Breaking News

ಎ.ಪಿ.ಎಮ್.ಸಿ ಕೌಂಪಡ ಭೂವಿ ಪೂಜೆ: ಕಾರ್ಯಕರ್ತರಿಗಾಗಿ ಕಾಯ್ದು ಕುಳಿತಶಾಸಕರು

APMC Koumpada Bhuvi Puja: MLAs waiting for activists

ಸಾವಳಗಿ: ಭೂಮಿ ಪೂಜಾ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹೈಡ್ರಾಮ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಿಗೆ ಹಾಗೂ ಕಾರ್ಯಕರ್ತರು ಮತ್ತು ಪತ್ರಕರ್ತರಿಗೆ ಹೇಳದೆ ಏಕಾಏಕಿ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಲು ಮುಂದಾದರು.

ಹೌದು ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಮಖಂಡಿ 2023-24ನೇ ಸಾಲಿನ ಆರ್ ಐ ಡಿ ಎಫ್-29 ಯೋಜನೆ ಅಡಿಯಲ್ಲಿ ಮಂಜೂರಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಮಖಂಡಿ ಉಪ ಮಾರುಕಟ್ಟೆ ಸಾವಳಗಿ ಪ್ರಾಂಗಣಕ್ಕೆ ಕಾಂಪೌಂಡ್ ಗೋಡೆ ನಿರ್ಮಾಣದ ಕಾಮಗಾರಿ ಅಂದಾಜು ಮೊತ್ತ 69.43 ಲಕ್ಷ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ಜಗದೀಶ ಗುಡುಗುಂಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರೊಬ್ಬರು ಶಾಸಕರಿಗೆ ಪ್ರಶ್ನಿಸಿದರು. ಸ್ಥಳೀಯ ನಿಮ್ಮ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿಲ್ಲ ಇನ್ನೂ ಪತ್ರಿಕೆಗಳಲ್ಲಿ ಸುದ್ದಿ ಬರಲಿಲ್ಲ ಎಂದರೆ ನೀವು ಕಾಂಗ್ರೆಸ್ ಪಕ್ಷದವರು ಎಂದು ಹೇಳುತ್ತಿರಿ ಆದರೆ ನಮಗೆ ಕಾರ್ಯಕ್ರಮದ ಆಹ್ವಾನ ಇಲ್ಲದೇ ಹೇಗೆ ಸುದ್ದಿಯನ್ನು ಬಿತ್ತರಿಸಬೇಕೆಂದರು. ಸಾವಳಗಿ ಭಾಗದಲ್ಲಿ ಸುದ್ದಿ ಮಾಡುವವರು ಯಾರು ಇಲ್ವಾ, ನೀವು ತಾಲ್ಲೂಕಿನ ಪತ್ರಕರ್ತರನ ಯಾಕೆ ಕರೆದುಕೊಂಡು ಬರುತ್ತಿರಾ ಇದರಿಂದ ಗ್ರಾಮೀಣ ಹಾಗೂ ನಗರ ಪತ್ರಕರ್ತರಿಗೆ ವೈಮನಸ್ಸು ಮುಡಿಸುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲಾ.

ಇದನ್ನು ಎಲ್ಲವೂ ನೋಡಿದರೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದೆ.

ನಂತರ ಸ್ವಪಕ್ಷದ ಕಾರ್ಯಕರ್ತರಿಗೆ ಹಾಗೂ ಗ್ರಾಮ ಪಂಚಾಯತ ಸದಸ್ಯರಿಗೆ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಪೋನ ಮೂಲಕ ಕರೆಯುತ್ತಿದ್ದಂತೆ ನಾವ ಯಾರೂ ಬರಲ್ಲಾ, ನಮ್ಮ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ, ಏನರೇ ಕೇಳಿದರೆ, ನಮ್ಮ ಮತಕ್ಷೇತ್ರದ ಸಮಸ್ಯೆ ಬೇರೆ ಮತಕ್ಷೇತ್ರದ ಶಾಸಕರ ಹೋಗಿ ಹೇಳಿ ಬಗ್ಗೆ ಹರಿಸಿಕೊಳ್ಳಬೇಕಾ.
ನಾವುಗಳು ಯಾವ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರಲ್ಲಾ ಎಂದು ಪಟ್ಟು ಹಿಡಿದು 2 ತಾಸಿಗೂ ಅಧಿಕ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಕುಳಿತುಕೊಂಡಿದ್ದರು.

ಮುಂಜಾನೆ 11 ಘಂಟೆಗೆ ಆಗಮಿಸಿದ ಶಾಸಕರು ಕಾಯ್ದು ಕಾಯ್ದು ಸುಸ್ತಾಗಿ ನೀವು ಬರಲಿಲ್ಲ ಎಂದರೆ ನಾವು ಸೀದಾ ಜಮಖಂಡಿಗೆ ಹೊಗುತ್ತೇನೆ ಎಂದಾಗ ಯಾರು ಉತ್ತರಿಸಲಿಲ್ಲಾ ಕೊನೆಯ ಪಕ್ಷ ನಿಮ್ಮ ಸಮಸ್ಯೆ ಅರಿತು ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ ಕಾರ್ಯಕ್ರಮಕ್ಕೆ ಬನ್ನಿ ಎಂದರು ಕಾರ್ಯಕರ್ತರು ಯಾರು ಬರಲಿಲ್ಲ ನಂತರ ಶಾಸಕರ ಹತ್ತಿರ ಇದ್ದ ನಾಲ್ಕೈದು ಜನರಷ್ಟೇ ಕೂಡಿಕೊಂಡು ಕಾರ್ಯಕ್ರಮವನ್ನು ಮುಕ್ತಾಯ ಮಾಡಿದರು. ನಂತರ ಪಟ್ಟು ಹಿಡಿದ ಕುಳಿತ ಕಾರ್ಯಕರ್ತರನ್ನು ಭೇಟಿಯಾಗಲು ಪ್ರವಾಸಿ ಮಂದಿರದಲ್ಲಿ ಕರೆಯಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೆನೆ ನಿಮಗೆ ಸ್ಪಂದಿಸುತ್ತೆನೆ ಎಂದು ಕಾರ್ಯಕರ್ತರಿಗೆ ತಿಳಿಸಿ ಹೋದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.