
ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ ಬಸವರಾಜ್ ಇವರ ಮನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶನಿವಾರ ರಾತ್ರಿ 2:30 ಸಮಯದಲ್ಲಿ ಮನೆಯಲ್ಲಿದ್ದ ದಾಖಲೆ ಪತ್ರಗಳು ಹಣ ಒಡವೆ ಫ್ರಿಡ್ಜ್ ಟಿವಿ ಬಟ್ಟೆಗಳು ಸೇರಿದಂತೆ ಸುಟ್ಟು ಬಸ್ಮವಾಗಿರುವ ಘಟನೆ
ಕೊಟ್ಟಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ ಸುಮಾರು 20 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ತಿನ್ನಲು ಊಟ ಧರಿಸಲು ಬಟ್ಟೆ ಇಲ್ಲದೆ ಈ ಕುಟುಂಬ ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. ಅದೃಷ್ಟವಶ ಮನೆಯಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ದಲಿತ ಮುಖಂಡಚಿಗ್ಗಾವೆ ಪುಟ್ಟಸ್ವಾಮಿ ಮನೆಯವರಿಗೆ ಧೈರ್ಯ ತುಂಬಿ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಜಿಲ್ಲಾ ಮತ್ತು ತಾಲ್ಲೂಕು ಕೊಡಿಸಬೇಕೆಂದು ಮನವಿ ಮಾಡಿದರು.
ವರದಿ ಮಂಜು ಗುರುಗದಹಳ್ಳಿ