ಬೆಣ್ಣೆಯೊಂದಿಗೆ ತಿನ್ನಲು ಉತ್ತಮವಾದ ಆಹಾರಗಳು ಯಾವುವು?

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
ಜಾಹೀರಾತು

ನನ್ನ ಪ್ರಕಾರ ಬೆಣ್ಣೆಯನ್ನು ಬೇರೆ ಯಾವ ಆಹಾರ ಪದಾರ್ಥಗಳ ಜೊತೆಗೆ ತಿನ್ನುವುದಕ್ಕಿಂತ ಕೃಷ್ಣನ ಹಾಗೆ ಬೆಣ್ಣೆಯನ್ನು ತಿಂದು ಅದರ ಸ್ವಾದವನ್ನು ಪಡೆಯುವುದು ಅತ್ಯಂತ ಪ್ರಿಯಕರ 🙂

ಬೆಣ್ಣೆಯನ್ನು ಸಾಮಾನ್ಯವಾಗಿ ಜನರು ಬ್ರೆಡ್ ಜೊತೆಗೆ ಬಳಸುತ್ತಾರೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಮನೆಯಲ್ಲಿಯೇ ಮೊಸರನ್ನು ಕಡೆದು ಬೆಣ್ಣೆ ಮಾಡುತ್ತಿದ್ದರಿಂದ ನಮಗೆ ಅದನ್ನು ದಕ್ಷಿಣ ಭಾರತದ ಹಲವಾರು ತಿನಿಸುಗಳ ಜೊತೆಗೆ ತಿನ್ನಲು ಕೊಡುತ್ತಿದ್ದರು. ಹಾಗಾಗಿ ಕೆಲವೊಂದು ದಕ್ಷಿಣ ಭಾರತದ ತಿನಿಸುಗಳ ಜೊತೆಗೆ ಬೆಣ್ಣೆಯ ಉಪಯೋಗವನ್ನು ತಿಳಿಸುತ್ತೇನೆ.

ಬಿಸಿಬಿಸಿ ದೋಸೆಯೊಂದಿಗೆ, ಬಿಸಿ ಚಪಾತಿಯೊಂದಿಗೆ, ಬಿಸಿ ಇಡ್ಲಿ, ಇವುಗಳನ್ನೆಲ್ಲಾ ನೀವು ತಿಂದಿರುತ್ತೀರಿ. ಆದರೆ, ನನ್ನಮ್ಮ ನಮಗೆ ಬಿಸಿಬಿಸಿ ತಿಳಿ ಕಟ್ಟಿನ ಸಾರಿನ ಜೊತೆಗೆ ಸ್ವಲ್ಪ ಬೆಣ್ಣೆಯನ್ನು ಹಾಕಿ ಕುಡಿಯಲು ಕೊಡುತ್ತಿದ್ದರು.

ಬಿಸಿ ಸಾರು ಗಂಟಲಲ್ಲಿ ಒಳಗೆ ಇಳಿಯುವಾಗ ಅದರ ಜೊತೆಗೆ ಬೆಣ್ಣೆ ಘಮ್ಮೆಂದು ಹೊಟ್ಟೆ ಸೇರಿದರೆ ಅದರ ಗಮ್ಮತ್ತೇ ಬೇರೆ!!

ಹೋಟೆಲ್ಗಳಲ್ಲಿ ಸೂಪ್ ಎಂದು ಹಲವಾರು ಆರ್ಟಿಫಿಶಿಯಲ್ ಫ್ಲೇವರ್ ಗಳನ್ನು ಬಳಸಿ ಕೊಡುವ ಪೆಯಗಳಿಗಿಂತ ಮನೆಯಲ್ಲಿ ಮಾಡಿದ ಯಾವುದೇ ತರಕಾರಿ ಅಥವಾ ನನ್ನಮ್ಮ ಮಾಡಿದ ತೊಗರಿಬೇಳೆಯ ಕಟ್ಟಿನ ಸಾರಿನ ಜೊತೆಗೆ ಬೆಣ್ಣೆ ಆಸ್ವಾದಿಸಲು ತುಂಬಾ ಚೆನ್ನಾಗಿರುತ್ತದೆ.

ಆರೋಗ್ಯಕ್ಕೂ ಒಳ್ಳೆಯದು.

ಧನ್ಯವಾದಗಳು 🙂

ಇದು ಕಲ್ಪನಾ ಲೋಕದ ಅತ್ಯುತ್ತಮ ಉದಾಹರಣೆ !!

ಸರಿಯಾದ ಕಾರಣ ಬೇರೆಯೇ ಇದ್ದಿರಬೇಕು. ಯಾಕೆಂದರೆ ಭೌತಶಾಸ್ತ್ರದ basic ಗೊತ್ತಿದ್ದರೂ ಸಾಕು. ಉಗುಳಿದ ದ್ರವ ಮನುಷ್ಯನಿಂದ ಹೊರಬಂದ ಬಳಿಕ ಯಾವುದೇ ಸಂಪರ್ಕವಿಲ್ಲದೇ ಅವನಿಗೆ ವಿದ್ಯುತ್ತಿನ ಪ್ರವಾಹ ತಲುಪಿಸಲು ಸಾಧ್ಯವಿಲ್ಲ.

Total Views: 0
ಜಾಹೀರಾತು
Share This Article
Leave a Comment