Breaking News

ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Application Invitation for the post of Anganwadi Worker, Assistant

ಜಾಹೀರಾತು

ಸಿಂಧನೂರು,ಸೆ.24 – ತಾಲೂಕಿನ ಶಿಶು ಅಭಿವೃದ್ಧಿ ಸಿಂಧನೂರು ಯೋಜನಯಡಿ ಖಾಲಿ ಇರುವ 01 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗೂ 04 ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧನೂರು ಲಿಂಗನಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಸೋಮಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಕಾಪುರ ಕ್ಯಾಂಪಿನ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ 01 ಹುದ್ದೆಗೆ ಮೀಸಲಾತಿ ಇತರೆ , ಗೌಡನಭಾವಿ ಗ್ರಾಮ ಪಂಚಾಯತಿಯ ಗೌಡನಭಾವಿ ಕ್ಯಾಪಿನ ಅಂಗನವಾಡಿ ಸಹಾಯಕಿ 01 ಹುದ್ದೆಗೆ ಮೀಸಲಾತಿ ಇತರೆ, ಹಾಗೂ ಸಾಗರ್ ಕ್ಯಾಂಪಿನ ಕೇಂದ್ರ – 1 ರಲ್ಲಿ ಅಂಗನವಾಡಿ ಸಹಾಯಕಿ 01 ಹುದ್ದೆಗೆ ಮೀಸಲಾತಿ ಪರಿಶಿಷ್ಟ ಜಾತಿ , ಸೋಮಲಾಪುರ ಗ್ರಾಮ ಪಂಚಾಯತಿಯ ಸೋಮಲಾಪುರ ಕೇಂದ್ರ – 3ರ ಸಹಾಯಕಿ 01 ಹುದ್ದೆಗೆ ಮೀಸಲಾತಿ ಪರಿಶಿಷ್ಟ ಜಾತಿ.ಹಾಗೂ
ಸೋಮಲಾಪುರ ಕೇಂದ್ರ – 4ರ ಸಹಾಯಕಿ 01 ಹುದ್ದೆಗೆ ಮೀಸಲಾತಿ ಪರಿಶಿಷ್ಟ ಜಾತಿ. ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖಾ ವೆಬ್ ಸೈಟ್ https:// dwcd.karnataka.gov.in (online service) ಮುಖಾಂತರ ಅಥವಾ https://karnemakaone.kar.nic.in./abcd ಮುಖಾಂತರ ಆನ್ ಲೈನ್ ನಲ್ಲಿ ನಲ್ಲಿ ಆಸಕ್ತ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ದಿನಾಂಕ ಅಕ್ಟೋಬರ್ 21 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇಲ್ಲಿ ( 08535-295108) ಕರೆ ಮಾಡಿ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧನೂರು ಲಿಂಗನಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *