Breaking News

ಸೂರ್ಯ ಜಗತ್ತಿನ ಈ 6 ದೇಶಗಳಲ್ಲಿ ಮುಳುಗುವುದೇ ಇಲ್ಲ

The sun never sets in these 6 countries of the world

.

ಸೂರ್ಯ ಮುಳುಗದ ಸ್ಥಳಗಳ ಬಗ್ಗೆ ನಿಮಗೆ ತಿಳಿದಿದೆಯೇ? ಜಗತ್ತಿನಲ್ಲಿ 70 ದಿನಗಳಿಗಿಂತ ಹೆಚ್ಚು ಕಾಲ ಸೂರ್ಯ ಮುಳುಗದ ಕೆಲವು ಸ್ಥಳಗಳಿವೆ. ಇದು ಆಶ್ಚರ್ಯವಾದ್ರೂ ಸತ್ಯ. ಸೂರ್ಯ ಎಂದಿಗೂ ಅಸ್ತಮಿಸದ ದೇಶಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

ಆರ್ಕ್ಟಿಕ್ ವೃತ್ತದಲ್ಲಿರುವ ನಾರ್ವೆಯನ್ನು ಮಿಡ್ನೈಟ್ ಸನ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅಂದರೆ ಮೇ ನಿಂದ ಜುಲೈ ಅಂತ್ಯದವರೆಗೆ ಸೂರ್ಯನು ಅಸ್ತಮಿಸದ ದೇಶ. ಇಲ್ಲಿ ಸೂರ್ಯನು 76 ದಿನಗಳವರೆಗೆ ಬೆಳಗುತ್ತಾನೆ. ನಾರ್ವೆಯ ಸ್ವಾಲ್ಬಾರ್ಡ್‌’ನಲ್ಲಿಯೂ ಸಹ ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯ ಮುಳುಗುವುದಿಲ್ಲ

ಆರ್ಕ್ಟಿಕ್ ವೃತ್ತದಲ್ಲಿರುವ ನಾರ್ವೆಯನ್ನು ಮಿಡ್ನೈಟ್ ಸನ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅಂದರೆ ಮೇ ನಿಂದ ಜುಲೈ ಅಂತ್ಯದವರೆಗೆ ಸೂರ್ಯನು ಅಸ್ತಮಿಸದ ದೇಶ. ಇಲ್ಲಿ ಸೂರ್ಯನು 76 ದಿನಗಳವರೆಗೆ ಬೆಳಗುತ್ತಾನೆ. ನಾರ್ವೆಯ ಸ್ವಾಲ್ಬಾರ್ಡ್‌’ನಲ್ಲಿಯೂ ಸಹ ಏಪ್ರಿಲ್ 10 ರಿಂದ ಆಗಸ್ಟ್ 23 ರವರೆಗೆ ಸೂರ್ಯ ಮುಳುಗುವುದಿಲ್ಲ.

ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ಆರ್ಕ್ಟಿಕ್ ವೃತ್ತದಿಂದ ಎರಡು ಡಿಗ್ರಿಗಳಷ್ಟು ಎತ್ತರದಲ್ಲಿರುವ ನುನಾವುತ್ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸುಂದರವಾದ ನಗರವಾಗಿದೆ. ಈ ನಗರದಲ್ಲಿ ವರ್ಷದ ಎರಡು ತಿಂಗಳು ಸೂರ್ಯ ಮುಳುಗೋದೇ ಇಲ್ಲ.

ಗ್ರೇಟ್ ಬ್ರಿಟನ್ ನಂತರ ಐಲ್ಯಾಂಡ್ ಯುರೋಪಿನ ಅತಿದೊಡ್ಡ ದ್ವೀಪವಾಗಿದೆ. ಈ ದೇಶದಲ್ಲಿ ನೀವು ಒಂದೇ ಒಂದು ಸೊಳ್ಳೆಯನ್ನೂ ನೋಡಲು ಸಾಧ್ಯವಿಲ್ಲ. ದೇಶವಾಗಿದೆ. ಇನ್ನು ಐಲ್ಯಾಂಡಲ್ಲಿ ಜೂನ್ ತಿಂಗಳಲ್ಲಿ ಸೂರ್ಯ ಎಂದಿಗೂ ಅಸ್ತಮಿಸುವುದಿಲ್ಲ. ಮತ್ತು ರಾತ್ರಿಯಲ್ಲಿ ಸಹ ಹಗಲಿನಂತೆ ತೋರುತ್ತದೆ.

ಈ ನಗರವು ಅಲಾಸ್ಕಾದಲ್ಲಿದೆ. ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಸೂರ್ಯನು ಬಾರೋದಲ್ಲಿ ಅಸ್ತಮಿಸುವುದಿಲ್ಲ. ಆದರೆ ನವೆಂಬರ್ ಆರಂಭದಲ್ಲಿ 30 ದಿನಗಳವರೆಗೆ ಕತ್ತಲೆಯಾಗಿ ಉಳಿಯುತ್ತದೆ. ಇದನ್ನು ಧ್ರುವ ರಾತ್ರಿಗಳು ಎಂದೂ ಕರೆಯುತ್ತಾರೆ.

ಸಾವಿರಾರು ಸರೋವರಗಳು ಮತ್ತು ದ್ವೀಪಗಳ ಭೂಮಿ, ಫಿನ್ಲೆಂಡ್’ನ ಹೆಚ್ಚಿನ ಭಾಗವು ಬೇಸಿಗೆಯಲ್ಲಿ ಕೇವಲ 73 ದಿನಗಳವರೆಗೆ ಸೂರ್ಯನನ್ನು ನೋಡುತ್ತದೆ. ಆದರೆ, ಚಳಿಗಾಲದ ಸಮಯದಲ್ಲಿ ಕತ್ತಲೆ ಇರುತ್ತದೆ. ಡಿಸೆಂಬರ್ ಮತ್ತು ಜನವರಿ ವರೆಗೆ ಈ ಪರಿಸ್ಥಿತಿಯನ್ನು ಕಾಣಬಹುದು.

ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ, ಸ್ವೀಡನ್‌’ನಲ್ಲಿ ಮಧ್ಯರಾತ್ರಿಯ ಸುಮಾರಿಗೆ ಸೂರ್ಯ ಮುಳುಗುತ್ತಾನೆ. ಮತ್ತು ಬೆಳಿಗ್ಗೆ 4 ಗಂಟೆಗೆ ಹಗಲಾಗುತ್ತದೆ. ವರ್ಷದ ಆರು ತಿಂಗಳ ಕಾಲ ಇಲ್ಲಿ ಬೆಳಕಾಗೇ ಇರುತ್ತದೆ ಎಂದು ತಿಳಿದು ಬರತ್ತದೆ.

About Mallikarjun

Check Also

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬಲಿಷ್ಠವಾಗಿದೆಗ್ಯಾರಂಟಿ ಯೋಜನೆಗಳು ಆರ್ಥಿಕ ಶಕ್ತಿಗೆ ಪೂರಕ: ಮಾಜಿ ಸಂಸದ ಹೆಚ್.ಜಿ ರಾಮುಲು

Congress led by CM Siddaramaiah is strongGuarantee schemes complement economic power: Former MP HG Ramulu …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.