Breaking News

ಬಿಜೆಪಿ ಕಚೇರಿ ಬದಲಾವಣೆ ನಿರ್ಧಾರ ಇಲ್ಲಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಹೇಳಿಕೆ

BJP office change decision Illyuvamorcha president Venkatesh’s statement


ಗಂಗಾವತಿ,12:ನಗರದ ಈಗ ಇರುವ ಬಿಜೆಪಿ ಕಾರ್ಯಾಲವನ್ನು ಬದಲಾವಣೆ ಮಾಡಬೇಕೆಂದು ಪಕ್ಷದ ಮುಖಂಡ ರವಿ ಬಸಾಪಟ್ಟಣ ಹೇಳಿಕೆ ನೀಡಿದ್ದಾರೆ.

ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಕಚೇರಿಯನ್ನು ಬದಲಾವಣೆ ಮಾಡುವ ನಿರ್ಧಾರ ಪಕ್ಷದಲ್ಲಿ ಆಗಿಲ್ಲ. ಮತ್ತು ಕಚೇರಿ ಬದಲಾವಣೆ ಮಾಡಬೇಕೆಂದು ಹೇಳಿಕೆ ನೀಡಿರುವವರು ಮೊದಲು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಯುವ ಮೋರ್ಚಾ ನಗರ ಅಧ್ಯಕ್ಷ ವೆಂಕಟೇಶ ಕೆ ಹೇಳಿದ್ದಾರೆ.

ಈ ಕುರಿತು ಅವರು ಮಾಧ್ಯಗಳ ಮೂಲಕ ಕಚೇರಿ ಬದಲಾವಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಣ್ಣ ಮುನವಳ್ಳಿ ಅವರು ಶಾಸಕರಾಗುವ ಮೊದಲು ಪಕ್ಷದ ಹಿರಿಯರೆಲ್ಲರು ಸೇರಿ ಕೊಪ್ಪಳ ರಸ್ತೆಯಲ್ಲಿ ಪಕ್ಷದ ಕಾರ್ಯಾಲಯ ಮಾಡಿದ್ದರು. ನಂತರ ಪರಣ್ಣ ಅಣ್ಣ ಅವರು ಶಾಸಕರಾದ ನಂತರ ಎಲ್ಲರ ತಿರ್ಮಾನದಂತೆ ಅವರ ಖಾಸಗಿ ಕಚೇರಿ ಇರುವ ಜಾಗದಲ್ಲಿ ಪಕ್ಷದ ಕಚೇರಿ ಮಾಡಿದ್ದಾರೆ. ಇದು ಪಕ್ಷದ ಎಲ್ಲರ ತಿರ್ಮಾನವಾಗಿದೆ. ಈಗ ಇರುವ ಕಚೇರಿಯಿಂದಲೇ ಕಳೆದ ಐದು ವರ್ಷದಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳು ನಡೆದಿವೆ. ಮತ್ತು ಈಗಲೂ ಕೂಡಾ ಪಕ್ಷದ ಸಂಘಟನಾತ್ಮಕ ಕಾರ್ಯಗಳು ಇಲ್ಲಿ ನಡೆಯುತ್ತಿವೆ. ಮಾಜಿ ಶಾಸಕರಾಗಿರುವ ಪರಣ್ಣ ಮುನವಳ್ಳಿ ಅವರು ಸ್ವ ಮನಸ್ಸಿನಿಂದ ಪಕ್ಷದ ಕಾರ್ಯ ಚಟುವಟಿಕೆ ನಡೆಸಲು ಒಂದು ರೂಪಾಯಿ ಬಾಡಿಗೆ ಪಡೆಯದೇ ಕಚೇರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಗ ಇರುವ ಕಚೇರಿ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರಿಗೆ ಅನುಕೂಲವಾಗಿದೆ. ಮತ್ತು ಇನ್ನು ನಗರ ಮತ್ತು ತಾಲೂಕು ಘಟಕಗಳು ಮತ್ತಿತರ ನೂತನ ಪದಾಧಿಕಾರಿಗಳ ಆಯ್ಕೆ ಕೂಡಾ ಆಗಿಲ್ಲ. ಇಂತಹ ಸಂದರ್ಭದಲ್ಲಿ ದಿಡೀರ್ ಪಕ್ಷದ ಕಚೇರಿ ಬದಲಾವಣೆ ಮಾಡಬೇಕೆಂಬುದು ಸರಿಯಲ್ಲ. ಈಗ ಇರುವ ಕಚೇರಿಯಿಂದ ಪಕ್ಷಕ್ಕೆ ಮತ್ತು ಪಕ್ಷದ ಸಂಘಟನೆಗೆ ಯಾವುದೇ ಅಡ್ಡಿಯಾಗಿಲ್ಲ. ಕಚೇರಿಯ ಎಲ್ಲಾ ಖರ್ಚು ವೆಚ್ಚಗಳನ್ನು ಮತ್ತು ಅಲ್ಲಿ ನಡೆಯುವ ಸಭೆ ಮತ್ತಿತರ ಕಾರ್ಯಕ್ರಮಗಳ ವ್ಯವಸ್ಥೆಯನ್ನು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ನಿರ್ವಹಿಸುತ್ತಿದ್ದಾರೆ. ಪಕ್ಷದ ಮೇಲೆ ಯಾವುದೇ ಹೊರೆಯಾಗುತ್ತಿಲ್ಲ. ಹೀಗಾಗಿ ಈಗ ಇರುವ ಬಿಜೆಪಿ ಕಚೇರಿಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ಕಾರ್ಯಾಲಯ ಬದಲಾಯಿಸಬೇಕೆಂದು ಅನವಶ್ಯಕವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಬದಲು ಎಲ್ಲರು ಪಕ್ಷ ಸಂಘಟನೆಗೆ ಒತ್ತು ಕೊಡಬೇಕಸು. ಇನ್ನು ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಕಾರ್ಯಕರ್ತರು, ಪದಾಧಿಕಾರಿಗಳಿಗೆ ಕೆಲಸ ಮಾಡಲು ಎಲ್ಲರು ಉತ್ಸಾಹ ತುಂಬಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಈ ದೇಶವನ್ನು ಮುನ್ನಡೆಸಬೇಕಿದೆ. ಹೀಗಾಗಿ ಎಲ್ಲರು ಪಕ್ಷ ಸಂಘಟನೆಗೆ ಸಲಹೆ ನೀಡಬೇಕು ಎಂದು ವೆಂಕಟೇಶ ಕೆ ಕೊರಿದ್ದಾರೆ.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.