Molad preference for drinking water supply: Nagesh
ಪಪಂ ಮುಖ್ಯಾಧಿಕಾರಿಯಾಗಿ ನಾಗೇಶ ಅಧಿಕಾರ ಸ್ವೀಕಾರ.
ಯಲಬುರ್ಗಾ: ಪಟ್ಟಣ ಪಂಚಾಯಿತಿ ರೂಪಿಸಲು ಶ್ರಮಿಸಲಾಗುವುದು. ಕುಡಿವ ನೀರು, ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಹೆಚ್ಚಿನ ಆದ್ಯತೆ ವಹಿಸಿ, ಶಾಶ್ವತ ಪರಿಹಾರಕ್ಕೆ ಯತ್ನಿಸುವುದಾಗಿ ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು.
ಪಪಂ ಸಿಬ್ಬಂದಿಗಳು ಸನ್ಮಾನಿಸಿ ಬರಮಾಡಿಕೊಂಡರು.
ಅಧಿಕಾರ ಸ್ವೀಕರಿಸಿ ಪಪಂ ಮುಖ್ಯಾಧಿಕಾರಿ ನಾಗೇಶ ಸುದ್ದಿಗಾರರೊಂದಿಗೆ ಅವರು ಮಾತನಾಡಿ
ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಗಳಿಂದ ಮಾಹಿತಿ ಪಡೆಯುತ್ತೇನೆ, ಕುಡಿಯುವ ನೀರು ಪೂರೈಕೆಗೆ ಮೊಲದ್ ಆದ್ಯತೆ ಕೊಟ್ಟು ಕೆಲಸ ಕಾರ್ಯಗಳನ್ನು ಮಡುತ್ತೇನೆ, ಸಾರ್ವಜನಿಕರು ನೇರವಾಗಿ ಕಚೇರಿಗೆ ಬರುವ ಅವಶ್ಯಕತೆ ಇಲ್ಲ, ತಮ್ಮ ವಾರ್ಡುಗಳ ಸಮಸ್ಯೆಗಳನ್ನು ನನಗೆ ವಾಟ್ಸಪ ಮೂಲಕ ತಿಳಿಸಿದರೇ ನೇರವಾಗಿ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸುತ್ತೇನೆ ಪಟ್ಟಣದ ಎಲ್ಲಾ ವಾರ್ಡುಗಳ ಸ್ವಚ್ಚತೆಗೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತೇನೆ, ಪಪಂ ಸದಸ್ಯರಿಂದ ಮಾಹಿತಿ ಪಡೆದು ಎಲ್ಲಾ ವಾರ್ಡುಗಳ ಅಭಿವೃದ್ದಿಗೆ ಶ್ರಮಿಸುತ್ತೇನೆ, ಸಕ್ರೀಯವಾಗಿ ಕೆಲಸ ಮಾಡಿ ಮಾದರಿ ಪಪಂ ಅನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಉಮೇಶ ಬೇಲಿ, ಹೆಚ್.ರಾಮಣ್ಣ, ರಮೇಶ ಬೆಲೇರಿ, ಸುಭಾಷ್ ಭಾವಿಮನಿ, ಶಿವಕುಮಾರ ಸರಗಣಚಾರ, ಯಂಕಣ್ಣ ಜೋಶಿ, ನಾರಾಯಣ ಗಂಗಾಖೇಡ, ಸುಮಾ ಕಂಚಿ, ಚೆನ್ನಯ್ಯ ಸಂಕಿನಮಠ, ರವಿ ಯಕ್ಲಾಸಪೂರ, ಹನುಮಂತಪ್ಪ ಚಲವಾದಿ, ಹಾಗೂ ಇತರರು ಇದ್ದರು