Breaking News

ಲೋಂಡಾ ಗ್ರಾಮಕ್ಕೆ ಸಂಪರ್ಕ ಮಾಡುವ ಮುಖ್ಯ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ಕೂಡಲೇ ದುರಸ್ತಿ ಪಡಿಸಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ..

The main road connecting to Londa village has deteriorated badly and should be repaired immediately: Journalist and activist Basavaraju demands

ಜಾಹೀರಾತು

ಸ್ಲೋಂಡಾ :ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕೊನೆ ಗಡಿ ದೊಡ್ಡ ಗ್ರಾಮ ಲೋಂಡಾಕ್ಕೆ ಕಳೆದ 5 ವರ್ಷಗಳಿಂದ ಸಂಪರ್ಕ ಮಾಡುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯು ತೀವ್ರವಾಗಿ ಹದಗೆಟ್ಟು, ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿರುವುದರಿಂದ ಈ ಸಮಸ್ಯೆಯು ಜ್ವಲಂತ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇನ್ನೂ ಈ ರಸ್ತೆಯು ಕಳೆದ 6 ವರ್ಷಗಳ ಹಿಂದೆ ತುಂಬಾನೇ ಚೆನ್ನಾಗಿ ಇತ್ತು, ಆದ್ರೇ ಖಾನಾಪುರ ದಿಂದ ಲೋಂಡಾ ಮಾರ್ಗವಾಗಿ ರಾಮನಗರಕ್ಕೆ ಸಂಪರ್ಕ ಮಾಡುವ ರಸ್ತೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ರಸ್ತೆ ನಿರ್ಮಾಣದ ನೆಪದಲ್ಲಿ ಈ ಲೋಂಡಾ ಗ್ರಾಮಕ್ಕೆ ಸಂಪರ್ಕ ಮಾಡುವ ಮುಖ್ಯ ರಸ್ತೆಯನ್ನು ಸಹ ಗುತ್ತಿಗೆದಾರ ಕಂಪನಿ ಹದಗೆಡಿಸಿ ಹೈದ್ರಾಬಾದ್ ಮಾಡಿದ್ದಾರೆ.

ಇನ್ನೂ ದಿನನಿತ್ಯ ಈ ಗ್ರಾಮಕ್ಕೆ ಹೋಗುವಾಗ ವಾಹನಗಳು, ದ್ವಿಚಕ್ರ ಸವಾರರು ಹಾಗೂ ಪ್ರಯಾಣಿಕರು ಹರಸಾಹಸ ಪಡಬೇಕಾಗಿದೆ. ಇನ್ನೂ ಲೋಂಡಾ ಗ್ರಾಮಕ್ಕೆ ಸಂಪರ್ಕ ಮಾಡುವ ಮುಖ್ಯ ದ್ವಾರದಲ್ಲೇ ಸರ್ಕಾರಿ ಶಾಲೆಗಳು ಇದ್ದು, ದಿನ ನಿತ್ಯ ಶಾಲಾ ಮಕ್ಕಳು ಈ ದುಃಸ್ಥಿಯ ರಸ್ತೆಯಲ್ಲೇ ಸಂಚಾರ ಮಾಡುವ ಪರಿಸ್ಥಿತಿ ಬಂದೊದಗಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 6 ಜನ ಈ ರಸ್ತೆಯಲ್ಲಿ ಬಿದ್ದು ತೀವ್ರವಾಗಿ ಗಾಯ ಮಾಡಿಕೊಂಡರೆ, ಒಬ್ಬರು ಮೃತ ಪಟ್ಟಿದ್ದಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು. ಆದ್ದರಿಂದ ಇವರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿಗಳು ಹಾಗೂ ಪತ್ರಕರ್ತಹಾಗೂ ಹೋರಾಟಗಾರ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ, ಲೋಂಡಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಪತ್ರಿಕಾ ಗೋಷ್ಠಿಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಿ, ಗುತ್ತಿಗೆ ಕೆಲಸ ಮಾಡುತ್ತಿರುವ ಯಶಸ್ವಿ ಇನ್ಫ್ರಾ ಎಂಬ ಖಾಸಗಿ ಗುತ್ತಿಗೆದಾರ ಕಂಪನಿಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಈ ಸಮಸ್ಯೆ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ *🙏✒️ವಂದನೆಗಳು. ವರದಿ ನ್ಯೂಸ್ ಡೆಸ್ಕ್.

About Mallikarjun

Check Also

ಪರಿಶಿಷ್ಟ ಜಾತಿಗಳ ವಳಮೀಸಲಾತಿ ಜಾರಿ ಮಾಡಬೇಕೆಂದು ಒಳಮೀಸಲಾತಿ ಹೋರಾಟ ಸಮಿತಿ. ಒತ್ತಾಯ

Internal Reservation Struggle Committee to enforce reservation for Scheduled Castes. compulsion ವರದಿ – ಮಂಜುನಾಥ ಕೋಳೂರು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.