Shri Raghavendra Swami’s Grand Chariotsava,
ಗಂಗಾವತಿ,ಕಲಿಯುಗದ ಕಾಮಧೇನು ಕಲ್ಪವೃಕ್ಷ, ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ, 352 ಆರಾಧನಾ ಮಹೋತ್ಸವ ಅಂಗವಾಗಿ ಗಂಗಾವತಿಯ ರಾಯರ ಮಠದಲ್ಲಿ ಉತ್ತರ ಆರಾಧನೆಯ ಪ್ರಯುಕ್ತ ಶನಿವಾರದಂದು, ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ ಅತ್ಯಂತ ಸಂದರ್ಭದಲ್ಲಿ ಜರುಗಿತು, ಶ್ರೀ ಮಠದ ಆವರಣದಿಂದ ಹೊರಟ ರಥೋತ್ಸವ, ಮಹಾತ್ಮ ಗಾಂಧಿ ರಸ್ತೆಯ ವೆಂಕಟರಮಣ ದೇವಸ್ಥಾನ, ಮಾರ್ಗವಾಗಿ ಬಸವಣ್ಣ ವೃತ, ಶ್ರೀ ನಗರೇಶ್ವರ ದೇವಸ್ಥಾನ ಹಾಗೂ ಶ್ರೀ ಸುಂಕದ ಕಟ್ಟಿ ಪ್ರಾಣೇಶ, ದೇವಸ್ಥಾನದವರೆಗೆ ತೆರಳಿ ಮರಳಿ ತು, ರಥೋತ್ಸವ ಸಕಲವಾದ್ಯ ವೈಭವದೊಂದಿಗೆ, ಶ್ರೀ ಮಂತ್ರಾಲಯ ಪಾದಯಾತ್ರೆ ಭಜನಾ ಮಂಡಳಿಯ ಸದಸ್ಯರೊಂದಿಗೆ ವಿವಿಧ ಭಜನೆಯ ಮೂಲಕ ಆಗಮಿಸಿತು, ರಾಜಬೀದಿಯ ಉದ್ದಕ್ಕೂ ಭಕ್ತರು, ಕರ್ಪೂರ, ಹೂವು, ತೆಂಗಿನಕಾಯಿ, ಉತ್ತತ್ತಿ, ಸಮರ್ಪಿಸುವುದರ ಜೊತೆಗೆ, ವಿವಿಧ ಪುಷ್ಪಾರ್ಚನೆ ನಡೆಸಿ, ಭಕ್ತಿ ಪರಾ ಕಾಷ್ಟೆ ಮೆರೆದರು, ಈ ಸಂದರ್ಭದಲ್ಲಿ ದಾಸನಾಳ ಶ್ರೀನಿವಾಸ್, ಹೇರೂರು ವಿಜಯಕುಮಾರ್, ಎಚ್ ಕೆ ಗೋಪಾಲಕೃಷ್ಣ, ರಾಘವೇಂದ್ರ, ಅಳವಂಡಿಕರ್, ನಾಗರಾಜ ಆಚಾರ್ ಸರ್ ಜೋಶಿ, ಸುಧೀಂದ್ರ, ಪ್ರಹ್ಲಾದ ನವಲಿ, ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು,