
212th day of Baldota and anti-factory pollution sit-in concludes
212th day of Baldota and anti-factory pollution sit-in concludes

212ನೇ ದಿನದ ಬಲ್ಡೋಟ ಹಾಗೂ ಕಾರ್ಖಾನೆ ಮಾಲಿನ್ಯ ವಿರೋಧಿ ಧರಣಿ ಪೂರ್ಣ

ಕೊಪ್ಪಳ: ನಗರಸಭೆ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 212ನೇ ದಿನದಲ್ಲಿ ಯಶಸ್ವಿಯಾಗಿ ನೆರವೇರಿತು.
ಕೊಪ್ಪಳವನ್ನು ಜಿಲ್ಲಾ ಕೇಂದ್ರ ಎಂದು ನೋಡದೆ ಅವಳಿ ನಗರಕ್ಕೆ ಹೊಂದಿಕೊಂಡು 54 ಸಾವಿರ ಕೋಟಿ ಹೂಡಿಕೆಯಲ್ಲಿ ಬಲ್ಡೋಟ ಕಂಪನಿ ಇಂಟಿಗ್ರೆಟೆಡ್ ಸ್ಟೀಲ್, ಕಲ್ಲಿದ್ದಲು ಸುಟ್ಟು ವಿದ್ಯುತ್ ಮತ್ತು ಡಾಂಬರು ತಯಾರಿಸುವ ಕಾರ್ಖಾನೆ ಸ್ಥಾಪನೆಯ ಘೋಷಣೆ ಮಾಡಿದಾಗ, ಈ ಕುರಿತು ಗವಿಶ್ರೀಗಳು ಧರ್ಮಾದೇಶ ಮಾಡಿ, ಈ ಹೂಡಿಕೆ ತಡೆದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕೆಂದು, ನಗರದ ಪೂರ್ವ ಭಾಗದಲ್ಲಿ 2011ರಿಂದ ಬಲ್ಡೋಟ ಮಾಲಿಕತ್ವದ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಕಂದು ಧೂಳು ನಗರದ ಅರ್ಧ ಭಾಗ ಬಾಧಿಸುತ್ತಿದೆ. ನಗರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕೆಂದು, ಬಲ್ಡೋಟ ಕಂಪನಿಯು ಬಸಾಪುರ ಗ್ರಾಮದ ಸಾರ್ವಜನಿಕ ಕೆರೆಯನ್ನು ಅನಧಿಕೃತವಾಗಿ ವಶಪಡಿಸಿಕೊಂಡಿದ್ದು, ಕೆರೆಯ ಸುತ್ತ ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕೆಂದು, ತುಂಗಭದ್ರಾ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾಧ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ.ಬಡಿಗೇರ, ರಂಗಕರ್ಮಿ ಲಕ್ಷ್ಮಣ ಪೀರಗಾರ, ಶರಣು ಶೆಟ್ಟರ್, ಮಖ್ಬೂಲ್ ರಾಯಚೂರು, ನಜೀಮ್ ಕನಕಗಿರಿ, ಪಾಮಣ್ಣ ಅರಳಿಗನೂರು, ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಗಂಗಾಧರ ಖಾನಾಪೂರ, ಮಲ್ಲಪ್ಪ ಮಾದಿನೂರು, ವಿಜಯಕುಮಾರ ಎಂ. ವಿಜಯಮಹಾಂತೇಶ ಹಟ್ಟಿ, ಶ್ಯಾಮೀದ ಸಾಬ್, ಕೋಟೇಶ ಸಾಣಾಪೂರ, ಚಂದುಸಾಬ ಗುರಿಕಾರ, ಗಂಗಮ್ಮ ಕುರುಗೋಡು ಇದ್ದರು.
