
Black Belt Distribution

ಬ್ಲಾಕ್ ಬೆಲ್ಟ್ ವಿತರಣೆ

ಕೊಪ್ಪಳ: ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಲಾಯಿತು.
ಈ ತರಬೇತಿ ಮತ್ತು ಪರೀಕ್ಷೆಯಲ್ಲಿ ಕೊಪ್ಪಳದಿಂದ ಭಾಗವಹಿಸಿದ್ದ ದೇವಪ್ಪ ಕಲ್ಲನವರ ಬ್ಲಾಕ್ ಬೆಲ್ಟ್ 3 ಡಾನ್, ತಿರುಮಲ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಮತ್ತು ರೇಣುಕಾ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಪಡೆದುಕೊಂಡಿದ್ದು ಅವರಿಗೆ NSKAI ಸಂಸ್ಥೆಯ ಮುಖ್ಯಸ್ಥರಾದ ಶಿಹಾನ್ ಸಂಜಯ ಇಂಗೋಲೆ ರವರು ಬ್ಲಾಕ್ ಬೆಲ್ಟ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ NSKAI ಕರ್ನಾಟಕದ ಅಧ್ಯಕ್ಷರಾದ ಶನ್‌ಸಾಯ್ ಡಿ, ಬಾಷಾ ಸಾಹೇಬ್ ಉಪಸ್ಥಿತರಿದ್ದರು.
ಬ್ಲಾಕ್ ಬೆಲ್ಟ್ ಪಡೆದ ತರಬೇತುದಾರರಿಗೆ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮುಖಂಡರಾದ ಯಮನೂರಪ್ಪ ನಾಯಕ, ರಾಜಬಕ್ಷಿ ಎಚ್, ವಿ ಸೇರಿದಂತೆರ ವಿಧ್ಯಾರ್ಥಿಗಳು ಶುಭಕೋರಿದ್ದಾರೆ.
