Breaking News

ಕನಕಗಿರಿ ವಿಧಾನಸಭಾ ಕ್ಷೇತ್ರದ ಗಾಳೆಮ್ಮಗುಡಿಕ್ಯಾಂಪ್ ನಿವಾಸಿಗಳಿಂದಮತದಾನ ಬಹಿಷ್ಕಾರ

From the residents of Galemmagudicamp of Kanakagiri Assembly Constituency
Boycott

ಗಂಗಾವತಿ: ತಾಲೂಕಿನ ಮರಳಿ ಹೋಬಳಿಯ ಭಟ್ಟರ ಹಂಚಿನಾಳ ಏರಿಯಾ ವ್ಯಾಪ್ತಿಗೆ ಬರುವ ಕನಕಗಿರಿ ವಿಧಾನಸಭಾ ಕ್ಷೇತ್ರದ ಗಾಳೆಮ್ಮಗುಡಿಕ್ಯಾಂಪ್ ನಿವಾಸಿಗಳು ಪ್ರಸ್ತುತ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಗ್ರಾಮದ ಮುಖಂಡರು, ಹೇರೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಜೇಶಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಗಾಳೆಮ್ಮಗುಡಿ ಕ್ಯಾಂಪ್‌ನಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಕಾನೂನು ಬದ್ಧವಾದ ನಿವೇಶನ ಹಕ್ಕು ಪತ್ರಗಳನ್ನು ಕೊಡದೇ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದಿಲ್ಲ. ಈ ಕುರಿತು ಈಗಾಗಲೇ ಜನಪ್ರತಿನಿಧಿಗಳಿಗೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಆದ್ದರಿಂದ ಈ ಬಾರಿ ಗಾಳೆಮ್ಮಗುಡಿಕ್ಯಾಂಪ್ ನಿವಾಸಿಗಳು ಒಟ್ಟಾಗಿ ಸೇರಿ ಪ್ರಸ್ತುತ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಿನ ನಿವಾಸಿಗಳಾದ ಸಿ. ನರಸಿಂಹಲು, ಕೆ. ಹುಸೇನಪ್ಪ, ಬಿ. ರವಿಕುಮಾರ್, ಬಜ್ಜಪ್ಪ, ಬಿ. ಜೇಮಿಸ್, ಬಂಡಿ ಇಂಜಪ್ಪ, ಹಿರಿಯರಾದ ಸಿ. ನರಸಪ್ಪ, ಎಂ. ನರಸಿಂಹಲು, ದಾನೇಲು, ಜಿ. ಆನಂದ ಸೇರಿದಂತೆ ಅನೇಕ ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.