ಕನ್ನಡ ಬಳಸಿ – ಕರ್ನಾಟಕ ಉಳಿಸಿ: ಗ್ರಾ.ಪಂ. ಸಿಬ್ಬಂದಿ ಸರೋಜ ಕರೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
ಜಾಹೀರಾತು
Use Kannada – Save Karnataka: Gram Panchayat Staff Member Saroja’s Appeal

ಕನ್ನಡ ಬಳಸಿ – ಕರ್ನಾಟಕ ಉಳಿಸಿ: ಗ್ರಾ.ಪಂ. ಸಿಬ್ಬಂದಿ ಸರೋಜ ಕರೆ

ಜಾಹೀರಾತು

ಸೂಳೇಕಲ್ (ಕನಕಗಿರಿ ತಾಲೂಕು): ಕನ್ನಡ ರಾಜ್ಯೋತ್ಸವದ ಅಂಗವಾಗಿ ಸೂಳೇಕಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ ಶ್ರೀಮತಿ ಸರೋಜ ಅವರು ಕನ್ನಡ ಭಾಷೆಯ ಮಹತ್ವ ಸಾರುವ ಸಂದೇಶ ನೀಡಿದ್ದಾರೆ.
ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಕೇವಲ ಹಬ್ಬವಲ್ಲ, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. “ಕನ್ನಡ ಬಳಸಿ – ಕರ್ನಾಟಕ ಉಳಿಸಿ” ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು ಎಂದು ಅವರು ಕರೆ ನೀಡಿದರು.
ಆಡಳಿತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಮೂಲಕ ಕನ್ನಡ ಭಾಷೆ ಮತ್ತು ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸಬೇಕು. ಕನ್ನಡ ನಮ್ಮ ಉಸಿರು, ಕರ್ನಾಟಕ ನಮ್ಮ ಹೆಮ್ಮೆ ಎಂದು ಹೇಳಿದ ಅವರು, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ವರದಿ: ಶರಣಯ್ಯ ಹಿರೇಮಠ
ವರದಿಗಾರರು, ಕಲ್ಯಾಣಸಿರಿ ವೆಬ್ ನ್ಯೂಸ್

Total Views: 0
ಜಾಹೀರಾತು
Share This Article
Leave a Comment