Breaking News

ನ್ಯಾಯವಾದಿ ವೃತ್ತಿ ನನಗೆ ಸಂತೃಪ್ತಿ ನೀಡಿದೆ: ಬೆಂಚಮಟ್ಟಿ ಮಲ್ಲಪ್ಪ

Legal career has given me satisfaction: Benchamatti Mallappa

ಜಾಹೀರಾತು

ಗಂಗಾವತಿ: ಸೆಪ್ಟೆಂಬರ್-೧೫ ರವಿವಾರದಂದು ನಗರದ ಎಸ್.ಎಸ್.ಎಲ್.ಆರ್ ಸಭಾಂಗಣದಲ್ಲಿ ನ್ಯಾಯವಾದಿ ಬೆಂಚಮಟ್ಟಿ ಮಲ್ಲಪ್ಪನವರು ತಮ್ಮ ನ್ಯಾಯವಾದಿ ವೃತ್ತಿಯಲ್ಲಿ ೫೦ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ, ಅವರಲ್ಲಿ ಕಲಿತ ಕಿರಿಯ ವಕೀಲರು, ಅಭಿಮಾನಿಗಳು, ಕಕ್ಷಿದಾರರು, ಹಿತೈಷಿಗಳು ಸೇರಿ ಅವರಿಗೆ ಗುರುವಂದನೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಈ ಕಾರ್ಯಕ್ರಮದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಬೆಚ್ಚಮಟ್ಟಿ ಮಲ್ಲಪ್ಪ ವಕೀಲರು ನಾನು ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದಲ್ಲಿ ಜನಿಸಿ, ಗುಲ್ಬರ್ಗ ಮತ್ತು ಧಾರವಾಡದಲ್ಲಿ ಕಾನೂನು ಪದವಿಯನ್ನು ಪಡೆದು ರಾಯಚೂರಿನ ಹಿರಿಯ ನ್ಯಾಯವಾದಿಗಳು ಮತ್ತು ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕವಾದ ದಿ|| ವಿಠ್ಠಲ್‌ರಾವ್ ಅವರ ಆಫೀಸಿನಲ್ಲಿ ವೃತ್ತಿಗೆ ಸೇರುವ ಮೂಲಕ ನ್ಯಾಯವಾದಿಯಾಗಿ ಸುಮಾರು ಹತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದೆನು. ನನಗೆ ಕಾನೂನಿನ ಜ್ಞಾನ ಬೆಳೆಯಲು ಅವರ ಮಾರ್ಗದರ್ಶನವೇ ಕಾರಣ ಎಂದು ತಮ್ಮ ಗುರುಗಳನ್ನ ನೆನೆದರು. ನಿರಂತರ ಅಧ್ಯಯನ, ಪ್ರಾಮಾಣಿಕತೆ ಮತ್ತು ಬದ್ದತೆಯಿಂದ ವೃತ್ತಿಯನ್ನು ಪೂರೈಸಿದ್ದೇನೆ. ನನ್ನ ಈ ಬೆಳವಣಿಗೆಗೆ ಅಂದು ಮತ್ತು ಇಂದಿನ ಹಿರಿಯ ವಕೀಲರು, ನ್ಯಾಯಾಧೀಶರು, ಹಿತೈಷಿಗಳು, ತುಂಬಾ ವಿಶೇಷವಾಗಿ ನನ್ನ ಕಕ್ಷಿದಾರರು ಕಾರಣರಾಗಿರುತ್ತಾರೆ. ನಿಮ್ಮಗಳ ಅಭಿಮಾನಕ್ಕೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ವೃತ್ತಿಯನ್ನು ಆರಂಭಿಸಿ ೫೦ ವರ್ಷಗಳು ಕಳೆದಿದ್ದೆ ಗೊತ್ತಾಗಲಿಲ್ಲ. ಸಮಾಜಕ್ಕೆ ನನ್ನದೇ ಆದ ಅಳಿಲು ಸೇವೆಯನ್ನ ಸಲ್ಲಿಸಿದ್ದು ನನ್ನ ಕಕ್ಷಿದಾರರ ಪರವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಈ ವೃತ್ತಿಯಲ್ಲಿ ನನಗೆ ದೊರಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುವಂದನೆಯನ್ನು ಸ್ವೀಕರಿಸಿದ ಬೆಂಚಮಟ್ಟಿ ಮಲ್ಲಪ್ಪ ವಕೀಲರ ಕುರಿತು ಬೆಂಗಳೂರಿನ ಕರ್ನಾಟಕ ವಿಶೇಷ ಭೂ ಕಬಳಿಕೆ ನಿಷೇಧ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಎನ್.ಎಸ್ ಪಾಟೀಲ್ ರವರು ಗಂಗಾವತಿಯ ನ್ಯಾಯವಾದಿಗಳಾದ ನಾಗನಗೌಡ ಪಾಟೀಲ್, ಪ್ರೇಮಮೂರ್ತಿ, ಕೆ.ಆರ್ ದೇಶಪಾಂಡೆ, ವೀರೇಶಪ್ಪ ಆದಾಪುರ್, ಹಿರಿಯ ವಕೀಲರಾದ ಸಿದ್ದನಗೌಡ ಪಾಟೀಲ್, ನಾಗನಗೌಡ ಪಾಟೀಲ್, ವೈಜನಾಥಸ್ವಾಮಿ ವಕೀಲರು, ಜಿ. ವಿರೇಶಪ್ಪ ಹಾಗೂ ಬಳ್ಳಾರಿ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶೇಖರಪ್ಪ ಶಾಲಿಗನೂರು, ಶ್ರೀಮತಿ ಕವಿತಾ ಗುರುಮೂರ್ತಿ, ಶ್ರೀಮತಿ ಸೈಯದಾಬಾನು ಮುಂತಾದವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ. ವೀರಪ್ಪ, ನಿವೃತ್ತ ಮುಖ್ಯಾಧಿಕಾರಿ ನಾಗಪ್ಪ ಸೇರಿದಂತೆ, ಖ್ಯಾತ ವೈದ್ಯರಾದ ಡಾ|| ಜಿ. ಚಂದ್ರಪ್ಪ, ಗಂಗಾವತಿ ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುಸಾಲಿ, ವಕೀಲರಾದ ವೆಂಕಟೇಶ ಆದಾಪುರ, ತಿಮ್ಮಣ್ಣ ನಾಯಕ, ಬಿ. ವಿಜಯಮಹಾಂತೇಶ, ಎಸ್.ಕೆ ದಂಡಿನ್, ಚನ್ನಪ್ಪ ಮಳಗಿ, ಶರಣಪ್ಪ ಸಜ್ಜಿಹೊಲ, ಬಿ. ಆಂಜನೆಪ್ಪ, ಸೈಯ್ಯದ್ ಹಾಷ್ಮುದ್ದೀನ್ ವಕೀರಲು, ಕೆ. ಅನಂತರಾವ್, ಪಂಪನಗೌಡ, ಸರ್ಕಾರಿ ಅಭಿಯೋಜಕ ಮಂಜುನಾಥ ಬೇರಿಗಿ, ಚೌತಾಯಿ ವಕೀಲರು, ಶಿವಕುಮಾರ ಜಿ., ಹನುಮಂತರಾವ್, ರಾಜಶೇಖರ ಕಂಬಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗಂಗಾವತಿ ವಕೀಲರ ಸಂಘದ ಸದಸ್ಯರಾದ ಶ್ರೀ ನಾಗರಾಜ್ ಎಸ್ ಗುತ್ತೇದಾರರು ಕಾರ್ಯಕ್ರಮವನ್ನು ನಿರೂಪಿಸಿದರು.

About Mallikarjun

Check Also

ದೇಶದಲ್ಲಿಅಧಿಕಾರಶಾಹಿ ಪದ್ಧತಿನಿರ್ಮೂಲವಾಗಬೇಕು : ಡಾ.ಕೆ ಎಸ್ ಜನಾರ್ದನ್

Bureaucracy should be eradicated in the country: Dr. KS Janardhan ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ  …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.