Breaking News

ವಾಯುಗುಣವೈಪರೀತ್ಯ” ಸಮಾಲೋಚನಾ ಸಭೆಯನ್ನುಎಸ್ಎಪಿಎಸಿಸಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ|| ಸುಧಿಶೇಷಾದ್ರಿರಿಂದುದ್ಘಾಟಿನೆ

“Climate Anomalies” was convened by Scientist of SAPAC Research Center Prof. Sudhisheshadririndudhatine.

ಮೈಸೂರು ಡಿ.3: ಇಂಗಾಲದ ಆದಾಯ ರೈತರಿಗೆ ಸಂದಾಯವಾಗಲಿ : ಪ್ರೊ|| ಸುಧಿ ಶೇಷಾದ್ರಿ.
ನಗರದ ಮಾನಸಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಗೆಳೆಯರ ಬಳಗ, ತುಮಕೂರಿನ ಗಾಂಧಿ ಸಹಜ ಬೇಸಾಯ ಶಾಲೆ ಮತ್ತು ರಾಣಿ ಬಹದ್ದೂರ್ ಸಂಸ್ಥೆ ಸಹಯೋಗದಲ್ಲಿ ಎಸ್ಎಪಿಎಸಿಸಿ (ಸೌತ್ ಏಶಿಯನ್ ಪೀಪಲ್ಸ್ ಆಕ್ಷನ್ ಆನ್ ಕ್ಲೈಮೇಟ್‌ ಕ್ರೈಸಿಸ್) ನ ತಾಂತ್ರಿಕ ಪರಿಣಿತರೊಂದಿಗೆ
“ವಾಯುಗುಣ ವೈಪರೀತ್ಯ” ಸಮಾಲೋಚನಾ ಸಭೆಯನ್ನು ಎಸ್ಎಪಿಎಸಿಸಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ|| ಸುಧಿ ಶೇಷಾದ್ರಿ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯಕ್ಕೆ ಶೇ70% ರಷ್ಟು ಕೊಡುಗೆಯನ್ನು ಭಾರತವು ಸೇರಿದಂತೆ ಪ್ರಮುಖ ದೇಶಗಳಾದ ಅಮೇರಿಕ, ಚೀನಾ, ಯುರೋಪ, ಆಸ್ಟ್ರೇಲಿಯಾ ಮತ್ತು ಜಪಾನ್ ನೀಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಖನಿಜ ಸಂಪನ್ಮೂಲಗಳಾದ ಕಲ್ಲಿದ್ದಲು, ಅನಿಲ ನಿಕ್ಷೇಪಗಳು, ಇತ್ಯಾದಿ ಇನ್ನೂ ಹತ್ತಿಪ್ಪತ್ತು ವರ್ಷಗಳಲ್ಲಿ ಬರಿದಾಗುವ ಸಾಧ್ಯತೆ ಹೆಚ್ಚಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಹಾನಿಯಿಂದ ಸುಮಾರು ರುಪಾಯಿ ಐದು ಲಕ್ಷ ಕೋಟಿಗೂ ಅಧಿಕ ಬೆಳೆ ನಷ್ಟ ಉಂಟಾಗುತ್ತಿದ್ದು, ಇದನ್ನು ರೈತರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಅಂತರಾಷ್ಟ್ರೀಯ ಹವಾಮಾನ ಬದಲಾವಣೆ ನಿಧಿಯಿಂದ ಸಿಗುವ ಹಣಕಾಸು ನೆರವಿನಲ್ಲಿ, ಪ್ರತಿ ಎಕರೆಗೆ ಕನಿಷ್ಠ ₹22 ಸಾವಿರದಷ್ಟನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂದು ತಿಳಿಸಿದರು.
ಹವಮಾನ ಬದಲಾವಣೆ ಹತ್ತಿಕ್ಕುವ ಉಪಾಯಗಳ ಅಳವಡಿಕೆ, ಹಸಿರು ಮನೆ ಅನಿಲಗಳ ಹೊರ ಹೊಮ್ಮುವಿಕೆಯನ್ನು ಕಡಿತಗೊಳಿಸಲು ಜನಜಾಗೃತಿ ಮೂಡಿಸುವುದೊಂದೇ ಈಗಿರುವ ದಾರಿ ಎಂದು ತಿಳಿಸಿದರು.
ಎಸ್ಎಪಿಎಸಿಸಿ ಸಂಶೋಧನಾ ವಿಭಾಗದ ಮತ್ತೊಬ್ಬ ಸಂಪನ್ಮೂಲವ್ಯಕ್ತಿ ಸಾಗರ್ ಧಾರಾ ಮಾತನಾಡಿ, ರಾಷ್ಟ್ರೀಯ ಹಸಿರು ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಕೃಷಿ ಕ್ಷೇತ್ರದಲ್ಲಿ ಶೇ14% ರಷ್ಟು ಎಂದು ಬಿಂಬಿಸಲಾಗುತ್ತಿದೆ. ಅದು ತಪ್ಪು ಲೆಕ್ಕಾಚಾರವಾಗಿದ್ದು, ವಾಸ್ತವವಾಗಿ ಅದು ಶೇ1 ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು. ಭಾರತ ದೇಶದ 155 ಮಿ.ಹೆಕ್ಟೇರ್ ಕೃಷಿಭೂಮಿಯಲ್ಲಿ ಸುಮಾರು 1000 ದಶಲಕ್ಷ ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಜಮೆಯಾಗುತ್ತಿದ್ದು, ಇಂದಿನ ಮಾರುಕಟ್ಟೆ ಮೌಲ್ಯ $100 ಬಿಲಿಯನ್ ಗಳಷ್ಟು ಆಗುತ್ತದೆ. ಈ ಪ್ರಕಾರವಾಗಿ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹22 ಸಾವಿರದಷ್ಟನ್ನಾದರೂ ಇಂಗಾಲದ ಆದಾಯ ಎಂದು ಪರಿಗಣಿಸಿ ಅವರ ಖಾತೆಗೆ ನೇರವಾಗಿ ಜಮೆ ಮಾಡಬೇಕೆಂದು ತಿಳಿಸಿದರು.
ಪರಿಸರವಾದಿ ಸಿ ಯತಿರಾಜು ಮಾತನಾಡಿ, ಇತ್ತೀಚನ ವರ್ಷಗಳಲ್ಲಿ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ರಾಷ್ಟ್ರಗಳೇ ನಿಜವಾದ ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಡ್ಯಾಂಗಳನ್ನು ಕಟ್ಟಿದರೆ ಮಾತ್ರ ಎಂದುಕೊಂಡಿದ್ದಾರೆ. ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಸುಸ್ಥಿರವಾಗಿದ್ದರೆ ಮಾತ್ರ ನಮ್ಮ ಭೂಮಿ ಉಳಿಸಲು ಸಾಧ್ಯ ಎಂದರು.
ಗಾಂಧಿ ಸಹಜ ಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ|| ಮಂಜುನಾಥ ಮಾತನಾಡಿ, ಇಂದು ಭೂಮಿ ತಾಪಮಾನ ಏರುತ್ತಿರುವುದು ಜ್ವಲಂತ ಸಮಸ್ಯೆಯಾಗಿದೆ. ಮಾನವ ತಾನು ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಅನ್ಯ ಮಾರ್ಗವಿಲ್ಲ. ಸಮುದಾಯ ಜಮೀನುಗಳಲ್ಲಿ ಮರಗಿಡಗಳನ್ನು ಹೆಚ್ಚು ಬೆಳೆಸಬೇಕು, ಮಣ್ಣು ಮತ್ತು ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.
ರೈತ ಮುಖಂಡ ಹೊನ್ನೂರು ಪ್ರಕಾಶ ಮಾತನಾಡಿ, ಇಂದು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬಹುದೊಡ್ಡ ಒತ್ತಡ ಸೃಷ್ಟಿ ಮಾಡಿಕೊಂಡಿದ್ದು, ಇದರಿಂದ ಭೂಮಿ, ನೀರು, ಗಾಳಿ, ಅರಣ್ಯ ಜೀವವೈವಿಧ್ಯ ಹಾಗೂ ಜೈವಿಕ ಸಂಪನ್ಮೂಲಗಳ ಗುಣಮಟ್ಟ ಹಾಗೂ ವಿಸ್ತರಾದಲ್ಲಿ ಕುಗ್ಗುತ್ತಿದೆ. ಆದ್ದರಿಂದ ನಾವೆಲ್ಲರೂ ಈ ಬಗ್ಗೆ ಎಚ್ಚೆತ್ತು ನಮ್ಮ ನೈಸರ್ಗಿಕ ಸಂಪನ್ಮೂಲವನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಿ ಸಂರಕ್ಷಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ ಸಿ ಅಣ್ಣ ವಿನಯಚಂದ್ರ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿ ಪಿ ಮಾಧವನ್, ರಾಜಕೀಯ ವಿಶ್ಲೇಷಕ ಶಿವಸುಂದರ್, ಮೈಸೂರು ಗೆಳೆಯರ ಬಳಗದ ಕರುಣಾಕರನ್, ಅಭಿರುಚಿ ಗಣೇಶ, ಕೊಳ್ಳೇಗಾಲ ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್, ಸೂಸಿ ಸಂಸ್ಥೆಯ ನಾಗರಾಜು, ರಾಣಿ ಬಹದ್ದೂರ್ ಸಂಸ್ಥೆಯ ಪ್ರಸಾದ, ನಿವೃತ್ತ ಇಂಜಿನಿಯರ್ ನರೇಂದ್ರ ಕುಮಾರ, ನೀರೇಶ ಗುಡ್ ಅರ್ಥ್ ಸಂಸ್ಥೆಯ ವಿನೋದ, ಕರ್ನಾಟಕ ರಾಷ್ಟ್ರ ಸಮಿತಿಯ ಸೋಮಸುಂದರ, ಓಯಾಸಿಸ್ ಫೌಂಡೇಶನ್ ನ ದೊರೆಸ್ವಾಮಿ, ಸಿಐಟಿಯು ನ ಮಹದೇವಯ್ಯ, ಎಐಕೆಕೆಎಂಎಸ್ (ಕಿಸಾನ್ ಮಜ್ದೂರ್) ಎಸ್ ಎನ್ ಸ್ವಾಮಿ, ಇಎಸ್ ಜಿ ಸಂಸ್ಥೆಯ ಭಾರ್ಗವಿ, ತೆರಕಣಾಂಬಿ ಶಾಂತಮಲ್ಲಪ್ಪ, ರವೀಶ, ಮಂಜುನಾಥ ಭಟರಹಳ್ಳಿ, ಸತ್ತೇಗಾಲದ ಪ್ರಶಾಂತ ಜಯರಾಂ, ಚಂದ್ರಶೇಖರ್ ಮೇಟಿ, ಕೃಷಿವಿಜ್ಞಾನಿ ಡಾ|| ಮಹದೇವಸ್ವಾಮಿ, ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.