮ್ಮ ಗಂಗಾವತಿ ಅಭಿವೃದ್ಧಿಗಾಗಿ ಮತ್ತು ಜನ ಹಿತಕ್ಕಾಗಿ ರಾಜಕೀಯ ಮಾಡುತ್ತೇನೆ. ಇದು ನನ್ನ ಸಂಕಲ್ಪ ಎಂದು ಕಾಂಗ್ರೆಸ್ ಮುಖಂಡರಾದ ಸೋಮನಾಥ ಪಟ್ಟಣಶೆಟ್ಟಿ ವಕೀಲರು ಹೇಳಿದರು.
ಮುಂದುವರೆದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ದೇಶದ, ರಾಜ್ಯದ ಪ್ರಗತ , ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವ ತತ್ವಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಮತ್ತು ಶ್ರಮಿಸಬೇಕೆಂದು ಪಕ್ಷದ ಎಲ್ಲಾ ಮುಖಂಡರಲ್ಲಿ ಹಾಗೂ ಪಕ್ಷದ ಎಲ್ಲಾ ಅಭಿಮಾನಿಗಳಲ್ಲಿ ಕೇಳಿಕೊಂಡರು.
ಪಕ್ಷದ ಅಭಿಮಾನಿಗಳು, ಪುರುಷರು ಹಾಗೂ ಮಹಿಳೆಯರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಹಿಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷವು ದೇಶದ ಹಾಗೂ ರಾಜ್ಯದ ಪ್ರಗತಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ನಾವುಗಳು ಪಕ್ಷ ಸಂಘಟನೆ ಮಾಡಬೇಕಿದೆ. ಪಕ್ಷ ಸಂಘಟನೆ ಬಲವಾಗಿದ್ದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ನಾವುಗಳು ಪಕ್ಷಭೇದವಿಲ್ಲದೆ ಸಾಮಾಜಿಕ ಮತ್ತು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಅದು ಅಲ್ಲದೆ ಆಂತರಿಕ ಹೊಂದಾಣಿಕೆ ಕೊರತೆ, ಅಪನಂಬಿಕೆಯ ವಾತಾವರಣದಿಂದ ಹೊರಬಂದು ಪಕ್ಷವನ್ನು ಅಮೂಲಾಗ್ರವಾಗಿ ಬಲಪಡಿಸಿ ಗಂಗಾವತಿಯಲ್ಲಿ ಪಕ್ಷವನ್ನು ಬಲಪಡಿಸಬೇಕಾಗಿದೆ. ಸಂಘಟನಾ ನಿಷ್ಠರ ಹಾಗೂ ಚುರುಕಾದ ಪಡೆಯನ್ನು ಕಟ್ಟುವ ಕಾರ್ಯಕ್ಕೆ ನಾವುಗಳು ಮುಂದಾಗಬೇಕು. ನಾವುಗಳು ಪಕ್ಷದ ಗುಣಮಟ್ಟ ಹಾಗೂ ವೇಗಕ್ಕೆ ಸ್ಪೂರ್ತಿಯನ್ನು ಕೊಡಬೇಕಾಗಿದೆ. ಗಂಗಾವತಿ ಕ್ಷೇತ್ರದ ಬಗ್ಗೆ ನಾವುಗಳು ಆಳವಾದ ಅಧ್ಯಯನವನ್ನು ಮಾಡಿ ಪ್ರತಿಯೊಂದು ಆಗು ಹೋಗುಗಳ ಕುರಿತು ವಿಶ್ಲೇಷಣೆ ಮಾಡಿ, ಜ್ವಲಂತ ಸಮಸ್ಯೆಗಳ ಬೇರು ಹುಡುಕಿ ಪರಿಹಾರವನ್ನು ಒದಗಿಸುವುದು ಅತ್ಯವಶ್ಯವಾಗಿದೆ. ಅಲ್ಲದೆ ಸ್ಥಳೀಯ ಸಮಸ್ಯೆಗಳ ಬಗ್ಗೆ, ಜನಸಾಮಾನ್ಯರು ನಿತ್ಯ ಎದುರಿಸುತ್ತಿರುವ ಸವಾಲುಗಳ ಅರಿತು ಕಾರ್ಯ ಮಾಡಬೇಕಾಗಿದೆ. ಕಾರಣ ನಮ್ಮ ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಖುದ್ದಾಗಿ ನೇತೃತ್ವ ವಹಿಸಿಕೊಳ್ಳುವುದರ ಮುಖಾಂತರ ಗುರುತರವಾದ ಹಾಗೂ ಕ್ರಿಯಾಶೀಲ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕಿದೆ. ಇದರಿಂದ ಪಕ್ಷದ ವರಿಷ್ಠರಿಗೆ ವಾಸ್ತವಿಕ ಮತ್ತು ನಿಷ್ಠುರ ವರದಿಗಳನ್ನು ಕಳುಹಿಸಿ ಪಕ್ಷದ ಅಭಿವೃದ್ಧಿಗೆ ಪಣತೊಡಬೇಕಿದೆ. ಈ ಹಿನ್ನೆಲೆಯಲ್ಲಿ ನಾವುಗಳು ಸಂಘಟನಾತ್ಮಕ ಚಟುವಟಿಕೆಗಳ ಸಂಪೂರ್ಣ ಭಾರ ಮತ್ತು ಜವಾಬ್ದಾರಿಗಳನ್ನು ಹೊರಬೇಕಾಗಿದೆ. ಇದರಿಂದ ನಮ್ಮ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತುಂಬುವ ಮುಖಾಂತರ ಅವರಿಗೆ ಹೊಣೆಗಾರಿಕೆಯನ್ನು ಕೊಡಬೇಕು. ಜೊತೆಗೆ ಪಕ್ಷದ ಆಂತರಿಕ ವಲಯದೊಳಗಿನ ಭಿನ್ನಮತ, ಗುಂಪುಗಾರಿಕೆ ಅರಿತುಕೊಂಡು ಎಲ್ಲಾ ಬಿಕ್ಕಟ್ಟುಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು, ಮುಂಬರುವ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಾವುಗಳು ಪಕ್ಷದ ಶ್ರೇಯೋಭಿವೃದ್ಧಿಗೆ ದುಡಿಯಬೇಕಾಗಿದೆ ಎಂದರು.
