Baranti died in a government hospital.

ಶ್ವಾಸಕೋಶದ ಸಮಸ್ಯೆಯಿಂದ ಸಾವು. ಸಾವಿನ ಸುತ್ತಶಂಕೆ
ತಿಪಟೂರು : ನಗರದ ಸಾರ್ವಜನಿಕ ಸರ್ಕಾರಿ ಆಸ್ವತ್ರೆಯಲ್ಲಿ ಬಾಣಂತಿ ಸಾವನ್ನಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ, ನಿವಾಸಿಯಾಗಿದ್ದ ತಾಲ್ಲೂಕಿನ ಗಾಂಧಿನಗರದ ತವರು ಮನೆಗೆ ಬಂದಿದ್ದ ಫಿರ್‌ದೋಸ್ (26) ಸಾವು. ಎರಡನೇ ಬಾಣಂತಿ. ಡಿ. 27 ಬೆಳಗ್ಗೆ 11.30 ರಲ್ಲಿ ಹೆರಿಗೆ ನೋವಿನಿಂದ ಸಾರ್ವಜನಿಕ ಆಸ್ವತ್ರೆಗೆ ದಾಖಾಲಿಗಿದ್ದು, ಮಧ್ಯಾಹ್ನ 1.11 ರಲ್ಲಿ ಹೆರಿಗೆಯಾಗಿದ್ದು, ಡಿ 28 ರಂದು ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ಬಾಣಂತಿ ಸಾವನ್ನಪ್ಪಿರುತ್ತಾರೆ. ಮಹಿಳೆಗೆ ಶ್ವಾಸಕೋಶದ ಸಮಸ್ಯೆಯಿಂದ ಸಾವನ್ನಪ್ಪಿದ್ದು ಸಾವಿನ ಸುತ್ತ ಶಂಕೆ ವ್ಯಕ್ತವಾಗಿದ್ದು, ತನಿಖೆಯ ನಂತರ ಖಚಿತ ಮಾಹಿತಿ ತಿಳಿಯಲಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.
ವರದಿ ಮಂಜು ಗುರುಗದಹಳ್ಳಿ
Kalyanasiri Kannada News Live 24×7 | News Karnataka
