45 ವರ್ಷಗಳ ಕಣ್ಣೀರು: ಮಂಡ್ಯದ 30 ಪರಿಶಿಷ್ಟ ಜಾತಿಯ ಅಲೆಮಾರಿ ರೈತರಿಗಿಲ್ಲ ಹಕ್ಕುಪತ್ರ; ವ್ಯವಸ್ಥೆಯ ತಾರತಮ್ಯಕ್ಕೆ ಸಾಕ್ಷಿ ಕೆ.ಆರ್.ಪೇಟೆಯ ಸರ್ವೆ ನಂ. 40!”44

H.Mallikarjun
H.Mallikarjun - Kalyanasiri
4 Min Read




45 Years of Tears: 30 Nomadic Scheduled Caste Farmers in Mandya Lack Title Deeds; Survey No. 40 in K.R. Pete Stands as a Testament to Systemic Discrimination!




45 ವರ್ಷಗಳ ಕಣ್ಣೀರು: ಮಂಡ್ಯದ 30 ಪರಿಶಿಷ್ಟ ಜಾತಿಯ ಅಲೆಮಾರಿ ರೈತರಿಗಿಲ್ಲ ಹಕ್ಕುಪತ್ರ; ವ್ಯವಸ್ಥೆಯ ತಾರತಮ್ಯಕ್ಕೆ ಸಾಕ್ಷಿ ಕೆ.ಆರ್.ಪೇಟೆಯ ಸರ್ವೆ ನಂ. 40!”

ನೂರಾರು ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿಕೊಂಡವರಿಗೆ ದಾಖಲೆಗಳು ಸಿಗುತ್ತವೆ.ನಾವು40 ವರ್ಷಗಳಿಂದ ಇದೇ ಜಮೀನಿನಲ್ಲಿ  ಕೃಷಿ ಮಾಡಿಕೊಂಡು ಬರುವವರಿಗೆ ಧಾಖೆಳು ಸಿಗುತ್ತಿಲ್ಲ ?) 

ಅಕ್ರಮ ಮಾಡುವವರಿಗೆ ರೆಡ್ ಕಾರ್ಪೆಟ್, ಕಷ್ಟಪಡುವ ರೈತರಿಗೆ ಕಚೇರಿ ಅಲೆದಾಟ! 40 ವರ್ಷಗಳ ಕೃಷಿಕರ ಕಣ್ಣೀರಿನ ಕಥೆ

ನೂರಾರು ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸುವ ಪ್ರಭಾವಿಗಳಿಗೆ ರಾತ್ರೋರಾತ್ರಿ ದಾಖಲೆಗಳು ಸೃಷ್ಟಿಯಾಗುತ್ತವೆ. ಆದರೆ, ಇದೇ ಜಮೀನಿನಲ್ಲಿ ಬರೋಬ್ಬರಿ 40 ವರ್ಷಗಳಿಂದ ಬೆವರು ಹರಿಸಿ, ಕೃಷಿಯನ್ನೇ ನಂಬಿ ಬದುಕುತ್ತಿರುವ ಬಡ ರೈತರಿಗೆ ಮಾತ್ರ ಹಕ್ಕುಪತ್ರ ಸಿಗುತ್ತಿಲ್ಲ. ಇದು ಸದ್ಯ ಕಂದಾಯ ಇಲಾಖೆ ಮತ್ತು ಸರ್ಕಾರದ ವ್ಯವಸ್ಥೆಯ ವಿರುದ್ಧ ನೊಂದ ರೈತರು ಉಗುಳುತ್ತಿರುವ ಆಕ್ರೋಶದ ನುಡಿಗಳು.

ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ರೈತರು:
“ನಾವು ತಲೆಮಾರುಗಳಿಂದ ಇದೇ ಮಣ್ಣನ್ನು ನಂಬಿ ಬದುಕುತ್ತಿದ್ದೇವೆ. 40 ವರ್ಷಗಳ ಇತಿಹಾಸ ನಮ್ಮ ಕಷ್ಟಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಜಮೀನನ್ನು ಸಕ್ರಮ ಮಾಡಿಕೊಡಿ ಎಂದು ಕಂದಾಯ ಕಚೇರಿಗಳಿಗೆ ಅಲೆದು ಸಾಕಾಗಿದೆ. ಆದರೆ ನಮಗೆ ಮಾತ್ರ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡಿ ಸಾಗುವಳಿ ಚೀಟಿ ಅಥವಾ ಹಕ್ಕುಪತ್ರ ನೀಡುತ್ತಿಲ್ಲ. ಇತ್ತ ಪ್ರಭಾವಿಗಳು ಎಕರೆಗಟ್ಟಲೆ ಭೂಮಿಯನ್ನು ಕಬಳಿಸುತ್ತಿದ್ದರೂ ಅವರಿಗೆ ಸುಲಭವಾಗಿ ದಾಖಲೆಗಳು ಸಿಗುತ್ತಿವೆ. ಇದು ಯಾವ ನ್ಯಾಯ?” ಎಂದು ಸ್ಥಳೀಯ ರೈತರು ಪ್ರಶ್ನಿಸಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು:

  • ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಡ ಕೃಷಿಕರ ಜಮೀನನ್ನು ತಕ್ಷಣ ಸಕ್ರಮ ಮಾಡಬೇಕು.
  • ಸಾಗುವಳಿ ಚೀಟಿ (Form 50, 53, 57) ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಕೈಬಿಡಬೇಕು.
  • ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನೈಜ ರೈತರಿಗೆ ನ್ಯಾಯ ಒದಗಿಸಬೇಕು.

ಬಡವರ ಹೊಟ್ಟೆಯ ಮೇಲೆ ಹೊಡೆಯುವ ಇಂತಹ ತಾರತಮ್ಯ ಧೋರಣೆಗೆ ಸರ್ಕಾರ ಮತ್ತು ಕಂದಾಯ ಇಲಾಖೆ ತಕ್ಷಣವೇ ಬ್ರೇಕ್ ಹಾಕಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ.


“1981 ರಿಂದ ಸಾಗುತ್ತಿರುವ ಅರ್ಜಿಗಳ ಸಾಗರ: ಪ್ರಭಾವಿಗಳಿಗೆ ರಾಜಮಾರ್ಗ, ಕಡುಬಡ SC-NT/DNT ಕೃಷಿಕರಿಗೆ ಕಚೇರಿ ಅಲೆದಾಟದ ಶಿಕ್ಷೆ!”


ಕೆ.ಆರ್.ಪೇಟೆ, ಮಂಡ್ಯ:
ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬದುಕು ಮಾತ್ರ ಇಂದಿಗೂ ಅತಂತ್ರ ಸ್ಥಿತಿಯಲ್ಲೇ ಇದೆ ಎಂಬುದಕ್ಕೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್.ಪೇಟೆ) ತಾಲ್ಲೂಕಿನ ಈ ಘಟನೆಯೇ ಜೀವಂತ ಉದಾಹರಣೆ. ಸೀಳುನೇರು ಹೋಬಳಿಯ ವೆಂಕಟರಾಜಪುರ ಗ್ರಾಮದ ಸರ್ವೆ ನಂ. 40ರ ಸರ್ಕಾರಿ ದರಖಾಸು ಜಮೀನಿನಲ್ಲಿ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಕೃಷಿ ಮಾಡುತ್ತಿರುವ ಪರಿಶಿಷ್ಟ ಜಾತಿಯ (SC-NT/DNT) 30 ಕಡುಬಡ ರೈತ ಕುಟುಂಬಗಳಿಗೆ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ.

ಅಧಿಕಾರಶಾಹಿಯ ನೆಪಗಳ ನಡುವೆ ಕರಗಿದ 4 ದಶಕಗಳು:
ಈ ಬಡ ರೈತರ ಹೋರಾಟ ಇಂದು ನಿನ್ನೆಯದಲ್ಲ. 1981-82ನೇ ಸಾಲಿನಲ್ಲೇ ಅಂದಿನ ಸರ್ಕಾರಕ್ಕೆ ಈ 30 ಕೃಷಿಕರು ಜಮೀನು ಮಂಜೂರಾತಿಗಾಗಿ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿದ್ದರು. 45 ವರ್ಷಗಳ ಇತಿಹಾಸವಿರುವ ಇವರ ಅರ್ಜಿಯ ಕಡತಗಳು ಕಂದಾಯ ಇಲಾಖೆಯ ಕಚೇರಿಗಳ ಧೂಳಿನ ನಡುವೆ ಕಳೆದುಹೋಗಿವೆಯೇ ಹೊರತು ಅಧಿಕಾರಿಗಳ ಮನಸ್ಸು ಮಾತ್ರ ಕರಗಿಲ್ಲ. ತಲೆಮಾರುಗಳಿಂದ ಅದೇ ಮಣ್ಣನ್ನು ನಂಬಿ, ರಾಗಿ, ಜೋಳ ಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಈ ಅಲೆಮಾರಿ ಸಮುದಾಯಕ್ಕೆ ಪ್ರತಿ ಬಾರಿಯೂ ಅಧಿಕಾರಿಗಳು ‘ತಾಂತ್ರಿಕ ಕಾರಣಗಳು’, ‘ಸರ್ವೆ ಅಳತೆ ಬಾಕಿ’ ಎಂಬ ಸಿದ್ಧ ನೆಪಗಳನ್ನು ಹೇಳಿ ಸಾಗುವಳಿ ಚೀಟಿ (ಫಾರ್ಮ್ 50, 53, 57) ನೀಡದೆ ವಂಚಿಸುತ್ತಿದ್ದಾರೆ.

ವ್ಯವಸ್ಥೆಯ ಅಸಲಿ ಮುಖ – ‘ಅಕ್ರಮ’ಕ್ಕೆ ಸಕ್ರಮ, ‘ಸಕ್ರಮ’ಕ್ಕೆ ವಿಳಂಬ!
ಒಂದೆಡೆ 1981ರಿಂದ ಅರ್ಜಿ ಹಿಡಿದು ಕಾಯುತ್ತಿರುವ ನೈಜ ಕೃಷಿಕರಿಗೆ ಕಾನೂನಿನ ಪಾಠ ಹೇಳುವ ಕಂದಾಯ ಇಲಾಖೆ, ಇನ್ನೊಂದೆಡೆ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವ ಪ್ರಭಾವಿ ಭೂಗಳ್ಳರಿಗೆ ರಾತ್ರೋರಾತ್ರಿ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದೆ. “ನಮ್ಮಲ್ಲಿ ಹಣವಿಲ್ಲ, ರಾಜಕೀಯ ಪ್ರಭಾವವಿಲ್ಲ ಎಂಬ ಒಂದೇ ಕಾರಣಕ್ಕೆ ನಮ್ಮ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲವೇ? ಪ್ರಭಾವಿಗಳಿಗೆ ಸಿಗುವ ದಾಖಲೆಗಳು 40 ವರ್ಷಗಳಿಂದ ಬೆವರು ಹರಿಸುತ್ತಿರುವ ನಮಗೆ ಏಕೆ ಸಿಗುತ್ತಿಲ್ಲ?” ಎಂದು ವೆಂಕಟರಾಜಪುರ ಗ್ರಾಮದ ನೊಂದ ರೈತರು ಕಂದಾಯ ಇಲಾಖೆಯ ಭ್ರಷ್ಟ ನೀತಿಯ ವಿರುದ್ಧ ಕೆಂಡ ಕಾರಿದ್ದಾರೆ.


ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಭೂ ಪರಭಾರೆ ನಿಷೇಧ) ಕಾಯ್ದೆ ಸೇರಿದಂತೆ ಬಡವರ ಭೂಮಿಗೆ ರಕ್ಷಣೆ ನೀಡುವ ಹಲವು ನಿಯಮಗಳಿದ್ದರೂ, ಭೂ ರಹಿತ ಅಲೆಮಾರಿ ಸಮುದಾಯಕ್ಕೆ ಜಮೀನು ಮಂಜೂರು ಮಾಡಲು ತಾಲ್ಲೂಕು ಆಡಳಿತ ವಿಳಂಬ ನೀತಿ ಅನುಸರಿಸುತ್ತಿರುವುದು ಕಂದಾಯ ಕಾಯ್ದೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಬಗರ್ ಹುಕುಂ ಸಮಿತಿಯ ಸಭೆಗಳು ನಡೆದರೂ ಈ 30 ರೈತರ ಅರ್ಜಿಗಳನ್ನು ಮುನ್ನೆಲೆಗೆ ತರದೆ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ ಎಂದುಕರ್ನಾಟಕ.  SC/ST ಸಬಲೀಕರಣ ಹೋರಾಟ ಸಮಿತಿ ಸಂಸ್ಥಾಲಕ ರಾಜ್ಯ ಅಧ್ಯಕ್ಷ ರಾದ   ಭೀಮಾ ಪುತ್ರಿ ನಾಗಮ್ಮ .ಅವರು ಆರೋಪಿಸಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಶ್ರೀ ಮಂಜುನಾಥ್‌ರವರಿಗೆ ಮನವಿ ಸಲ್ಲಿಸಿಲಾಯಿತು ಎಂದು ತಿಳಿಸಿದ್ದಾರೆ.


Total Views: 0
Share This Article