Breaking News

ರೈತರು ಸಾವಯವ ಕೃಷಿಯಲ್ಲಿ ತೊಡಗಿ

Farmers engage in organic farming

ತಿಪಟೂರು :- ರೈತರು ರಾಸಾಯನಿಕ ಗೊಬ್ಬರದ ಕೃಷಿಗೆ ಮಾರು ಹೋಗದೆ ಸಾವಯವ ಕೃಷಿಯ ಮೂಲಕ ಉತ್ತಮ ಆರೋಗ್ಯ ಪಡೆಯಬೇಕಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ// ನವೀನ್ ಕುಮಾರ್ ತಿಳಿಸಿದರು ಅವರು ಗೊರಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮ ದಲ್ಲಿ ರೈತರ ಸಮಗ್ರ ಅಭಿವೃದ್ಧಿಯ ವಿಷಯ ಕುರಿತು ಉಪನ್ಯಾಸ ನೀಡುತ್ತ, ಉತ್ತಮವಾದ ಬೆಳೆ ಬೆಳೆದಾಗ ಲಾಭ ಕಂಡಿತ ಬರುತ್ತದೆ, ಮಳೆ ಅವಲಂಭಿತ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಳನಾಡು ಗೋಶಾಲೆಯ ಶ್ರೀಗುರುಗಳು ಮಾತನಾಡುತ್ತ ,ಪ್ರತಿ ಮನೆಯಲ್ಲಿಯೂ ದೇಶಿ ಹಸುಗಳನ್ನು ಸಾಕುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ, ಗಂಜಲ ಮತ್ತು ಗೋಮಯ ದಿಂದ ಆರೋಗ್ಯವೃದ್ದಿಸಿಕೊಳ್ಳಬಹುದಾಗಿದೆ, ಎಂದರು,
ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಎಸ್.ಫ್.ಕಮಾಂಡರ್ ಯೋಧ ಶಿವಣ್ಣ ಮಾಯಸಂದ್ರ,ರವರು ಮಾತನಾಡುತ್ತ ,ಯೋಧನ ಅವಶ್ಯಕತೆ, ಈ ದೇಶಕ್ಕೆ ರೈತ ನಷ್ಟೇ ಇದೆ,ಈ ಇಬ್ಬರು ಭಾರತ ಮಾತೆಯ ಕಣ್ಣುಗಳಿದಂತೆ ಎಂದರು.
ಟಿ.ಎ.ಪಿ.ಎಂ.ಸಿ.ಎಸ್.ನ ಅಧ್ಯಕ್ಷ ರಾದ ಹೆಚ್.ಬಿ.ನಾಗರಾಜು ಮಾತನಾಡುತ್ತ ಜೈ ಜವಾನ್ ಮತ್ತು ಜೈ ಕಿಸಾನ್,ಎಂಬ ನಾಣ್ಣುಡಿಗೆ ಅರ್ಥ ಬರಬೇಕೆಂಬ ಹಿನ್ನೆಲೆಯ ರೈತ ದಿನಾಚರಣೆಯ ಅಂಗವಾಗಿ ,ರೈತರನ್ನು ಮತ್ತು ಸೈನಿಕರನ್ನು ಸ್ಮರಿಸುವ ಕೆಲಸ ನಮ್ಮ ಸಹಕಾರ ಸಂಘದ ವತಿಯಿಂದ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘದ ಅಧ್ಯಕ್ಷ ರಾದ ಹೆಚ್.ಸಿ.ರಾಜಶೇಖರಯ್ಯ ಮಾತನಾಡುತ್ತ ರೈತ ಮತ್ತು ಸೈನಿಕ ನಮ್ಮ ದೇಶದ ಎರಡು ಕಣ್ಣುಗಳಿದಂತೆ ಆದ್ದರಿಂದ ಪ್ರತಿಯೊಬ್ಬರು ಈ ಇಬ್ಬರನ್ನು ತಪ್ಪದೇ ಪ್ರತಿದಿನ ಸ್ಮರಿಸಬೇಕೆಂದರು.
ಕಾರ್ಯಕ್ರಮದಲ್ಲಿ 8 ಜನ ರೈತರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು, ಸದಸ್ಯರುಗಳು, ಉಪಸ್ಥಿತರಿದ್ದರು

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.