Breaking News

28 ವರ್ಷದ ಬಳಿಕ ಸ್ನೇಹ ಸಮ್ಮಿಲನ ಸಂಭ್ರಮ

Celebration of friendship after 28 years

ಜಾಹೀರಾತು
ಜಾಹೀರಾತು


ಕಂಪ್ಲಿ..4 ನಗರದ ಶ್ರೀ ಪ್ರಭು ಸ್ವಾಮಿಗಳವರ ಕಲ್ಮಠ ಪ್ರೌಢಶಾಲೆಯ 1994 -95ನೇ ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಇತ್ತೀಚಿಗೆ ಖಾಸಗಿ ರೆಸ್ಟೋರೆಂಟ್ ನಲ್ಲಿ ಆಯೋಜಿಸಲಾಯಿತು
ಜಯಚಂದ್ರಿಕಾ ಲೋಕೇಶ್ ಸುನಿಲ್ ರಾಜಶೇಖರ್ ಅಶೋಕ್ ಬಸಮ್ಮ ಶರಣಪ್ಪ ಸಜ್ಜನ್ ಹನುಮೇಶ ಬಟಾರಿ ಇವರ ನೇತೃತ್ವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳನ್ನು ಸಮ್ಮಿಲನದಲ್ಲಿ ತೊಡಗಿಸಿ ಕೊಳ್ಳುವದರ ಮೂಲಕ 65 ಹಳೆಯ ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಪರಸ್ಪರ ಮಾತುಕತೆ ಯೋಗ ಕ್ಷೇಮ ಕುರಿತು ಚರ್ಚಿಸಲಾಯಿತು ಬಳಿಕ ಇತ್ತೀಚಿಗಷ್ಟೇ ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಆಗಮಿಸಿದ ಗೆಳೆಯ ಸುರೇಶ್ ಕಸುಮೂರ್ತಿ ಹಾಗೂ ಬಳ್ಳಾರಿ ಜಿಲ್ಲೆಯ ಪ್ರೌಢಶಾಲೆಯ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಪಡೆದ ಡಾಕ್ಟರ್. ಸುನಿಲ್ ಅವರನ್ನು ಎಲ್ಲಾ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಬಳಿಕ ಸಂಸ್ಕೃತಿಕ ಕಾರ್ಯಕ್ರಮ ಅಡಿಯಲ್ಲಿ ಹಾಡು ಮಿಮಿಕ್ರಿ ವ್ಯಕ್ತಿಗತ ಅನುಭವಗಳನ್ನು ಹಂಚಿಕೊಳ್ಳಲಾಯಿತು.. ಇದೇ ಸಂದರ್ಭದಲ್ಲಿ ಮುಂದಿನ ದಿನದಲ್ಲಿ ನಮಗೆ ಶಿಕ್ಷಣ ಕಲ್ಪಿಸಿದ ಗುರುಗಳನ್ನು ಗುರುವಂದನಾದ ಕಾರ್ಯಕ್ರಮದ ಮೂಲಕ ಗೌರವಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು ಒಟ್ಟಾರೆ ಸ್ನೇಹವೇ ಚಿರಬಾಳ ಸಂಜೀವಿನಿ ಎನ್ನುವಂತೆ ಪರಸ್ಪರ ಹಳೆಯ ನೆನಪುಗಳನ್ನು ಸ್ಮರಿಸಲಾಯಿತು

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.