Breaking News

ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಷಕರ ಸಭೆ .

Bandli Government Senior Primary School Parents Meeting.


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ಶಾಲೆಯ ಶಿಕ್ಷಕರು,ಮಕ್ಕಳು ಪೋಷಕರನ್ನು ಹೂ ನೀಡುವುದರೊಂದಿಗೆ ಬರಮಾಡಿಕೊಂಡು. ಗಿಡಕ್ಕೆ ನೀರೆರೆಯುವುದರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುವ ಸಂಬಂಧ ಶಿಕ್ಷಕರು ಪೋಷಕರು ಹಾಗೂ ಇಲಾಖೆಯ ಪಾತ್ರ ಕುರಿತಾಗಿ ಇದೆ ವೇಳೆ ಸಂವಾದವನ್ನು ಏರ್ಪಡಿಸಲಾಗಿತ್ತು… ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ರಶ್ಮಿರವರು ನಡೆಸಿಕೊಟ್ಟರು.. ಮಕ್ಕಳ ಕಲಿಕೆಯ ಕುರಿತು ಇರುವ ಸಮಸ್ಯೆಗಳು ಹಾಗೂ ವಾಸ್ತವಿಕ ಸವಾಲುಗಳು ಇದೆ ಸಂಬಂಧ ಪೋಷಕರು ಹಾಗೂ ಶಿಕ್ಷಕರು ಮತ್ತು ಇಲಾಖೆಯ ಜವಾಬ್ದಾರಿಗಳ ಕುರಿತಾಗಿ ಮಾಹಿತಿಯನ್ನು ಶಿಕ್ಷಕರಾದ ಗುರುಸ್ವಾಮಿ ಹಂಚಿಕೊಂಡರು… ಶಿಕ್ಷಣ ಸಂಯೋಜಕರಾದ ಶ್ರೀ ಚಿನ್ನಪ್ಪಯ್ಶನವರು ಮಾತನಾಡಿ ಬಾಲಕಾರ್ಮಿಕ ಪದ್ಧತಿ ಹಾಗೂ ತಂಬಾಕು ನಿರ್ಮೂಲನೆ ಕುರಿತು ಮಾಹಿತಿಯನ್ನು ಪೋಷಕರೊಂದಿಗೆ ಹಂಚಿಕೊಂಡು ಮಕ್ಕಳ ನಿಧಾನ ಗತಿ ಕಲಿಕೆಗೆ ಕಾರಣಗಳು, ಮಕ್ಕಳ ಖಿನ್ನತೆಗೆ ಕಾರಣಗಳು, ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಇಲಾಖೆಯ ಯೋಜನೆಗಳು, ಶಿಕ್ಷಕರು ಮತ್ತು ಮಕ್ಕಳ ನಡುವಿನ ಸಂಬಂಧ ಕುರಿತು ನೆರೆದಿದ್ದ ಪೋಷಕರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು, ಸರ್ಕಾರಿ ಶಾಲೆಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಕರನ್ನು ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಎಂದು ತಿಳಿಸಿದರು…ಮಕ್ಕಳಿಗೆ ಶಿಕ್ಷಣ ಬಹಳ ಅಮೂಲ್ಯವಾದದ್ದು ಎಂದು ತಿಳಿಸಿದ ಅವರು ,ತಮ್ಮ ದಿನ ನಿತ್ಯದ ಕೆಲಸಗಳನ್ನು ಬದಿಗೊತ್ತಿ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಬಂದಿರುವ ಪೋಷಕರನ್ನು ಅಭಿನಂದಿಸಿದರು.. ಇಂದಿನ ಮಕ್ಕಳಿಗೆ ಶಿಕ್ಷಣವೇ ಆಸ್ತಿ… ಇಂತಹ ದೊಡ್ಡ ಆಸ್ತಿಯನ್ನು ಮಕ್ಕಳಿಗೆ ನೀಡುವಂತೆ ಪೋಷಕರಲ್ಲಿ ಮನವಿ ಮಾಡಿದರಲ್ಲದೇ ತಮ್ಮ ಮಕ್ಕಳ ಕಲಿಕೆಯ ನಿರಂತರ ಮಾಹಿತಿಯನ್ನು ಪಡೆಯಲು ಪದೇಪದೇ ಶಾಲೆಗೆ ಭೇಟಿ ನೀಡಬೇಕಾಗಿ ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಪ್ರದೀಪ್ ಕುಮಾರ್ ,ಸಿದ್ದರಾಜು. ಮಾಲತಿ ಹಾಜರಿದ್ದರು .

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.