Breaking News

ರಾಷ್ಟ್ರೀಯ ಪಕ್ಷ ಬಿಎಸ್ಪಿಗೆ ಅವಕಾಶನೀಡಿ:ಎಂ.ಕೃಷ್ಣಮೂರ್ತಿ

ಕೊಪ್ಪಳ.ಮೇ.04: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಿ ಬಿಎಸ್ ಪಿ ಪಕ್ಷವನ್ನು ಬೆಂಬಲಿಸುವಂತೆ ಬಹುಜನ ಸಮಾಜ ಪಾರ್ಟಿ ಪಕ್ಷದ ಕರ್ನಾಟಕ ಉಸ್ತುವಾರಿ ಹಾಗೂ ಸಂಯೋಜಕ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಶುಕ್ರವಾರದಂದು ಮಾತನಾಡಿದ ಅವರು,
ಈ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಆಡಳಿತ ನಡೆಸಿದ್ದು, ಬಿಎಸ್ಪಿ ಪಕ್ಷಕ್ಕೆ ಒಂದು ಅವಕಾಶ ನೀಡಿ. ಬಿಎಸ್ಪಿ ಪಕ್ಷವು ದೇಶದ ಅತಿ ದೊಡ್ಡ ರಾಷ್ಟ್ರೀಯ ಮೂರನೇ ಪಕ್ಷವಾಗಿದೆ ಎಂದ ಅವರು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ಅಕ್ರಮವಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡವಿಲ್ಲದಾಗಿದೆ. ಪ್ರಾಮಾಣಿಕ ಹೋರಾಟಕ್ಕೆ ಬಿಎಸ್ಪಿಯನ್ನು ಬೆಂಬಲಿಸಿ. ಜೆಡಿಎಸ್ ಪಕ್ಷದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ನ್ಯಾಯಯುತವಾದ ತನಿಖೆಯಾಗುತ್ತಿಲ್ಲ ಅವರ ವಿರುದ್ಧ ನ್ಯಾಯಯುತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಬಹುಜನ ಸಮಾಜ ಪಾರ್ಟಿ ಪಕ್ಷದ ಅಭ್ಯರ್ಥಿ ಶಂಕರ್ ಸಿದ್ದಾಪುರ ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಹುಜನ ಸಮಾಜ ಪಾರ್ಟಿ- ಬಿಎಸ್ಪಿ ಬೆಂಬಲಿಸಿ. ಗಂಗಾವತಿಯನ್ನು ನೂತನ ಕಿಷ್ಕಿಂದ ಜಿಲ್ಲಾ ಕೇಂದ್ರವಾಗಿಸುವುದು. ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಲು ಇಲ್ಲಿನ ಜನಪ್ರತಿನಿಧಿಗಳು ಮತ್ತು ಸರ್ಕಾರ ವಿಫಲವಾಗಿವೆ. ಕ್ಷೇತ್ರದಲ್ಲಿ ಇನ್ನೂ ಅನೇಕ ಸಮಸ್ಯೆಗಳಿದ್ದು, ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಈ ಬಾರಿ ಬಿಎಸ್ಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ನಂತರ ನಗರದಲ್ಲಿ ಇಂದು ಬಹಿರಂಗ ಪ್ರಚಾರ ಮಾಡಲಾಯಿತು
ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಶಿವಪುತ್ರಪ್ಪ ಗುಮಗೇರ, M.K.ಜಗ್ಗೇಶ್ ಮೌರ್ಯ, ಜಿಲ್ಲಾ ಉಸ್ತುವಾರಿ ಹುಲಿಗೇಶ ದೇವರಮನಿ,‌ಅಕ್ಬರ್ ಸಾಬ್,‌ ದುರ್ಗೇಶ್ ಸಂಗಾಪುರ, ಹುಲ್ಲೇಶ್ ಹೊಸಪೇಟೆ, ಸಂಜೀವ್ ಮೂರ್ತಿ ಬೇವಿನಗಿಡದ, ಮುತ್ತು ಪತ್ರಕರ್ತರು, ನಿಂಗಪ್ಪ ನಾಯಕ್, ಶಿವಣ್ಣ ಈಳಿಗನೂರು, ಅಂಜಿನಪ್ಪ ಈಳಿಗನೂರು, ದೊಡ್ಡಬಸಪ್ಪ ಸಾಯಿ ನಗರ,
ಹನುಮಂತಪ್ಪ, ಬಸವರಾಜ್ ಈಳಿಗನೂರು, ಹುಸೇನಪ್ಪ ಸಿದ್ದಾಪುರ, ಭೀಮೇಶ್ ಮೈಲಾಪುರ್, ಮಹದೇವ್ ಕಾಟಪುರ, ಭೀಮರಾಯ ಕಾಟಾಪುರ, ಹೊನ್ನೂರು ಸಿದ್ದಾಪುರ, ರೆಡ್ಡಿ ಮೈಲಾಪುರ, ಮಂಜುನಾಥ್ ಸಿದ್ದಾಪುರ ಇನ್ನಿತರರು ಇದ್ದರು.

About Mallikarjun

Check Also

ಲೋಕಾಯುಕ್ತರಿಂದ ಗಂಗಾವತಿ, ಕಾರಟಗಿ, ಕನಕಗಿರಿ  ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಗಂಗಾವತಿ 17:ತಾಲೂಕು ಮಂಧನ   ಸಭಾಂಗಣದಲ್ಲಿ  ಗಂಗಾವತಿ: ನಗರದ ತಾಲೂಕ ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಲೋಕಾಯುಕ್ತರು ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.