ಜಾಹೀರಾತು

Kukanur ITI: Application Invitation for Admission
ಕುಕನೂರ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ
ಜಾಹೀರಾತು

ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2026-27 ನೇ ಸಾಲಿನ ವಿವಿಧ ವೃತ್ತಿಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಪ್ರವೇಶ ಪ್ರಕ್ರಿಯೆಯು ಆರಂಭವಾಗಿದ್ದು, ವೃತ್ತಿಗೆ ಅನುಸಾರವಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ವಿವಿಧ ತಾಂತ್ರಿಕ/ತಾAತ್ರಿಕೇತರ ವೃತಿಗಳಿಗೆ ವೆಬ್‌ಸೈಟ್: www.cite.karnataka.gov.in ನಲ್ಲಿ ಮೇ 8 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9964247098, 9481718859, 8618952961, 9481138827 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views:
0
