
Basavapara organizations celebrate victory over denial of permission for Hindu gathering of Basava devotees in Basavakalyana
ಬೀದರ್: ಕನ್ನೇರಿ ಸ್ವಾಮಿಯವರ ನೇತೃತ್ವದಲ್ಲಿ ದಿನಾಂಕ 28/06/2026ರಂದು ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿತ್ತು, ಇದಕ್ಕೆ ಅನುಮತಿ ನಿರಾಕರಿಸಿ ತಾಲೂಕು ದಂಡಾಧಿಕಾರಿ/ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಇಂದು 13/06/2026ರಂದು ಮುಂಜಾನೆ ಅಂಬೇಡ್ಕರ ವೃತ್ತ ಹತ್ತಿರ ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ಸಮಾವೇಶ ಅನುಮತಿ ನಿರಾಕರಿಸಿದಕ್ಕೆ ವಿಜಯೋತ್ಸವ ಆಚರಿಸಲಾಯಿತು.

ಈ ಸಮಾವೇಶ ವಿರೋಧ ಬೀದರ ಜಿಲ್ಲೆಯ ಮತ್ತು ನಾಡಿನ ಹಲವಾರು ಬಸವ ಪರ , ಲಿಂಗಾಯತ ಸಮುದಾಯದ ಪರ ಮತ್ತು ದಲಿತ ಪರ ಸಂಘಟನೆಗಳು,ಪೂಜ್ಯ ಮಠಾಧೀಶರು ಮತ್ತು ಬಸವ ಅನುಯಾಯಿಗಳು ಪ್ರತಿಭಟನೆ ವ್ಯಕ್ತ ಮಾಡಿದ್ದರು. ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ಅವಹೇಳನ ಮಾಡುವದು, ಬಸವಾದಿ ಶರಣರ ವಚನಗಳನ್ನು ತಿರುಚಿ ಹೇಳುವ ಮುಖಾಂತರ ಸಮಾಜದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣ ಮಾಡುತ್ತಿದ್ದು, ಕೋಮು ಗಲಭೆಗಳು ಸಂಭವಿಸುವ ಆತಂಕವನ್ನು ಎಲ್ಲರೂ ವ್ಯಕ್ತಪಡಿಸಿದ್ದರು.


ಈಗಾಗಲೇ ನಾವು ಮತ್ತು ಹಲವಾರು ಯುವಕರು ಬೆಂಗಳೂರದಲ್ಲಿ ರಾಜ್ಯದ ಮಾನ್ಯ ಗೃಹ ಸಚಿವರು ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ, ಮತ್ತು ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ ಸಚಿವರು ಇವರ ಗಮನಕ್ಕೆ ತರಲಾಗಿತ್ತು. ಸರಕಾರ ನಾಡಿನ ಸಮಸ್ಯೆಯನ್ನು ಅರಿತುಕೊಂಡು ಕರ್ನಾಟಕ ರಾಜ್ಯ ಸಾಂಸಕೃತಿಕ ನಾಯಕರು ವಿಶ್ವಗುರು ಬಸವಣ್ಣನವರ ಅವಮಾನ ಮತ್ತು ಬಸವಾದಿ ಶರಣರ ಅವಹೇಳನ ಪರಿಗಣೆಗೆ ತೆಗೆದುಕೊಂಡಿದ್ದು ತಿಳಿದುಬಂದಿದೆ.
ಲಿಂಗಾಯತ ಸಮುದಾಯದ ಮಠಾಧೀಶರಿಗೆ ಮತ್ತು ಬಸವಾದಿ ಶರಣರ ಅನುಯಾಯಿಗಳಿಗೆ ಹಿಂದೂ ಸಮಾವೇಶದ ವಿರೋಧ ಇಲ್ಲ, ಆದರೆ ಬಸವಾದಿ ಶರಣರ ಹೆಸರ ಮೇಲೆ ಹಿಂದೂ ಸಮಾವೇಶ ಮಾಡಲು ಹೊರಟಿದ್ದು ಅನುಚಿತ ಎಂದು ಆತಂಕ ಪಡಿಸಿ ಸಚಿವರಿಗೂ, ಜಿಲ್ಲಾಧಿಕಾರಿ, ಮತ್ತು ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಳ್ಳಲಾಯಿತು.
