KDP meeting on A.13

ಗಂಗಾವತಿ: ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಅ.13 ರಂದು ಶಾಸಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 2023-24 ನೇ ಸಾಲಿನ ತಾಲೂಕು ಮಟ್ಟದಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ.) ಸಭೆಯನ್ನು ಆಯೋಜಿಸಲಾಗಿದೆ.
ಆದ್ದರಿಂದ ಗಂಗಾವತಿ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು , 2023-24 ನೇ ಸಾಲಿನ ಮೇ ಅಂತ್ಯದ ವರೆಗೆ ಸಾಧಿಸಿದ ಎಲ್ಲಾ ಯೋಜನೆಗಳ ಸಂಪೂರ್ಣ ಮಾಹಿತಿಯ ಪ್ರಗತಿ ವರದಿಯೊಂದಿಗೆ ಸಭೆಗೆ ಹಾಜರಾಗಲು ತಾ.ಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಕೋರಿರುತ್ತಾರೆ.