Breaking News

ದೇವದಾಸಿ ಮಹಿಳಾ ಕುಟುಂಬದ ಗಣತಿ ಸಾಲದ ಸಬ್ಸಿಡಿ ಹೆಚ್ಚಳಕ್ಕೆ ಅನುದಾನವಿಲ್ಲದ ಬಜೆಟ್-ವಿಮೋಚನಾ ಸಂಘದ ಟೀಕೆ.

The budget-free liberation association criticized the increase in the subsidy for the census loan for Devadasi women’s families.

ಜಾಹೀರಾತು

ಗಂಗಾವತಿ: ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಮೊನ್ನೆ ವಿಧಾನಸಭೆಯಲ್ಲಿ ಮಂಡಿಸಿದ ೪.೦೯ ಲಕ್ಷ ಕೋಟಿ ರೂ. ಗಳ ಬಜೆಟ್ ಸಮಾಜದ ಅತ್ಯಂತ ಕಟ್ಟಕಡೆಯ ಮಹಿಳೆಯರಾದ ತೀವ್ರತರದ ಸಾಮಾಜಿಕ ದಬ್ಬಾಳಿಕೆಗೊಳಗಾದ, ದೌರ್ಜನ್ಯದ ದೇವದಾಸಿ ಪದ್ಧತಿಯಿಂದ ನಲುಗಿದ ಈ ಮಹಿಳೆಯರ ಕುಟುಂಬಗಳನ್ನು ನಿರ್ಲಕ್ಷಿಸಿದ್ದು, ಇದೊಂದು ನಿರಾಶದಾಯಕ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷರಾದ ಜಿ. ಹುಲಿಗೆಮ್ಮ ಅವರು ಪ್ರಕಟಣೆಯಲ್ಲಿ ಆಕ್ರೊಶ ವ್ಯಕ್ತಪಡಿಸಿದರು.
ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗೆ ಮತ್ತು ಆರ್ಥಿಕ ಸಬಲೀಕರಣಕ್ಕೆ ೫ ಲಕ್ಷ ರೂ.ಗಳ ಸಹಾಯಧನ ಹಾಗೂ ಐದು ಎಕರೆ ಭೂಮಿ ನೀಡಿಕೆ ವಿಚಾರ ಈಗಲೂ ಆದ್ಯತೆಯಾಗದಿರುವುದು ವಿಷಾದಕರವಾಗಿದೆ. ಬೆಲೆ ಏರಿಕೆಯ ಜೊತೆ ೧.೧೬ ಲಕ್ಷ ಕೋಟಿ ರೂಪಾಯಿ ಸಾಲದ ಬರೆಯನ್ನು ರಾಜ್ಯದ ಜನತೆಯ ಜೊತೆನಾವುಅನುಭವಿಸಬೇಕಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು. ಕೂಡಲೆ ಸರ್ಕಾರ ದೇವದಾಸಿಯರ ಸಬಲೀಕರಣಕ್ಕಾಗಿ ಅನುದಾನವನ್ನು ಇದೇ ಬಜೆಟ್‌ನಲ್ಲಿ ಪ್ರಕಟಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *