
Appeal to the District Collector demanding dismissal of the PDO of Yaradona Gram Panchayat from service

ಯರಡೋಣಾ ಗ್ರಾಮ ಪಂಚಾಯತಿ ಪಿಡಿಓ ಸೇವೆಯಿಂದ ವಜಾ ಮಾಡುವ ಒತ್ತಾಯಿಸಿ ಜಿಲ್ಲಾಧಿಕಾರಿ ಗಳಿಗೆ ಮನವಿ

ಗಂಗಾವತಿ: ನಗರದ ವಕೀಲರಾದ ಮಲ್ಲೇಶಪ್ಪ ಎಸ್. ವಾರ್ಡ ನಂ: 35 ಐಪಿಡಿ ಸಾಲಪ್ಪ ಲೇಔಟ್ ಅರಣ್ಯ ಇಲಾಖೆ ಹತ್ತಿರ ಸರೋಜ ನಗರದ ವರಾಗಿದ್ದು ದಿ, 12-06-2026 ರಂದು ಗುರುವಾರದಂದು ಸಮಯ: ಸಂಜೆ 04-30 ಪಿ.ಎಮ್. ಗೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಮೊಬೈಲ್ ಸಂಖ್ಯೆಯ ಮೊ.ನಂ: 90197 33416 ಈ ನಂಬರಿಗೆ ಪೋನ್ ಕರೆ ಮಾಡಲಾಗಿ ನಾನು ಗಂಗಾವತಿ ತಾಲೂಕಿನ

ಮಲ್ಲೇಶಪ್ಪ ಎಸ್. ವಕೀಲರು ಮಾತನಾಡುವುದು ಅಂತಾ ಹೇಳಿ ಯರಡೋಣಾ ಗ್ರಾಮ ಪಂಚಾಯತಿಗೆ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಕಾನೂನು ಪದವಿಧರರು (ಪ್ರಾಕ್ಸಿಸಿಂಗ್ ಅಡ್ವಕೇಟ್) ಪಠ್ಯಪುಸ್ತಕಗಳಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಪಠ್ಯ ಪುಸ್ತಕಗಳಿಗಾಗಿ ಕಾಯ್ದಿರಿಸಲಾಗಿರುವ ಅನುದಾನವನ್ನು ಮಂಜೂರಿಸಲು ಅದರ ಕುರಿತು ಗ್ರಾಮ ಪಂಚಾಯತಿ ಪಿಡಿಓ ಆದ ಶ್ರೀ ಶಿವರಾಜ ಅವರಿಗೆ ಕರೆ ಮಾಡಲಾಗಿ ಅವರೊಬ್ಬ ಅಧಿಕಾರಿಯಂತೆ ವರ್ತಿಸದೇ ಅವಾಚ್ಯಶಬ್ದಗಳಿಂದ ಬೈದು, ಬೆದರಿಕೆ ಹಾಕಿರುತ್ತಾನೆ. ಪರಿಶಿಷ್ಠ ಜಾತಿ/ಪರಿಶಿಷ್ಟ ಪಂಗಡದವರೆಂದರೇ ಅವರಿಗೆ ಅತಿ ಕನಿಷ್ಠವಾಗಿ ತಿಳಿದುಕೊಂಡಿರುತ್ತಾರೆ. ಇವರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೇವೆಯಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ ಎಂದು ಪ್ರಕಟನೆ ಮೂಲಕ ತಿಳಿಸಿದ್ದರೆ.
