Breaking News

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದಸಾಂಸ್ಕೃತಿಕ ಭಾವಚಿತ್ರವನ್ನುಕೈಬಿಡಲಾಗಿದ್ದು, ಕೂಡಲೇ ಸರಿಪಡಿಸಿಕೊಳ್ಳಲು ಮನವಿ.

The cultural portrait of Karnataka was omitted from the 13th District Kannada Literary Conference, and a request is made to correct this immediately.

ಜಾಹೀರಾತು

27 ಮತ್ತು 28 ರಂದು ಗಂಗಾವತಿಯಲ್ಲಿ ನಡೆಯುತ್ತಿರುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರು ಮತ್ತು ಭಾವಚಿತ್ರವನ್ನು ಕೈಬಿಡಲಾಗಿದ್ದು, ಕೂಡಲೇ ಸರಿಪಡಿಸಿಕೊಳ್ಳಲು ಗಂಗಾವತಿ ರಾಷ್ಟ್ರೀಯ ಬಸವದಳ. ಮನವಿ.

ಗಂಗಾವತಿ,೨೫:13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ಕರ್ನಾಟಕ ಸರ್ಕಾರ ಕಳೆದ ವರ್ಷ 12ನೇ ಶತಮಾನದಲ್ಲಿ ಸಮಾನತೆಯ ಅರಿವು ಮೂಡಿಸಿದ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುತ್ತದೆ.

Oplus_131072

ಆದರೆ ಪ್ರಸ್ತುತ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದ ಆಹ್ವಾನ ಪತ್ರಿಕೆ. ಬ್ಯಾನರ್ ಹಾಗೂ ವೇದಿಕೆ ಮುಂತಾದವುಗಳಲ್ಲಿ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಹಾಗೂ ಹೆಸರನ್ನು ಕೈಬಿಟ್ಟಿರುವುದು ವಿಶ್ವಗುರು ಬಸವಣ್ಣನವರಿಗೆ ಮತ್ತು ಕನ್ನಡಿಗರಿಗೆ ಅಪಮಾನ ಮಾಡಿದಂತಾಗಿದೆ.

ಕೂಡಲೇ ತಾವು ಇದನ್ನು ಸರಿಪಡಿಸಿಕೊಳ್ಳಲು ಒತ್ತಾಯಿಸುತ್ತೇವೆ. ಒಂದುವೇಳೆ ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಟಪಕ್ಷ ಸಮ್ಮೇಳನ ನಡೆಯುವ ವೇದಿಕೆಯಲ್ಲಿ ಬಸವಣ್ಣನವರ ಭಾವಚಿತ್ರ ಇರಿಸಲು ಕೋರುತ್ತಾ, ಸಮ್ಮೇಳನದ ಉದ್ಘಾಟನೆಯನ್ನು ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ, ಬಸವಣ್ಣನವರ ಭಾವಚಿತ್ರ ಅಥವಾ ಪುತ್ಥಳಿಗೆ ಗೌರವಪೂರ್ವಕವಾಗಿ ಪುಷ್ಪಾರ್ಪಣೆ ಮಾಡುವ ಮೂಲಕ ಸಮ್ಮೇಳನ ಉದ್ಘಾಟಿಸಲು ಕೋರುತ್ತೇವೆ.

ಒಂದುವೇಳೆ ತಾವು ನಿರ್ಲಕ್ಷ್ಯವಹಿಸಿದಲ್ಲಿ ತಾವು ಸ್ವಾಭಿಮಾನಿ ಕನ್ನಡಿಗರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತೀರೆಂದು ತಿಳಿಸಲಿಚ್ಚಿಸುತ್ತೇವೆ.

.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *