Rangotsava 2023 led by K.Tippeswamy in Bangalore Legendary arts are still alive because of successful artists: Dr.K.Dharandevi

ಬೆಂಗಳೂರು: ರಾಜ್ಯದ ಮೂಲೆಮೂಲೆಗಳ ಖ್ಯಾತ ಕಲಾವಿದರೆನ್ನೆಲ್ಲಾ ಒಟ್ಟಿಗೆ ಸೇರಿಸಿ ರಕ್ತರಾತ್ರಿ ಹಾಗು ಕುರುಕ್ಷೇತ್ರ ಎರಡು ಅದ್ಭುತ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಬದ್ಧತೆ ಮೆರೆದ ಇಂಥ ಸಂಘಟಕರಿAದಲೇ ಪೌರಾಣಿಕ ಕಲೆಗಳು ಇನ್ನೂ ಜೀವಂತ ಎಂದು ಬೆಂಗಳೂರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ.ಕೆ.ಧರಣಿ ದೇವಿ ಐಪಿಎಸ್ ಪ್ರಶಂಸೆ ವ್ಯಕ್ತಪಡಿಸಿದರು.ಅವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಹಾಗು ಶ್ರೀ ಕಂದಗಲ್ಲ ಹನುಮಂತರಾಯ ಕಲಾ ಸಂಘ ಉದ್ಘಾಟನೆ ಹಾಗು ಪೌರಾಣಿಕ ರಂಗೋತ್ಸವ -೨೦೨೩ ಎರಡು ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಶೇಷ ಆಸಕ್ತಿ ಹಾಗು ಪರಿಶ್ರಮಗಳ ಮೂಲಕ ಪೌರಾಣಿಕ ನಾಟಕಗಳ ಪಾತ್ರಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ, ಸ್ಪಷ್ಟ ಉಚ್ಛಾರದ ಜತೆಗೆ ಭಾವಾಭಿನಯಕ್ಕೆ ಹೆಚ್ಚಿದ ಆದ್ಯತೆ ನೀಡಬೇಕಿದ್ದು, ತಾಳ, ಲಯ ಹಾಗು ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ ನುಡಿಸುವ ಮೂಲಕ ಪ್ರೇಕ್ಷಕರಲ್ಲಿ ಆಸಕ್ತಿ ಕೆರಳಿಸುವ ಮುಖೇನ ತನ್ನ ಪಾತ್ರವನ್ನು ಜನ ಮಾನಸದಲ್ಲಿ ಹೆಚ್ಚು ದಿನ ಜೀವಂತವಾಗಿಡಲು ಪ್ರಯತ್ನಿಸಬೇಕಾಗುತ್ತದೆ. ಕಬ್ಬಿಡದ ಕಡಲೆಯಂಥ ಸಂಭಾಷಣೆಗಳನ್ನು ನುಡಿಸುವುದೇ ಒಂದು ಸವಾಲಿನ ಕೆಲಸ ಇಂಥ ಅಧುನಿಕ ಜೀವನ ಶೈಲಿಯ ಬದುಕಿನಲ್ಲಿ ಇನ್ನೂ ನಮ್ಮ ಸಂಸ್ಕೃತಿ ಮರೆಯದೆ ಕಾಪಾಡುತ್ತಿರುವ ಎಲ್ಲರು ಕೂಡಾ ಅಭಿನಂದನಾರ್ಹರು ಎಂದರು.