Breaking News

ಗಂಗಾವತಿಯಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ಕೇಂದ್ರ ಶೀಘ್ರ ಆರಂಭ

Koppal University Post Graduate Center in Gangavati to start soon

ಜಾಹೀರಾತು



*ಶಾಸಕರ ಅನುದಾನದಲ್ಲಿ ಹಳೆ ತಹಸೀಲ್ದ್ ಕಚೇರಿಯಲ್ಲಿ ತಾತ್ಕಲಿಕ ಸ್ನಾತಕೋತ್ತರ ಕೇಂದ್ರ


*ಸಿದ್ದತೆ ಪರಿಶೀಲಿಸಿದ ವಿವಿ ಕುಲಪತಿ*ಸದ್ಯ ಮೂರು ಕೋರ್ಸ್ ಪ್ರವೇಶ


ಗಂಗಾವತಿ: ಗಂಗಾವತಿಯ ಬಹುದಿನಗಳ ಕನಸು ಇದೀಗ ನನಸಾಗುತ್ತಿದ್ದು ಕೊಪ್ಪಳ ನೂತನ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಗರದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಶೀಘ್ರ ಆರಂಭಿಸಲಾಗುತ್ತದೆ ಎಂದು ವಿವಿ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಅವರು ನೂತನ ಸ್ನಾತಕೋತ್ತರ ಕೇಂದ್ರ ಆರಂಭಿಸಲು ತಾತ್ಕಲಿಕವಾಗಿ ಹಳೆಯ ತಹಸೀಲ್ದಾರ್ ಕಚೇರಿಯ ಕಟ್ಟಡ ದುರಸ್ಥಿ ಕಾರ್ಯ ವೀಕ್ಷಿಸಿ ಮಾತನಾಡಿದರು.
ಕೊಪ್ಪಳ ವಿವಿಯಿಂದ ಪ್ರಥಮ ಸ್ನಾತಕೋತ್ತರ ಕೇಂದ್ರವನ್ನು ಗಂಗಾವತಿಯಲ್ಲಿ ಆರಂಭಿಸಲಾಗುತ್ತಿದ್ದು ಸ್ಥಳೀಯ ಶಾಸಕ ಗಾಲಿ ಜನಾರ್ದನರೆಡ್ಡಿ ಆಸಕ್ತಿಯ ಮೇರೆ ಸದ್ಯ ಹಳೆಯ ತಹಸೀಲ್ದಾರ್ ಕಚೇರಿಯ ಕಟ್ಟಡವನ್ನು ದುರಸ್ತಿಗೊಳಿಸಲಾಗುತ್ತಿದ್ದು ಇದೇ ಶೈಕ್ಷಣಿಕ ವರ್ಷದಿಂದ ತರಗತಿಗಳು ಎರಡು ತಿಂಗಳ ಮಟ್ಟಿಗೆ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ನಡೆಸುವಂತೆ ಶಾಸಕರು ಸೂಚನೆ ನೀಡಿದ್ದು ಅವರ ಅನುದಾನದಲ್ಲಿ ಹಳೆಯ ತಹಸೀಲ್ದಾರ್ ಕಚೇರಿಯ ಕಟ್ಟಡ ದುರಸ್ತಿ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಂಕಾA, ಇಂಗ್ಲೀಷ್ ಹಾಗೂ ಕನ್ನಡ ವಿಷಯದಲ್ಲಿ ಪಿಜಿಕೋರ್ಸ್ಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಪ್ರವೇಶ ನೀಡಲಾಗಿದೆ. ಎಂಕಾಂ ಗೆ ೫೦ ಉಳಿದ ವಿಷಯಗಳಿಗೆ ೪೦ ವಿದ್ಯಾರ್ಥಿಗಳಂತೆ ಪ್ರವೇಶ ನೀಡಲಾಗಿದ್ದು ಈಗಾಗಲೇ ಬೋಧಕ-ಬೋಧಕೇತರ ಹುದ್ದೆ ಭರ್ತಿ ಮಾಡಲಾಗಿದ್ದು ಶೀಘ್ರ ಪಾಠ ಪ್ರವಚನಗಳು ಆರಂಭವಾಗಲಿವೆ. ಮುಂಬರುವ ದಿನಗಳಲ್ಲಿ ಸರಕಾರದಿಂದ ಭೂಮಿ ಹಾಗೂ ಅನುದಾನ ಮಂಜೂರಿ ಮಾಡಿಸಿ ಸುಸಜ್ಜಿತ ಪಿಜಿ ಕೇಂದ್ರ ಆರಂಭಿಸಲು ಶಾಸಕರು,ಜಿಲ್ಲಾ ಉಸ್ತುವಾರಿ ಸಚಿವರು ಹಾಲಿ ಮಾಜಿ ಜನಪ್ರತಿನಿಧಿಗಳ ಸಹಕಾರ ಪಡೆದು ಗಂಗಾವತಿಯಲ್ಲಿ ಅತ್ಯುತ್ತಮ ಪಿಜಿಮ ಕೋರ್ಸ್ ಕೇಂದ್ರ ಕಾರ್ಯ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ.ಜಾಜಿ ದೇವೆಂದ್ರಪ್ಪ, ಪ್ರೋ.ಕರಿಗೂಳಿ, ಉಪನ್ಯಾಸಕರಾದ ರಾಘವೇಂದ್ರ, ತಾಯಪ್ಪ, ಪಂಚಾಕ್ಷರಿ ಹಿರೇಮಠ, ಖಾಜವಲಿ ಸೇರಿ ಅನೇಕರಿದ್ದರು.

About Mallikarjun

Check Also

ಕಾಡಂಚಿನ ಗ್ರಾಮಗಳನ್ನು ನಾವು ತೊರೆಯುವುದಿಲ್ಲ :ರಾಜ್ಯ ರೈತ ಸಂಘ ಸರ್ಕಾರಕ್ಕೆ ಎಚ್ಚರಿಕೆ .

We will not leave forested villages: State farmers’ association warns the governmen ವರದಿ : ಬಂಗಾರಪ್ಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.