Breaking News

ಮಹರ್ಷಿ ವಾಲ್ಮೀಕಿ ಜಾತ್ರೆ ಯಾವುದೋ ಒಂದು ವರ್ಗ ಅಥವಾ ಪಕ್ಷಕ್ಕೆಸೀಮಿತಗೊಳಿಸದೆ ಎಲ್ಲರೂಸೇರಿಅರ್ಥಪೂರ್ಣವಾಗಿಆಚರಿಸಬೇಕು-ಶಿರಿಬಿ ಕೊಟ್ರೇಶ್

Maharshi Valmiki Jatre should not be restricted to any class or party and should be celebrated meaningfully by all.-Shiribi Kotresh

ಜಾಹೀರಾತು
IMG 20241229 WA0376

ಕೊಟ್ಟೂರಿನಲ್ಲಿ ಪೂರ್ವಭಾವಿ ಸಭೆ”

ಕೊಟ್ಟೂರು: ಪಟ್ಟಣದ ವಾಲ್ಮೀಕಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಪ್ರಯುಕ್ತ ಕೆಲೆಂಡರ್ ಬಿಡುಗಡೆ ಮಾಡಲಾಯಿತು

ನಂತರ ಗುರುಪೀಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಮಾತನಾಡಿ, ಸ್ತ್ರೀ-ಪುರುಷ ಸರಿಸಮಾನತೆಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿ ಬೋಧಿಸಿದ್ದು ಪ್ರತಿಯೊಬ್ಬರೂ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು.ರಾಜನಹಳ್ಳಿ ಯಲ್ಲಿ 08-09 ಫೆಬ್ರವರಿ 2025 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರೆ ಮಹಾ ರಥೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮುದಾಯದ ಮುಖಂಡರು ಶ್ರಮಿಸಬೇಕು ಎಂದರು.

ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಈ ಹಿಂದಿನಂತೆ ಅರ್ಥಪೂರ್ಣವಾಗಿ ಆಚರಿಸಲು ಕೊಟ್ಟೂರು ತಾಲ್ಲೂಕು ವಾಲ್ಮೀಕಿ ಪ್ರಮುಖ ಮುಖಂಡರು ಹಾಗೂ ಯುವಕರು ಭಾಗವಹಿಸಿ ವಿಜೃಂಭಣೆಯಿಂದ ಆಚರಿಸಲು ಕೋರಿದರು

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ತೋಟದ ರಾಮಣ್ಣ,ಕರವೇ ಅಧ್ಯಕ್ಷ ಎಂ ಶ್ರೀನಿವಾಸ್ ಸುಂಕದಕಲ್ಲು ನಾಗರಾಜ್, ಮಂದಾರ ಮಂಜುನಾಥ, ಬಿ ಅಂಜಿನಪ್ಪ, ಡಿ ನಾಗರಾಜ, ಕೋವಿ ಬೊಮ್ಮಪ್ಪ, ಓಬಳೇಶ, ಬೇಣಕಲ್ಲು ಹನುಮತಪ್ಪ, ಕನ್ನಕಟ್ಟೆ ಶಶಿಧರ್,  ದೇವೇಂದ್ರಪ್ಪ ನಾಗರಾಕಟ್ಟಿ ದೇವೇಂದ್ರಪ್ಪ, ಶಿರಿಬಿ ವೆಂಕಟೇಶ್, ಇನ್ನೂ ಅನೇಕ ವಾಲ್ಮೀಕಿ ಮುಖಂಡರು ಉಪಸ್ಥಿತರಿದ್ದರು.

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.