Breaking News

ಸಿದ್ದು ಬಂಡಿವಡ್ಡರಿಗೆ ಭೋವಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ.

Siddu Bandivadda was given the post of President of Bhovi Nigam.

ಜಮಖಂಡಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಉತ್ತರ ಕರ್ನಾಟಕದ ಜನರ ಹಾಗೂ ನಾಯಕರ ಪ್ರಯತ್ನ ಸಿಂಹಪಾಲಿದ್ದು ಆದರೆ ನಿಗಮ ಸ್ಥಾಪನೆಯದಾ ವರ್ಷದಿಂದ ಇಲ್ಲಿವರೆಗೂ ಉತ್ತರ ಕರ್ನಾಟಕ ಒಬ್ಬ ವ್ಯಕ್ತಿಯು ಒಂದು ಬಾರಿಯೂ ನಿಗಮ ಅಧ್ಯಕ್ಷರಾಗಲಿ ಅಥವಾ ನಿರ್ದೇಶಕರಾಗಲಿ ಆಗದೇ ಇರುವುದು ದುರಷ್ಟಕರ ಸಂಗತಿ.

ಚಿಕ್ಕ ವಯಸ್ಸಿನಲ್ಲೇ ಯುವ ಘಟಕ ರಾಜ್ಯ ಸಂಚಾಲಕರಾಗಿ ರಾಜ್ಯಾದ್ಯಂತ ಸಮಾಜ ಸಂಘಟನೆ ಮಾಡಿದ್ದು ಈಗಿರುವ ಎಷ್ಟೋ ನಾಯಕರನ್ನು ಸಂಘಟನಾತ್ಮಕವಾಗಿ ಬೆಳಕಿಗೆ ತಂದವರು. ಸಮಾಜದ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದು 2012ರ ಡಿಸೆಂಬರ 11ರಲ್ಲಿ ಸದಾಶಿವ ಆಯೋಗದ ಸಲುವಾಗಿ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ನಡೆದ ಗಲಾಟೆಯಲ್ಲಿ ಉತ್ತರ ಕರ್ನಾಟಕದ ಅನೇಕ ಜನರು ರಕ್ತ ಹರಿಸಿದರು. ಅದರಲ್ಲಿ ಒಬ್ಬರಾದ ಇವರು ಸಮಾಜದ ಪರವಾಗಿ ನಡೆಯುವ ಹೋರಾಟಗಳಿಗೆ ತಮ್ಮ ಭಾಗದ ಜನರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಾ ಹಾಗೂ ಅನೇಕ ಸಮಾಜ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಾಗ ಈ ಬಗ್ಗೆ ರಾಜ್ಯದಲ್ಲಿ ಧ್ವನಿ ಎತ್ತಿದ ಮೊದಲ ನಾಯಕ ಇವರಾಗಿದ್ದು ಈ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ.

ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಭೋವಿ ಸಮುದಾಯದ ಇತಿಹಾಸವನ್ನು ಮೆಲಕು ಹಾಕಿದಾಗ ಉತ್ತರ ಕರ್ನಾಟಕದ ನಾಯಕರ ಹಾಗೂ ಜನರ ಪರಿಶ್ರಮ ಬಹಳವಿದೆ. ಉತ್ತರ ಕರ್ನಾಟಕದವರು ಆರ್ಥಿಕವಾಗಿ ಹಿಂದುಳಿದ ನಾಯಕರುಗಳು ಇರಬಹುದು ಆದರೆ ಜನಶಕ್ತಿ ಪ್ರದರ್ಶಿಸುವವಲ್ಲಿ ಯಾವತ್ತು ಮುಂದೆ ಇರುತ್ತಾರೆ. ನಿಗಮದ ಹಾಗೂ ಸಮಾಜದ ಸಲುವಾಗಿ ಹೋರಾಟ ಮಾಡುವುವಲ್ಲಿ ಉತ್ತರ ಕರ್ನಾಟಕದ ನಾಯಕ ಹಾಗೂ ಜನರ ಸಿಂಹಪಾಲಿದ್ದರು ಅಧಿಕಾರ ಅನುಭವಿಸುವ ಭಾಗ್ಯ ಇರುವುದಿಲ್ಲ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಾಂಗ್ರೆಸ ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ‌.ಶಿವಕುಮಾರ ಅವರು ಈ ಬಾರಿ ನಿಗಮದ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಹಾಗೂ ಯುವ ನಾಯಕರಾದ ಜಮಖಂಡಿಯ ಸಿದ್ದು ಬಂಡಿವಡ್ಡರ ಅವರಿಗೆ ನೀಡಬೇಕೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ಸಮಾಜದ ರಾಜ್ಯ ಮಾಧ್ಯಮ ಪ್ರತಿನಿಧಿ ಹಣಮಂತ ವಡ್ಡರ, ರಾಜ್ಯ ಸಂ.ಕಾರ್ಯದರ್ಶಿ ಶ್ರೀನಿವಾಸ ಕಂದಗಲ್ಲ, ಜಿಲ್ಲಾ ಸಂಚಾಲಕರಾದ ಪ್ರಸನ್ನ ಅಮರಾವತಿ, ಮಲ್ಲೇಶ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಮುತ್ತುರಾಜ ಬಂಡಿವಡ್ಡರ, ಯಮನೂರ ಪಾತ್ರೋಟ ಆಗ್ರಹಿಸಿದ್ದಾರೆ.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.