
Appeal to the municipality to resolve the basic problems of Athani town

ಅಥಣಿ ಪಟ್ಟಣದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪುರಸಭೆಗೆ ಮನವಿ

ಅಥಣಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುಡಿಯುವ ನೀರು, ಸ್ವಚ್ಛತೆ, ಮತ್ತು ರಸ್ತೆ ದುರಸ್ತಿ , ಪುರುಷ ಹಾಗೂ ಮಹಿಳೆಯರಿಗೆ ಮೂತ್ರ ಸೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಅಥಣಿ ತಾಲೂಕ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ವತಿಯಿಂದ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ಮಾತನಾಡಿ
ನಗರದ ಕೆಲವು ಕಡೆ ಸಾರ್ವಜನಿಕರಿಗೆ ಮೂತ್ರ ಶೌಚಾ ಲಯ ಹಾಗೂ ಎಲ್ಲಾ ಬಡಾವಣೆಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುವ ಸಾದ್ಯತೆ ಇದೆ ಕೂಡಲೇ ಪುರಸಭೆ ಆಡಳಿತ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆ ಹರಿಸಬೇಕು ಮತ್ತು ಶಿವಯೋಗಿ ನಗರ ಪುರಸಭೆಗೆ ಸೇರಿಸಿ ಅಭಿವೃದ್ಧಿ ಗೊಳಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ರಮೇಶ ಮಡಿವಾಳ ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಎಂ ಶರ್ಮಾ, ಕಿರಣ ಪಾಟೋಳೆ,ಅಮೂಲ ಚವಾಣ, ಶಿವಾನಂದ ನಾವಿ,ಪ್ರಶಾಂತ ಶಿಂದೆ, ಸರಸ್ವತಿ ನೇಮಗೌಡ, ಕವಿತಾ ಭೋಸಲೆ, ಉಜ್ವಲ ಪಾಟೋಳೆ, ಶಿವಲೀಲಾ ಪಟ್ಟಣಶೆಟ್ಟಿ, ರೇಷ್ಮಾ ತೇಲಿ, ರಮಜಾನ್ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.
