Dravida Defense Forum” to be launched soon.- Bhardwaj
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ದ್ರಾವಿಡ ರಕ್ಷಣಾ ವೇದಿಕೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅದರಪೂರ್ವಭಾವಿ ಸಭೆಯನ್ನು ದಿನಾಂಕ: ೧೭.೦೭.೨೦೨೩ ಸೋಮವಾರಕರೆಯಲಾಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈಗಿನ ಪೀಳಿಗೆ ಜನರಿಗೆ ನಾವು ಮೂಲ ದ್ರಾವಿಡರು ಎಂಬುವುದುಗೊತ್ತಿಲ್ಲ. ಅದರಿಂದಾಗಿ ಅವರುಗಳು ಸನಾತನ ಆರ್ಯಸಂಘಟನೆಗಳ ಜೊತೆಗೆ ಹೋಗಿ ದ್ರಾವಿಡರ ಮೇಲೆಯೇ ದಾಳಿಮಾಡುತ್ತಿದ್ದಾರೆ. ದ್ರಾವಿಡರ ಬಗ್ಗೆ ಮೂಲ ದ್ರಾವಿಡರಿಗೆ ತಿಳಿಸಿ,ದ್ರಾವಿಡ ರಕ್ಷಣಾ ಸಂಘಟನೆಯನ್ನು ಗಟ್ಟಿಗೊಳಿಸುವುದುನಮ್ಮ ಉದ್ದೇಶವಾಗಿದೆ. ಇದರ ಅಂಗವಾಗಿ ದಿನಾಂಕ: ೧೭.೦೭.೨೦೨೩ರಂದು ಬೆಳಿಗ್ಗೆ ೧೧:೦೦ ಗಂಟೆಗೆ ರಾಯಚೂರು ರಸ್ತೆಯಆಟೋನಗರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆಎಂದು ಭಾರಧ್ವಾಜ್ ತಿಳಿಸಿದ್ದಾರೆ.ಆಸಕ್ತರು ದ್ರಾವಿಡರನ್ನು ಉಳಿಸಿಕೊಳ್ಳಲು ಪೂರ್ವಭಾವಿಸಭೆಗೆ ಹಾಜರಾಗಲು ಮನವಿ ಮಾಡುತ್ತಿದ್ದೇವೆ.ಶ್ರೀ ಜೆ. ಭಾರದ್ವಾಜ್,ರಾಜ್ಯಾಧ್ಯಕ್ಷರು, ಕ್ರಾಂತಿಚಕ್ರ ಬಳಗ, ಗಂಗಾವತಿ.