Breaking News

ಕೊಪ್ಪಳ ಜಿಲ್ಲೆಯು ಸಾಹಿತ್ತಿಕವಾಗಿ ಶ್ರೀಮಂತವಾಗಿದೆ : ಜಗದೀಶ ಜಿ. ಎಚ್.

Koppal district is rich in literature : Jagdeesha G. H.


ಕೊಪ್ಪಳ : ಕೊಪ್ಪಳ ಜಿಲ್ಲೆಯು ಸಾಹಿತ್ತಿಕವಾಗಿ ಶ್ರೀಮಂತವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಡಾ. ಸಿದ್ಧಯ್ಯ ಪುರಾಣಿಕ, ದೇವೇಂದ್ರಕುಮಾರ ಹಕಾರಿ, ರಾಘವೇಂದ್ರ ಕುಷ್ಟಗಿ, ಪಂಚಾಕ್ಷರಯ್ಯ ಹಿರೇಮಠ, ಸುದರ್ಶನ ದೇಸಾಯಿ, ಈರಪ್ಪ ಕಂಬಳಿ, ಗಂಗಾವತಿ ಪ್ರಾಣೇಶ, ರಂ. ರಾ. ನಿಡಗುಂದಿ, ಡಾ.ವೀರಣ್ಣ ರಾಜೂರ, ಡಾ. ಬಿ.ವಿ. ಶಿರೂರ, ಬಸವರಾಜ ಸಬರದ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಿ.ಎಂ. ಹಿರೇಮಠ, ಗವಿಸಿದ್ದ ಎನ್. ಬಳ್ಳಾರಿ, ಎಚ್.ಎಸ್. ಪಾಟೀಲ, ಬಿ.ಸಿ. ಪಾಟೀಲ, ಈಶ್ವರ ಹತ್ತಿ, ಡಾ. ಕೆ. ಬಿ. ಬ್ಯಾಳಿ, ಶರಣಪ್ಪ ಬಾಚಲಾಪೂರ, ಹನುಮಂತಪ್ಪ ಅಂಡಗಿ ಚಿಲವಾಡಗಿ, ಶಾಂತಾದೇವಿ ಹಿರೇಮಠ, ಅರುಣಾ ನರೇಂದ್ರ, ವಿಮಲಾ ಇನಾಮದಾರ, ವೀರಣ್ಣ ವಾಲಿ, ಜಿ.ಎಸ್. ಗೋನಾಳ ಸೇರಿದಂತೆ ಹಲವಾರು ಸಾಹಿತಿಗಳು ಕೊಪ್ಪಳ ಜಿಲ್ಲೆಯು ಸಾಹಿತ್ಯಕವಾಗಿ ಶ್ರೀಮಂತವಾಗಲು ಶ್ರಮಿಸಿದ್ದಾರೆ. ಅಖಿಲ ಭಾರತ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಿರ್ಮಿಸಿರುವ ಈ ಸಾಹಿತ್ಯ ಭವನದ ನಿರ್ಮಾಣದಲ್ಲಿ ಮಾಜಿ ಶಾಸಕರಾದ ಎಂ.ಬಿ.ದಿವಟರ ಅವರ ಪಾತ್ರವೂ ಮಹತ್ವದ್ದಾಗಿದೆ. ಸಾಹಸಿ ಸಂಘಟಕರಾದ ಮಹೇಶಬಾಬು ಸುರ್ವೆ ಅವರು ಕಳೆದ ೧೫ ವರ್ಷಗಳಿಂದಲೂ ಸಹ ಕೊಪ್ಪಳ ಜಿಲ್ಲಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಸಂತಸದ ಮತ್ತು ಅಭಿಮಾನದ ಸಂಗತಿ ಎಂದು ಕೊಪ್ಪಳದ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಗದೀಶ ಜಿ. ಎಚ್. ಹೇಳಿದರು.

ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರು ವೇದಿಕೆಯು ಹಮ್ಮಿಕೊಂಡ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಹೈದ್ರಾಬಾದ್ ಪುಸ್ತಕ ಪ್ರಕಾಶಕರ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ನಡೆದ ಪ್ರಕಾಶಕರ ಎರಡನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಶಿಕ್ಷಣ ಸಂಯೋಜಕರಾದ ಭೀಮಪ್ಪ ಹೂಗಾರ, ಶಿಕ್ಷಕರ ಸಮ್ಮೇಳನದ ಅಧ್ಯಕ್ಷರಾದ ಉಮೇಶ ಸುರ್ವೆ, ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರಾದ ವೀರಣ್ಣ ವಾಲಿ, ಶಿಕ್ಷಕರಾದ ಅಂದಪ್ಪ ಬೋಳರೆಡ್ಡಿ, ವಿಜಯಲಕ್ಷಿ÷್ಮ ಕೊಟಗಿ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುರ್ವೆ, ಗೌರವಾಧ್ಯಕ್ಷರಾದ ಎಂ. ಬಿ. ಅಳವಂಡಿ, ಉಪಾಧ್ಯಕ್ಷರಾದ ಸಿದ್ದಪ್ಪ ಹಂಚಿನಾಳ, ಸಾಹಿತಿಗಳಾದ ಮಹೇಶ ಮನ್ನಾಪುರ, ಅನ್ನಪೂರ್ಣ ಮನ್ನಾಪೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾತಂಡಗಳಿAದ ಕಲಾ ಪ್ರದರ್ಶನಗಳು ನಡೆದವು.

About Mallikarjun

Check Also

ಬಿಜೆಪಿ, ಹಿಂದುಪರ ಸಂಘಟನೆಗಳು ಯಾಕೆ ಪ್ರಜ್ವಲ್ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ : ಜ್ಯೋತಿ ಪ್ರಶ್ನೆ

ಕೊಪ್ಪಳ : ದೇಶ ಕಂಡರಿಯದಂತಹ ಹೊಲಸು ಕೆಲಸ ಮಾಡಿರುವ ಜೆಡಿಎಸ್ ಸಂಸದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಕಾಮಕಾಂಡ ರಾಜ್ಯದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.