ಈ ಸಂದರ್ಭದಲ್ಲಿ ಬಾಲ್ಕಿ ಹಿರೇ ಸಂಸ್ಥಾನ ಮಠದ ಶ್ರೀ ಚನ್ನಬಸವ ಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು.ಬೆಳ್ಳಾವಿಯ ಶ್ರೀ ಮದ್ ಬೆಳ್ಳನಪುರಿ ವೀರಧರ್ಮ ಸಿಂಹಾಸನ ಸಂಸ್ಥಾನಮಠದ ಶ್ರೀ ಪಟ್ಟದ ಮಹಂತ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎ.ಎಸ್. ಅಧಿಕಾರಿ ವಿಶ್ವನಾಥ ಹಿರೇಮಠ, ಪಂಪನಗೌಡ ಮೇಲ್ಸೀಮೆ ಸಣ್ಣ ನಿರಾವರಿ ಇಲಾಖೆ ಸಹ ಕಾರ್ಯದರ್ಶಿಗಳು, ಕಂದಗಲ್ಲ ಹನುಮಂತರಾಯ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೆಸ್ವಾಮಿ ಕೂಡ್ಲಗಿ ಸೂಲದÀಳ್ಳಿ ಉದ್ಯಮಿ ಆರ್.ಎನ್. ಉಮೇಶ್ ಬೆಂಗಳೂರು, ಉದ್ಯಮಿ ವಿ.ಶರಬಣ್ಣ ಬೆಂಗಳೂರು, ಚಿತ್ರ ಸಾಹಿತಿ ವಸಂತ ಕುಮಾರ್ ಬೆಂಗಳೂರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎ,ಎಸ್, ಹುಲುಗಪ್ಪ, ಅಖಿಲ ಕರ್ನಾಟಕ ಡಾ. ಮಾಯಣ್ಣ ಗೌಡ ಕಲಾವಿದರ ಸಂಘದ ರಾಜ್ಯಧ್ಯಕ್ಷ ಡಾ.ಮಾಯಣ್ಣ, ಕಾಡು ಗೊಲ್ಲರ ಸಂಘದ ರಾಜ್ಯಧ್ಯಕ್ಷ ರಾಜಣ್ಣ ಬೆಂಗಳೂರು ಹಾಗು ಹಿರಿಯ ಕಲಾವಿದರಾದ ಶೇಖ್ ಮಾಸ್ತರ ಇತರರಿದ್ದರು. ಹರ‍್ಮೋನಿಯಂತ ಮಾಸ್ತಾರ ಕೆ.ತಿಪ್ಪೆಸ್ವಾಮಿ ಸೂಲದಳ್ಳಿ ಇವರ ನೃತೃತ್ವದಲ್ಲಿ ಹಿರಿಯ ನಟರಾದ ನಾಗರಾಜ್ ಹಿರೇಕುಂಬಳಗುAಟಾ (ದುಯೋಧನ), ನಾಗರಾಜ್ ಇಂಗಳಗಿ (ಶಕುನಿ), ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ಹೆಚ್.ಎಂ. ಜಗದೀಶ್‌ಸ್ವಾಮಿ ಗೋಸಬಾಳ (ಕೃಷ್ಣ), ಜವಳಗೇರಾ ಬಸವರಾಜ್ ಸ್ವಾಮಿ (ಅರ್ಜುನ, ಗಂಧರ್ವ), ವೀಣಾ ಆಧೋನಿ ( ದ್ರೌಪದಿ), ಬಿ.ಜಯಶ್ರೀ (ಭಾನಮತಿ), ಕಾಸೀಬಾಯಿ ದಾವಣಗೇರಾ (ಉತ್ತರೆ) ಹಾಗು ಡಿ.ರಾಧ (ಅನಂಗ ಪುಷ್ಪ), ಇತರರು ಪಾತ್ರ ನಿರ್ವಹಿಸಿ ಸಿಳ್ಳೆ ಚಪ್ಪಾಳೆ ಕರತಾಡನದ ಮೂಲಕ ಪ್ರೇಕ್ಷಕರಿಂದ ಮೆಚ್ಚುಗೆ ಮೆಚ್ಚುಗೆ ಪಡೆದರು. ನಂತರ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕ ಕೂಡಾ ಅಭೂತಪೂರ್ವ ಪ್ರದರ್ಶನ ಕಂಡಿತು