Breaking News

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ ವಿರುದ್ಧ ದೂರು ದಾಖಲಿಸಿಕೊಂಡ ಆಹಾರ ಇಲಾಖೆ ತನಿಖೆ ನೆಡೆಸಿ, ದಂಡವಸೂಲಿ ಮಾಡಿದ ಪ್ರಕರಣವು ಜರುಗಿದೆ.

ಸರ ಬಿಜೆಪಿ ಮುಖಂಡ ಮಹಿಬೂಬ್ ಸಾಬ್ ಮುಲ್ಲಾ ಮತ್ತು ಈತನ ಹೆಂಡತಿ ಸಾಜೀದಾ ಬೇಗಂ ಈ ಇಬ್ಬರು ದಂಪತಿಗಳು ಮತ್ತು ಇವರ ಕುಟುಂಬವು ಆರ್ಥಿಕವಾಗಿ ಎಲ್ಲಾ ರೀತಿಯಿಂದಲೂ ಸಬಲರಾಗಿದ್ದು, ಸದರಿ ಕುಟುಂಬದವರು ಐಶಾರಾಮಿ ಜೀವನ‌ ನೆಡೆಸುತ್ತಿರುವುದರ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು
ಖಾಸಗಿ ಕಾಲೇಜ್ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅಲ್ಲದೇ ಎ.ಸಿ, ಟೆಲಿವಿಜನ್, ಕಂಪ್ಯೂಟರ್, ಲ್ಯಾಪ್ ಟಾಪ್, ವಾಷಿಂಗ್ ಮಷಿನ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ವಡಿವೆಗಳು ಮತ್ತು ಸಾವೀರಾರು ರೂಪಾಯಿ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೊಬೈಲ್ ಳನ್ನು ಹಾಗೂ ಟೊಯೊಟಾ ಇನ್ನೊವಾ ಕ್ರಿಸ್ಟಾ ಹಾಗೂ ಮಾರುತಿ ಸ್ವಿಷ್ಟ್ ಡಿಜೈರ್ ಕಾರುಗಳನ್ನು ಹಾಗೂ 2 ಲಾರಿ, 1 ಟಾಟಾ ಎ.ಸಿ.ಇ ಮಿನಿಟ್ರಕ್ ಸೇರಿದಂತೆ ಹಲವಾರು ವಾಣಿಜ್ಯ ವಾಹನಗಳನ್ನು ಹೊಂದಿದ್ದಾರೆ. ಇದರ ಜೊತೆಯಲ್ಲಿ ಎಂ.ಡಿ.ಎಸ್ ಡೆಕೋರೇಟರ್ಸ್ ,ಸಿದ್ಧಾಪುರ ಎಂಬ ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ, ಕೊಟ್ಯಾಂತರ ರೂಪಾಯಿ ವಹಿವಾಟು ನೆಡೆಯುತ್ತಿರುವ ಜಿ.ಎಸ್.ಟಿ. ನಂಬರ್ ಗಳನ್ನು ಹೊಂದಿರುವ ವ್ಯವಾಹರಗಳನ್ನು

ನೆಡೆಸುತ್ತಿರುವುದಲ್ಲದೇ ಹಲವಾರು ಎಕ್ಕರೆ ಭೂಮಿಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಇವರು ಯಾವುದೇ ರೀತಿಯಿಂದಲೂ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆಯುವುದಕ್ಕೆ ಅರ್ಹತೆ ಹೊಂದಿರುವುದಿಲ್ಲಾ ಆದಾಗ್ಯೂ ಸಹ ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಸುಳ್ಳು ಮಾಹಿತಿಗಳನ್ನು ಸರಕಾರಕ್ಕೆ ಸಲ್ಲಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅನಧಿಕೃತವಾಗಿ “200100275238” ನಂಬರಿನ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆದಿರುತ್ತಾರೆ. ಅಲ್ಲದೇ ಈ ಕುಟುಂಬದ ಮುಖ್ಯಸ್ಥನಾಗಿರುವ ಮಹಿಬೂಬ್ ಮುಲ್ಲಾ ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಸಮಾಜದಲ್ಲಿ ಶಾಂತಿ ಕದಡಿ, ಅಶಾಂತಿ ಸೃಷ್ಟಿಸುವ ಹಾಗೂ ದೊಂಬಿ ಗಲಭೆ, ಗಲಾಟಿ ಎಬ್ಬಿಸುವ ವ್ಯಕ್ತಿತ್ವ ಹಾಗೂ ಜನಗಳ ಮೇಲೆ ದೌರ್ಜನ್ಯ ನೆಡೆಸುವು ವ್ಯಕ್ತಿತ್ವ ಹೊಂದಿದ್ದರಿಂದ ಮತ್ತು ಹಲವಾರು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಈತನನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿದೆ.ಎಂದು ಭ್ರಷ್ಟಾಚಾರ ನಿರ್ಮೂಲನ ವೇದಿಕೆ. ಮಹಮ್ಮದ್ ಜಾಕೀರ್ ಹುಸೇನ್ ಸಿದ್ದಾಪುರ ಇವರು ತಿಳಿಸಿದ್ದಾರೆ.

ವರದಿ:(ಸಿದ್ದಾಪುರ)

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.