Breaking News

ಜನಪ್ರತಿನಿಧಿಗಳ ಆಮೀಷಕ್ಕೆಆಟೋನಗರ ಬಲಿತುಚ್ಛವಾಗಿ ಕಾಣುವ ಪೌರಾಯಕ್ತರ ವಿರುದ್ಧಉಗ್ರಹೋರಾಟ: ಜೆ. ಭಾರದ್ವಜ್

Autonagar has fallen victim tothelureofpublicrepresentativesFierce struggle against poor-looking citizens: J. Bharadwaj


ಗಂಗಾವತಿ: ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ ಆಟೋ ನಗರದ ವಿನ್ಯಾಸ ಬದಲಾಯಿಸಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ ೩೦ಕ್ಕು ಹೆಚ್ಚು ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಇರಾದೆ ಹೊಂದಿದ್ದಾರೆ ಎಂದು ಕಾರ್ಮಿಕ ಮುಖಂಡ ಜೆ.ಭಾರಧ್ವಜ್ ಅಕ್ರೋಶ ವ್ಯಕ್ತಪಡಿಸಿದರು.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೪ ರಲ್ಲಿದ್ದ ಡಿಸಿ ಮೋಹನ್ ಆದೇಶ ದಿಕ್ಕರಿಸಿ, ಮತ್ತೆ ಇತ್ತೀಚಿಗೆ ನ್ಯಾಯಾಲಯದ ನೀಡಿದ ನಿರ್ದೇಶನವನ್ನು ಕಡೆಗಣಿಸಿ ಪೌರಾಯುಕ್ತರು ಏಕಪಕ್ಷೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೆ ರಸ್ತೆಗೆ ಆಟೋ ನಗರದ ಕೆಲವರ ಪ್ಲಾಟ್‌ಗಳಲ್ಲಿನ ಸ್ಥಳ ಬಿಟ್ಟುಕೊಡಲಾಗಿದೆ ಮತ್ತೆ ನೀರಿನ ಟ್ಯಾಂಕ್ ಕಟ್ಟಲು ನಿವೇಶನ ಸ್ಥಳವಕಾಶ ಒದಗಿಸಲಾಗಿದೆ ಆದರೂ ನಗರಸಭೆ ಸದಸ್ಯರಿಗೆ ಇರುವ ಅಧಿಕಾರ ದಾಹದಿಂದಾಗಿ ಆಟೋ ನಗರದ ನಿವಾಸಿಗಳಿಗೆ ಪ್ಲಾಟ್ ದೊರೆಯುತ್ತಿಲ್ಲ ತೀವ್ರ ಸಂಕಷ್ಟದಲ್ಲಿರುವ ಈ ಜನರ ಒಳಿತಿಗಾಗಿ ಸ್ಥಳೀಯ ಶಾಸಕ ಜನಾರ್ದನರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕ್ರಮಕ್ಕೆ ಮುಂದಾಗಬೇಕೆಂದು ಭಾರದ್ವಜ್ ಒತ್ತಾಯಿಸಿದರು.
ಆಟೋ ನಗರ ಸಂಚಾಲಕ ದೊರೇರಾಜು ಮಾತನಾಡಿ, ಪೌರಾಯುಕ್ತ ವಿರುಪಾಕ್ಷ ಮೂರ್ತಿಯವರ ನಡೆಯನ್ನು ನಾವು ಖಂಡಿಸುತ್ತೇವೆ, ಕಾರ್ಮಿಕರಿಗೆ ಕಿಂಚತ್ತು ಬೆಲೆ ಕೊಡುವುದಿಲ್ಲ, ಕೀಳಾಗಿ ನೋಡುತ್ತಿರುವುದು ಖೇದಕರ, ದಶಕಗಳ ಹಿಂದೆ ನಾವು ಮುಕ್ಕುಂದಿ ಕುಟುಂಬದಿಂದ ಭೂಮಿ ಖರೀದಿಸಿ ಲೇಔಟ್ ಮಾಡಿಕೊಡಲು ನಗರಸಭೆಗೆ ರಿಜಿಸ್ಟರ್ ಮಾಡಿಕೊಡಲಾಗಿತ್ತು, ಕಾರ್ಮಿಕರೇ ಹಣ ಕೊಟ್ಟು ಭೂಮಿ ಖರೀದಿಸಿದ್ದು, ಆದರೆ ನಗರಸಭೆ ಪೌರಾಯುಕ್ತರು ಬದಲಾದಂತೆ ಮಾಹಿತಿ ಕೊರತೆಯಿಂದ ಮೆಕಾನಿಕ್‌ಗಳಿಗೆ ತುಂಬಾ ಸತಾಯಿಸುತ್ತಿದ್ದಾರೆ ೯೦ಕ್ಕು ಹೆಚ್ಚು ಕುಟುಂಬಗಳು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಆಟೋ ನಗರದ ನಿವಾಸಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದು ಶೀಘ್ರ ಬಗೆಹರಿಸಿ ಕಾರ್ಮಿಕರು ಅಲ್ಲಿ ಜೀವಿಸಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಾಹೀರಾತು

ಈ ಸಂದರ್ಭದಲ್ಲಿ ಮೆಕಾನಿಕ್ ಬಿ.ಶ್ರೀನಿವಾಸ್, ಬಿ.ಪ್ರಕಾಶ್, ಮೆಕಾನಿಕ್ ಲಾರಿ ಮೆಕಾನಿಕ್ ಹಾಗು ಭಾಷು ಟ್ರಾಕ್ಟರ್ ಇತರರಿದ್ದರು.

About Mallikarjun

Check Also

ಜೆಜೆಎಂ ಕಾಮಗಾರಿ ಅವೈಜ್ಞಾನಿಕ :ಮಳೆ ನೀರು ಗ್ರಾಮದೊಳಕ್ಕೆ ಸಾರ್ವಜನಿಕರಆಕ್ರೋಶ

JJM’s work is unscientific: Public outrage over rain water in the village ವರದಿ : ಪಂಚಯ್ಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.