Breaking News

ಒಳಮೀಸಲಾತಿ ಕುರಿತು ಸುಪ್ರಿಂ ಕೋರ್ಟ್ನೀಡಿದ ತೀರ್ಪು: ಸಂತಸದಾಯಕ ಯಲ್ಲಪ್ಪ ಕಟ್ಟಿಮನಿ

Supreme Court Judgment on Internal Reservation: A Satisfying Yallappa Kattimani

ಜಾಹೀರಾತು



ಗಂಗಾವತಿ: ಆಗಸ್ಟ್-೧ ರಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.ಈ ತೀರ್ಪು ದೇಶದ ಹಲವು ರಾಜ್ಯಗಳಲ್ಲಿ ಮೀಸಲಾತಿಯಿಂದ ವಂಚಿತರಾಗಿರುವ
ಪರಿಶಿಷ್ಟ ಜಾತಿಯ ಸಮುದಾಯಗಳ ಜನರಿಗೆ ನ್ಯಾಯ ತಂದುಕೊಟ್ಟಿದೆ. ಒಳಮೀಸಲಾತಿಗಾಗಿ ಅಗ್ರಹಿಸಿ ಕಳೆದ ೩೫ ವರ್ಷಗಳಿಂದ ಮಾದಿಗರು ಮತ್ತುಸಂಬ೦ಧಿತ ಜಾತಿಗಳು ಅವಿರತವಾಗಿ ಸಂಘರ್ಷ ನಡೆಸಿಕೊಂಡು ಬಂದಿದ್ದವು.
ಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉಪ ವರ್ಗಿಕರಣವುಸಂವಿದಾನದಲ್ಲಿ ಇದೆ ಎಂದು ಸುಪ್ರೀಂ ಕೋರ್ಟ್ ಬಹುಮತದೊಂದಿಗೆ ತೀರ್ಪು
ನೀಡಿದೆ. ಉಪ-ವರ್ಗೀಕರಣವು ಸಂವಿಧಾನದ ಹಕ್ಕು ಸಮಾನತೆ ಬೇಡಿಕೆಉಲ್ಲಂಘನೆಯಾಗುತ್ತದೆ ಎಂದು ಇ.ವಿ. ಚೆನ್ನಯ್ಯ ಪ್ರಕರಣದ ೨೦೦೪ ರತೀರ್ಪುನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕುವುದರ ಮೂಲಕಕರ್ನಾಟಕವನ್ನೊಳಗೊಂಡು ವಿವಿಧ ರಾಜ್ಯಗಳಲ್ಲಿ ಮೀಸಲಾತಿಯಿಂದವಂಚಿತರಾದವರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ. ಈ ತೀರ್ಪು ನಮಗೆ ಸಂತಸ
ತಂದಿದೆ ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದರು.
ಇದರ ನಿಜವಾದ ಯಶಸ್ಸು ಲಾಠಿ ಏಟು ಕೇಸು, ಅವಮಾನ ಅನ್ಯಾಯಕ್ಕೆಗುರಿಯಾದರೂ ತಮ್ಮ ನ್ಯಾಯಸಮ್ಮತ ಹಕ್ಕಿಗಾಗಿ ಅವಡುಗಚ್ಚಿ ಹೋರಾಟನಡೆಸುತ್ತಾ ಬಂದ ನೊಂದ ಜನತೆಗೆ ಸಲ್ಲುತ್ತದೆ, ಈ ಹೋರಾಟದ ಜೊತೆಗೆದೃಡವಾಗಿ ನಿಂತ ಎಲ್ಲಾ ಸಮಾನ ಪನಸ್ಕರ ಬೆಂಬಲಕ್ಕೆ ನಾವು ಅಭಾರಿಗಳಾಗಿದ್ದೇವೆ.
ನೊಂದ ಜನರ ಪರವಾಗಿ ತೀರ್ಪು ನೀಡಿದ ದೇಶದ ಸುಪ್ರೀಂ ಕೋರ್ಟಿನನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತಿದೇವೆ. ತೀರ್ಪಿನಲ್ಲಿ ಕೆನೆ ಪದರಮತ್ತು ಇತರೆ ಇವಚಾರಗಳ ಉಲ್ಲೇಖವಿದ್ದು ಅದನ್ನು ಸ್ಪಷ್ಟಪಡಿಸಿಕೊಂಡುಅಗತ್ಯ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗ ರಾಜ್ಯ ಸರ್ಕಾರದ ಮೇಲೆ
ಒಳಮೀಸಲಾತಿ ಗಂಟು ಬಿದ್ದಿದೆ, ಮಾನ್ಯ ಸಿದ್ದರಾಮಯ್ಯನವರು ರಾಜ್ಯದ ಪ.ಜಾ /ಪ.ಪಂ.ದ ೧೫೭ ಸಮುದಾಯಗಳಿಗೆ ನ್ಯಾಯ ಕೊಡಲು ಮುಂದಾಗಬೇಕಿದೆ.
ಆದಷ್ಟು ಬೇಗ ರಾಜ್ಯ ಸರಕಾರ ಸುಪ್ರೀಂ ಕೋರ್ಟಿನ ಆದೇಶದ

ಪ್ರತಿಗಳನ್ನು ತರಿಸಿಕೊಂಡು ಸಚಿವ ಸಂಪುಟ ಸಭೆ ಕರೆದು ವಂಚಿತ
ಸಮುದಾಯಗಳಿಗೆ ನ್ಯಾಯ ಕೊಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀಸಿದ್ದರಾಮಯ್ಯನವರ ಸರಕಾರ ಮುಂದಾಗಬೇಕು. ತಡ ಮಾಡಿದಷ್ಟು ರಾಜ್ಯಸರಕಾರಕ್ಕೆ ಇದರಿಂದ ಕಷ್ಟವಾಗಬಹುದು ಎಂಬುದನ್ನು ಮನಗಾಣಬೇಕು ಎಂದು
ನಮ್ಮ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿತಿಳಿಯಪಡಿಸುತ್ತದೆ ಎಂದು ತಿಳಿಸಿದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.