Tipaturu: Leave the minister seat or leave the district – MLA K Shadakshari direct attack.
‘ತಿಪಟೂರನ್ನು ಜಿಲ್ಲೆಯನ್ನಾಗಿಸಲು ಯಾವ ತ್ಯಾಗ ಮಾಡಲು ಸಿದ್ಧ. ಯಾವುದೇ ಕಾರಣಕ್ಕೂ ಇತರೆ ತಾಲ್ಲೂಕುಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು
ಆಡಳಿತ, ಅಭಿವೃದ್ಧಿ ಹಿತದೃಷ್ಟಿಯಿಂದ ತುಮಕೂರು ಜಿಲ್ಲೆಯನ್ನು ಇಬ್ಬಾಗ ಮಾಡಿ ತಿಪಟೂರನ್ನು ಜಿಲ್ಲಾ ಕೇಂದ್ರವನ್ನು ಘೋಷಣೆ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಇತರರು ತಾಲ್ಲೂಕು ಕೇಂದ್ರವನ್ನು ಜಿಲ್ಲೆ ಮಾಡಲಿ ಎಂಬ ಹಂಬಲ ಹೊಂದಿದ್ದಾರೆ. ಮಧುಗಿರಿ ರಾಜಣ್ಣ ಸಹ ಸ್ಪರ್ಧೆಯಲ್ಲಿ ಇದ್ದಾರೆ. ಅವರು ಈಗಾಗಲೇ ಸಚಿವರಾಗಿದ್ದು ಜಿಲ್ಲೆಯ ಕನಸನ್ನು ಬಿಡಲಿ ಅಥವಾ ಸಚಿವ ಸ್ಥಾನ ಬಿಡಲಿ ಇದೆ ವೇಳೆ ಅವರು ನೇರವಾಗಿ ವಾಗ್ದಾಳಿ ನೆಡೆಸಿದರು.