ಆದರಿಂದ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡ ಕನ್ನೇರಿ ಸ್ವಾಮಿ ಬೇಕಂತಲೇ ಬಸವ ಭೂಮಿ ಕ್ರಾಂತಿ ಭೂಮಿ ಬಸವಾದಿ ಶರಣರು ಸಮಾನತೆ ಸಾರಿದ ಬಸವಕಲ್ಯಾಣದಲ್ಲಿ ತನ್ನ ವೈಧಿಕ ಪರಂಪರೆ ಮೆರೆಯಲು, ಬಸವಾದಿ ಶರಣರನ್ನು ಅವಹೇಳನ ಮಾಡಲು ಬಸವಾದಿ ಶರಣರ ಹೆಸರಿನ ಮೇಲೆ ಹಿಂದೂ ಸಮಾವೇಶ ಹಮ್ಮಿಕೊಂಡಿದ್ದು, ಸಮಾಜದಲ್ಲಿ ಕೋಮು ಗಲಭೆ ಉಂಟಾಗಿ ಕಾನೂನು ಸುವ್ಯವಸ್ಥೆ ಧಕ್ಕೆ ಆಗುತ್ತದೆ ಎಂದು ಪರಿಗಣಿಸಿ, ಅನುಮತಿ ನಿರಾಕರಣೆ ಮಾಡಿದ್ದು ನಾವೆಲ್ಲರೂ ಸ್ವಾಗತಿಸುತ್ತೇವೆ. ಈ ನಡೆಗೆ ನಾವು ಹರ್ಷವ್ಯಕ್ತಪಡಿಸುತ್ತೇವೆ.
ರಾಜ್ಯ ಸರ್ಕಾರ, ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ,ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ ಸಚಿವರು, ಶ್ರೀ ಪ್ರಿಯಾಂಕ ಖರ್ಗೆ ಮಾನ್ಯ ಗೃಹ ಸಚಿವರು ಮತ್ತು ಜಿಲ್ಲಾಡಳಿತ, ತಾಲೂಕು ದಂಡಾಧಿಕಾರಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ.
ಬೀದರ ಜಿಲ್ಲೆಯ ಮತ್ತು ನಾಡಿನ ಹಲವು ಜಿಲ್ಲೆಗಳಲ್ಲಿ ಕನ್ನೇರಿ ಸ್ವಾಮೀಜಿ ಬಸವಾದಿ ಶರಣರ ಸಮಾವೇಶಕ್ಕೆ ಆಕ್ರೋಶ ವ್ಯಕ್ತ ಮಾಡಿದ್ದ ಜಿಲ್ಲೆಯ ನಾಡಿನ ಎಲ್ಲಾ ಪೂಜ್ಯ ಮಠಾಧೀಶರಿಗೂ, ಮಾತಾಜಿಯವರಿಗೂ, ಲಿಂಗಾಯತ ಸಮುದಾಯದ ಮುಖಂಡರಿಗೂ, ಲಿಂಗಾಯತ ಧರ್ಮದ ಮತ್ತು ಬಸವ ಪರ ಸಂಘಟನೆಗಳಿಗೂ, ದಲಿತ ಪರ ಮತ್ತು ಕನ್ನಡ ಪರ ಸಂಘಟನೆಗಳಿಗೆ ಧನ್ಯವಾದಗಳು ಸಲ್ಲಿಸುತ್ತೇವೆ.
ಪೂಜ್ಯ ಜಗದ್ಗುರು ಡಾ ಚೆನ್ನಬಸವಾನಂದ ಸ್ವಾಮೀಜಿ, ಕುಂಬಳಗೋಡ ಬೆಂಗಳೂರು
ಪೂಜ್ಯ ಡಾ ಸಿದ್ಧರಾಮ ಶರಣರು ಬೆಲ್ದಾಳ
ಪೂಜ್ಯ ಶ್ರೀ ಸತ್ಯಾದೇವಿ ಮಾತಾಜಿ ಬಸವ ಮಂಟಪ ಬೀದರ
ಶ್ರೀ ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ
ಶ್ರೀ ಶಿವರಾಜ ಪಾಟೀಲ ಅತಿವಾಳ
ಶ್ರೀ ಶಿವಶರಣಪ್ಪ ಪಾಟೀಲ ಹಾರುರಗೇರಿ
