A survey under police security to clear encroachments at the historic Sri Lakshmi Narayana Lake in Singapore on July 4th.

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೇ ನಂ: ೪೮, ವಿಸ್ತೀರ್ಣ ೪೨-೨೧ ಎ-ಗುಂ ವಿಸ್ತೀರ್ಣದ ವಿಜಯನಗರ ಪುರಾತನ ಕಾಲದ ಶ್ರೀ ಲಕ್ಷ್ಮಿ ನಾರಾಯಣ ಕೆರೆಯು ಜಲ ಸಂಪನ್ಮೂಲ ಇಲಾಖೆಗೆ ಸಂಬAಧಪಟ್ಟಿರುತ್ತದೆ. ಈ ಕೆರೆಯ ಜಾಗೆಯನ್ನು ಸುತ್ತಮುತ್ತಲಿನ ಜಮೀನುಗಳ ಮಾಲಿಕರು ಒತ್ತುವರಿ ಮಾಡಿದ್ದು, ಒತ್ತುವರಿ ತೆರವುಗೊಳಿಸಲು ತಹಶೀಲ್ದಾರರಿಗೆ ಮನವಿ ಮಾಡಲಾಗಿದ್ದು, ಸದರಿ ವಿಷಯವಾಗಿ ಈಗಾಗಲೇ ಜುಲೈ-೦೧ ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯನ್ನು ಸರ್ವೆ ಮಾಡಲು ಬಂದಾಗ ಅಕ್ಕಪಕ್ಕದ ಜಮೀನುಗಳ ಮಾಲಿಕರು ಅಡ್ಡಿಪಡಿಸಿದ್ದರಿಂದ ಜುಲೈ-೦೪ ಶುಕ್ರವಾರ ಪೊಲೀಸ್ ಭದ್ರತೆಯಲ್ಲಿ ಸರ್ವೆ ಮಾಡಲಿದ್ದಾರೆ ಎಂದು ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘದ ಅಧ್ಯಕ್ಷರಾದ ಖಮರಪಾಷಾ ಆಗ್ರಹಿಸಿದ್ದಾರೆ.
ಕೆರೆ ಒತ್ತುವರಿಯಾದ ಬಗ್ಗೆ ನಮ್ಮ ಶ್ರೀ ಲಕ್ಷಿö್ಮÃನಾರಾಯಣ ಕೆರೆ ಅಭಿವೃದ್ಧಿ ರೈತ ಸಂಘ ನೀಡಿದ ದೂರನ್ನು ಕಂದಾಯ ಪರಿಶೀಲಿಸಿ ಒತ್ತುವರಿಯನ್ನು ತೆರವುಗೊಳಿಸಲು ಶ್ರೀ ಲಕ್ಷಿö್ಮÃನಾರಾಯಣ ಕೆರೆಯ ಜಾಗೆಯನ್ನು ಜುಲೈ-೦೪ ಶುಕ್ರವಾರ ಸರ್ವೇ ಮಾಡಲು ಸುತ್ತಮುತ್ತಲಿನ ಜಮೀನುಗಳ ಮಾಲಿಕರುಗಳಿಗೆ ಮರು ನೋಟಿಸ್ ನೀಡಿರುತ್ತಾರೆ ಎಂದು ತಿಳಿಸಿದರು.
ಐತಿಹಾಸಿಕ ಕೆರೆಯಾದ ಸಂಗಾಪುರದ ಶ್ರೀ ಲಕ್ಷಿö್ಮÃನಾರಾಯಣ ಕೆರೆಯ ಉಳಿವಿಗಾಗಿ, ಸರ್ವೇ ಕಾರ್ಯ ನಡೆಯುವುದನ್ನು ವರದಿ ಮಾಡಲು ಎಲ್ಲಾ ಮುದ್ರಣ ಮಾದ್ಯಮ, ದೃಶ್ಯ ಮಾಧ್ಯಮಗಳ ಪತ್ರಿಕಾ ವರದಿಗಾರರು ಆಗಮಿಸುವಂತೆ ಕೋರಿದ್ದಾರೆ.