Free health check-up camp in the divine presence of Sri Sri Rudramuni Swamiji.

ತಿಪಟೂರು. ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಟನಾಯಕನಹಳ್ಳಿ
ಶ್ರೀ ರುದ್ರಮುನಿ ಸ್ವಾಮೀಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ
ಶೇಖರ್ ಆಸ್ಪತ್ರೆ ಸಹೋದ್ಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಉದ್ಘಾಟಿಸಿದರು
ನಂತರ ಮಾತನಾಡಿದ ಸ್ವಾಮೀಜಿಯವರು. ದೇಶದ ಪ್ರಗತಿಗೆ ಅಡಿಪಾಯವಾಗಿರುವ ಯುವ ಜನತೆ ಕರ್ತವ್ಯ ಪ್ರಜ್ಞೆಯಿಂದ ಜವಾಬ್ದಾರಿ ಅರಿತು ಸ್ವಯಂ ಪ್ರೇರಿತ ರಕ್ತದಾನವನ್ನ ನೀಡಬೇಕು. ರಕ್ತದಾನನಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ರಕ್ತವನ್ನು ಕೃತಕವಾಗಿ ಸೃಷ್ಟಿ ಮಾಡಲು ಅಸಾಧ್ಯವಾಗಿರುವುದರಿಂದ ಅದನ್ನು ಮನುಷ್ಯರಿಂದಲೇ ದಾನವಾಗಿ ಪಡೆಯಬೇಕು ರಕ್ತದಾನ ಮಹಾದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ.ಶೇಖರ್ ಆಸ್ಪತ್ರೆ ಡಾ.ಸೋಮಶೇಖರ್. ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜ್ ವಿದ್ಯಾರ್ಥಿಗಳು. ಕಲ್ಪವೃಕ್ಷ ಸ್ವಯಂ ಸೇವಾ ಸಮಾಜ ಸೇವಾ ಸಂಸ್ಥೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಸೇರಿದಂತೆ ಸ್ವಯಂ ಪ್ರೇರಿತ ರಕ್ತದಾನಿಗಳು ಪಾಲ್ಗೊಂಡಿದ್ದರು.
ವರದಿ.ಮಂಜು.ಗುರುಗದಹಳ್ಳಿ