A heartfelt tribute to S. Janaki Amma by Senior Advocate Mahabaleshwar Hasinal…

ಹಿರಿಯ ನ್ಯಾಯವಾದಿ ಮಹಾಬಲೇಶ್ವರ ಹಾಸಿನಾಳ್ ಅವರಿಂದ ಎಸ್ ಜಾನಕಿ ಅಮ್ಮನವರಿಗೆ ಭಾವಪೂರ್ಣ ಶ್ರದ್ಧಾಂಜಲಿ…

ಗಂಗಾವತಿ: ದಕ್ಷಿಣ ಭಾರತ ಸೇರಿದಂತೆ ಭಾರತದ ಕೋಗಿಲೆ ಡಾಕ್ಟರ್ ಎಸ್ ಜಾನಕಿ ಅವರ ಅಸ್ತಂಗತದಿಂದ ಹಿರಿಯ ಸಂಗೀತ ಗಾಯಕಿಯನ್ನು ದೇಶ ಕಳೆದುಕೊಂಡು ಬಡವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸಂಗೀತ ಕಲಾವಿದ ಮಹಾಬಲೇಶ್ವರ ಹಾಸಿನಾಳ್ ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದ್ದಾರೆ.
. ತಾವು ಒಬ್ಬ ಸಂಗೀತ ಕಲಾವಿದರಾಗಿ ಜೀವನದಲ್ಲಿ ಒಮ್ಮೆಯಾದರೂ ಅವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದು ಅದಕ್ಕೆ ಸ್ಪೂರ್ತಿ ಎಂಬಂತೆ ಗಂಗಾವತಿಯ ಸಂಗೀತ ಕಲಾವಿದೆ ಸುನಿತಾ ಬೆಂಗಳೂರು ಅವರಿಂದ ಭೇಟಿ ಮಾಡುವ ಅವಕಾಶ ದೊರಕಿದ್ದು ನನ್ನ ಏಳು ಜನ್ಮದ ಪುಣ್ಯವೆಂದು ತಿಳಿಸಿದ್ದಾರೆ ಆ ಒಂದು ಭೇಟಿಯ ಕ್ಷಣ ಸಾಕ್ಷಾತ್ ಜನ್ಮ ಕೊಟ್ಟ ತಾಯಿ ಹಾಗೂ ಶಾರದಾದೇವಿಯ ಸ್ವರೂಪವನ್ನು ತಾವು ಕಂಡು ಹುಟ್ಟಿದ ಜನ್ಮ ಸಾರ್ಥಕವಾಯಿತು ಎಂದು ಭಾವಿಸುವುದಾಗಿ ತಿಳಿಸಿದ್ದಾರೆ ಒಟ್ಟಾರೆ ಸರಳ ಸಜ್ಜನಿಕೆಯ ಹಿರಿಯ ಗಾಯಕಿ ಎಸ್ ಜಾನಕಿ ಅಮ್ಮನವರು ಮತ್ತೊಮ್ಮೆ ಹುಟ್ಟಿ ಬರಲಿ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ತಿಳಿಸಿದ್ದಾರೆ..


