Breaking News

ಪಿಂಚಣಿ ದಿನ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ

Launch of Pension Day and Pension Adalat programme

ಜಾಹೀರಾತು

ಕೂಡ್ಲಿಗಿ:ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು ಎಂದು ಗ್ರೇಡ್ 2 ತಹಸೀಲ್ದಾರ್ ವಿ. ಕೆ.ನೇತ್ರಾವತಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಪಿಂಚಣಿ ದಿನ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಯೋಜನೆಗಳು ಅತ್ಯಂತ ಸರಳ ಹಾಗೂ ಪಾರದರ್ಶಕವಾಗಿದ್ದು ಸೌಲಭ್ಯಗಳನ್ನು ಪಡೆಯಲು ಮಧ್ಯವರ್ತಿಗಳನ್ನು ನಂಬಬೇಡಿ. ನಿಮಗೆ ಯಾವುದೇ ಮಾಹಿತಿಗಳು ಬೇಕಾದಲ್ಲಿ ನಿಮ್ಮ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಚೇರಿಯಲ್ಲಿ ಖುದ್ದಾಗಿ ನನ್ನ ಭೇಟಿ ಮಾಡಿ ಕಡಿಮೆ ಖರ್ಚಿನಲ್ಲಿ ಉಚಿತ ಸೌಲಭ್ಯಗಳನ್ನು ಪಡೆಯುವಂತೆ ಕೋರಿದರು.

ಹಿಂದುಳಿದ ತಾಲೂಕಿನಲ್ಲಿ ಅನಕ್ಷರಸ್ಥರ ಸಂಖ್ಯೆ ಜಾಸ್ತಿ ಇದೆ. ಇದನ್ನೆ ದಾಳವಾಗಿಸಿಕೊಂಡ ಕೆಲವರು ಸರ್ಕಾರದ ಸೌಲಭ್ಯಗಳನ್ನು ಕೊಡಿಸುತ್ತೆವೆ ಎಂದು ಹೆಚ್ಚಿನ ಹಣದ ಆಮಿಷ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಮಧ್ಯವರ್ತಿಗಳ ಉಪಟಳ ಜಾಸ್ತಿಯಾಗಿದೆ. ಆದ್ದರಿಂದ ಯಾವುದೆ ಅರ್ಜಿದಾರರು ಮಧ್ಯವರ್ತಿಗಳನ್ನು ನಂಬದೆ ನೇರವಾಗಿ ನನ್ನ ಭೇಟಿ ಮಾಡಿ ಸರ್ಕಾರದ ನಿಯಮದಂತೆ ದಾಖಲೆಗಳನ್ನು ಸಲ್ಲಿಸಿದರೆ 45 ದಿನಗಳ ಗಡುವು ಇದ್ದರು ಸಹ ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೌಕರ್ಯಗಳನ್ನು ಒದಗಿಸುತ್ತೆವೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈ ಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು.

ಕಂದಾಯ ಇಲಾಖೆಯಿಂದ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ವೇತನ ಮುಂತಾದ ಹಲವು ಪಿಂಚಣಿ ಯೋಜನೆ ಅರ್ಹರಿಗೆ ತಲುಪಿಸಲು ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಮಾತನಾಡಿ, ಕೂಲಿ ಹಾಗೂ ಕೃಷಿಕರೇ ಹೆಚ್ಚಾಗಿರುವ ಈ ತಾಲೂಕಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ದಕ್ಷ ಅಧಿಕಾರಿಗಳು ಇಂತಹ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯ, ಅಮಾಯಕ ಜನರು ತಮ್ಮ ಕೆಲಸ ಕಾರ್ಯಗಳಿಗೆ ದುಪ್ಪಟ್ಟು ಹಣ ನೀಡಿ ಸರ್ಕಾರದ ಉಚಿತ ಸೌಲಭ್ಯಗಳನ್ನು ಪಡೆಯುತ್ತಿರುವುದು ವಿಷಾದನೀಯ.

ಮುಂಬರುವ ದಿನಗಳಲ್ಲಿ ಪಪಂ ವತಿಯಿಂದ ವಾರ್ಡ್ ಸಭೆಗಳನ್ನು ಆಯೋಜಿಸಲಾಗುವುದು ಅದರಲ್ಲಿ ತಾಲೂಕು ಆಡಳಿತದ ಸೌಲಭ್ಯಗಳನ್ನು ಸಹ ಒದಗಿಸಲು ತಹಸೀಲ್ದಾರ್ ಅವರನ್ನು ಕರೆದು ಸ್ಥಳದಲ್ಲಿಯೇ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲು ಮುಂದಾಗುವುದಾಗಿ ತಿಳಿಸಿದರು. ಇದೇ ಸಂಧರ್ಭದಲ್ಲಿ ರಾಷ್ಟ್ರೀಯ ಭದ್ರತಾ ಯೋಜನೆ ಹಾಗೂ ಅಂಗವಿಕಲ ಮತ್ತು ಸಂಧ್ಯಾ ಸುರಕ್ಷ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಶುಕೂರ್, ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಪಪಂ ಸದಸ್ಯರಾದ ಕೆ.ಈಶಪ್ಪ, ಬಾಸೂ ನಾಯ್ಕ್, ಪೂರ್ಯಾ ನಾಯ್ಕ್, ಮುಖಂಡರಾದ ಢಾಣಿ ರಾಘವೇಂದ್ರ, ಸಣ್ಣ ಕೊತ್ಲಪ್ಪ, ರಮೇಶ್ ಸೇರಿದಂತೆ ಅನೇಕರು ಇದ್ದರು.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.