Breaking News

ಮಾದಪ್ಪ ಸನ್ನಿಧಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದ : ಎಮ್ ಆರ್ ಮಂಜುನಾಥ್ .

Gave guidance on various development works in Madappa Sannidhi: MR Manjunath.

ಜಾಹೀರಾತು
IMG 20250227 WA0101

ವರದಿ : ಬಂಗಾರಪ್ಪ ಸಿ .
ಹನೂರು : ಶ್ರೀ ಮಲೈ ಮಹದೇಶ್ವರ ಸ್ವಾಮಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ಕುರಿತು ಶಾಸಕ ಎಮ್‌ ಆರ್ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ದೇವಾಲಯದ ಆವರಣದಲ್ಲಿ ಒತ್ತುವರಿ ಕುರಿತು ಮಲೆ ಮಾದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲಾನ್ ಆವರಣದ 7.18 ಎಕರೆ ಜಮೀನುಗಳಲ್ಲಿ ಒತ್ತುವರಿಯಾಗಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಗ್ಗೆ ಚರ್ಚಿಸಿದರು.
ದೇವಾಲಯದ ಮಾಸ್ಟರ್ ಪ್ಲಾನ್ ಆವರಣದಲ್ಲಿ ನಿರ್ಮಾಣಗೊಂಡಿರುವ 381 ಮನೆಗಳು ಅದರಲ್ಲಿ 41 ಮನೆಗಳಿಗೆ ಈ ಸ್ವತ್ತುಗಳನ್ನು ಮಲೆ ಮಾದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗಿದೆ ಇದಲ್ಲದೆ ದೀಪದಗಿರಿ ವಡ್ಡುವಿನಲ್ಲಿ ಪ್ರತಿಮೆಗೆ ಹೋಗುವ ದಾರಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಿರಣ್ ಕುಮಾರ್ ಸಭೆಯಲ್ಲಿ ತಿಳಿಸಿದರು

ಸೂಚನೆ : ಮಲೆ ಮಾದೇಶ್ವರ ಬೆಟ್ಟದಲ್ಲಿ ಅನಾದಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಮನೆಗಳಿಗೆ ಕಡಿವಾಣ ಹಾಕಲು ಅಧಿಕಾರಿಯ ಸಿಬ್ಬಂದಿ ವರ್ಗದವರು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳು
ತುರ್ತಾಗಿ ಸರ್ವೆ ನಡೆಸಿ : ಭೂಮಾಪನ ಸರ್ವೆ ಇಲಾಖೆಯ ಅಧಿಕಾರಿಗಳು ತುರ್ತಾಗಿ ಮಲೆ ಮಾದೇಶ್ವರ ಬೆಟ್ಟದ ಮಾಸ್ಟರ್ ಪ್ಲಾನ್ ಆವರಣದ ಅರಣ್ಯದಂಚಿನಲ್ಲಿ ಬರುವ ವಿವಿಧ ಭಾಗಗಳಲ್ಲಿ ಇರುವ ಜಮೀನನ್ನು ತುರ್ತಾಗಿ ಸರ್ವೇ ನಡೆಸಿ ವರದಿ ನೀಡುವಂತೆ ತಿಳಿಸಿದರು.

ಪೌರಕಾರ್ಮಿಕರಿಗೆ ಸುರಕ್ಷತಾ ಸಾಧನೆಗಳ ಕಿಟ್ ವಿತರಣೆ : ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ಹ್ಯಾಂಡ್ ಗ್ಲೌಸ್ ಹೆಲ್ಮೆಟ್ ಗಳನ್ನು ಮತ್ತು ಸುರಕ್ಷಿತ ಸಾಧನಗಳನ್ನು ಸಭೆಯಲ್ಲಿ ವಿತರಣೆ ಮಾಡಿ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಭೆಯಲ್ಲಿ ತಿಳಿಸಲಾಯಿತು.

ಈಸಂರ್ಭದಲ್ಲಿಜಿಲ್ಲಾಧಿಕಾರಿ ಶಿಲ್ಪನಾಗ್ ಹಾಗೂ ಅಪಾರ ಜಿಲ್ಲಾಧಿಕಾರಿ ಗೀತಾಉಡೆದ್ .ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಕವಿತಾ.ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು . ಉಪ ಕಾರ್ಯದರ್ಶಿ ಚಂದ್ರಶೇಖರ್. ಡಿವೈಎಸ್ಪಿ ಧರ್ಮೇಂದರ್. ಉಪ ವಿಭಾಗಾಧಿಕಾರಿ ಮಹೇಶ್. ತಾಲೂಕು ದಂಡಾಧಿಕಾರಿಗಳಾದ ವೈ ಗುರುಪ್ರಸಾದ್ .ಇನ್ಸ್ಪೆಕ್ಟರ್ ಜಗದೀಶ್ .ಎಡಿಎಲ್ ಆರ್ ವಿದ್ಯಾ ರಾಣಿ ಹಾಗೂ ಮಲೆ ಮಾದೇಶ್ವರ ಬೆಟ್ಟ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿ ಸಿಬ್ಬಂದಿ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.