Breaking News

ಸರಕಾರಿ ಶಾಲೆಗಳನ್ನು ಉಳಿಸಲುಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯ

The All India Development Struggle Committee urges to save government schools

ಜಾಹೀರಾತು

ಗಂಗಾವತಿ -3-ಸರಕಾರಿ ಶಾಲೆಗಳು ಮೂಲ ಭೂತ ಸೌಕರ್ಯಗಳ ಕೊರತೆಗಳಿಂದ ಮುಚ್ಚು ವದನ್ನು ತಪ್ಪಿಸಬೇಕೆಂದು ಮಧು ಬಂಗಾರಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಇವರ ಮುಖಾಂತರ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಕ್ಷೆತ್ರ ಶಿಕ್ಷಣಾ ಧಿಕಾರಿ ಬಿ ನಟೇಶ್ ಇವರಿಗೆ ಸಲ್ಲಿಸಿದರು. ಮ್ಯಾಗಳಮನಿ ಮಾತನಾಡಿ, ಶಿಕ್ಷಕರ ವೃತ್ತಿಯ ಮೂಲ ಉದ್ದೇಶ ಬಿಟ್ಟು ಅನ್ಯಕಾರ್ಯಗಳಿಗೆ ನಿಯೋಜನೆ ಮಾಡುವದರಿಂದ ಹಾಗೂ ಶಾಲೆಗಳಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆಗಳಿಂದ ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಹಾಗೂ ಮುಚ್ಚುತ್ತಾ ಇವೆ. ಮತದಾರರ ಪಟ್ಟಿ ಪರಿಷ್ಕರಣೆ, ಜಾತಿ ಗಣತಿ, ಆರ್ಥಿಕ ಸಮೀಕ್ಷೆ, ಇತ್ಯಾದಿ ಗಣತಿಗಳು ಹಾಗೂ ಬಿಸಿಯೂಟದ ನಿರ್ವಹಣೆ, ದಾಖಲಾತಿ, ವರ್ಗಾವಣೆ ಪತ್ರ, ಪುಸ್ತಕ,ಸಮವಸ್ತ್ರ,ಶೂ, ಇತ್ಯಾದಿಗಳನ್ನು ಕoಪ್ಯೂಟರ್ ನಲ್ಲಿ ದಾಖಲಿಸುವದು.ಮೇಲಾಧಿಕಾರಿಗಳು ಪದೇ ಪದೇ ಮಾಹಿಗಳನ್ನು ಕೇಳುವದು. ಶಾಲಾ ಅಸ್ತಿಯನ್ನು ನೋಂದಣಿ ಮಾಡಿಸಲು ಮುಕ್ಯೋಪಾಧ್ಯಾಯರೇ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಗಳಿಗೆ ಅಲೆದಾಡುವದು ಸೇರಿದಂತೆ ಇತ್ಯಾದಿಗಳ ಕೆಲಸ ಮಾಡುವದರಿಂದ ಮಕ್ಕಳಿಗೆ ಬೋಧನೆಯ ಸಮಯ ಕಡಿಮೆಯಾಗುವದರಿಂದ ಕಲಿಕೆಯ ಗುಣಮಟ್ಟಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವದು ಒಂದು ಕಾರಣವಾದರೆ, ಶಿಕ್ಷಕರ ಕೊರತೆ,ಶುದ್ಧವಾದ ಕುಡಿಯುವ ನೀರು, ಸಮರ್ಪಕ ಶೌಚಾಲಯಗಳ ಕೊರತೆ, ಸೋರುತ್ತಿರುವ ಕೊಠಡಿಗಳು, ಇನ್ನೂ ಅನೇಕ ಕಾರಣಗಳಿಂದಲೂ ಪಾಲಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲೆ ಮಾಡುವದಿಲ್ಲ, ಹೀಗೆ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲು ಪ್ರಮಾಣ ಕಡಿಮೆಯಾಗುತ್ತಾ ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತವೆ. ಮುಂದೊಂದು ದಿನ ಸರಕಾರಿ ಶಾಲೆಗಳನ್ನು ಬ್ಯಾಟರಿ ಹಚ್ಚಿ ಹುಡುಕಿದರೂ ಸಿಗುವದಿಲ್ಲ. ಹಾಗೆ ಆಗುವದಕ್ಕಿಂತ ಮುಂಚೆಯೇ ಜಾಗೃತಿ ವಹಿಸಿ, ಶಾಲೆಗಳ ಅಳಿವಿಗೆ ಕಾರಣಗಳನ್ನು ತಿಳಿದುಕೊಂಡು, ಶಾಲೆಗಳನ್ನು ಸಬಲೀಕರಣಗೊಳಿಸಿ, ಸರಕಾರಿ ಶಾಲೆಗಳನ್ನು ಉಳಿಸಬೇಕು. ಅದು ಸರಕಾರದ ಜವಾಬ್ದಾರಿಯೂ ಕೂಡಾ ಹೌದು. ಪಿ ಯು ಸಿ ಮತ್ತು ಪದವಿ ಮುಗಿಸಿರುವ ನಿರುದ್ಯೋಗ ಯುವಕರುಗಳನ್ನು ಗಣತಿ ಕಾರ್ಯಗಳಿಗೆ, ಹಾಗೂ ಬಿಸಿಯೂಟದ ಎಲ್ಲಾ ದಾಖಲೆಗಳ ನಿರ್ವಹಣೆಗಾಗಿ,ದಾಖಲಾತಿ, ವರ್ಗಾವಣೆ ಪತ್ರ ಸಮವಸ್ತ್ರ, ಬಟ್ಟೆ, ವಿದ್ಯಾರ್ಥಿವೇತನ, ಇತ್ಯಾದಿ ಆನ್ ಲೈನ್ ಕೆಲಸಕ್ಕೆ ನಿರುದ್ಯೋಗ ಯುವಕರ ನ್ನು ಬಳಸಿಕೊಂಡರೆ ಅವರಿಗೂ ಆರ್ಥಿಕ ಸಹಾಯವಾಗುತ್ತದೆ. ಮತ್ತು ನಮ್ಮ ಸರಕಾರಿ ಶಾಲೆಗಳೂ ಉಳಿಯುತ್ತವೆ.ನಾವು ಸಲ್ಲಿಸಿದ ಮನವಿಯನ್ನು ಗಂಭೀರವಾಗಿ ಪರಿಶೀಲಿಸಿ ವಿಳಂಬ ಮಾಡದೇ ಕೂಡಲೇ ಕ್ರಮ ಕೈಗೊOಡು ಸರಕಾರಿ ಶಾಲೆಗಳನ್ನು ಉಳಿಸಬೇಕೆಂದು ಮ್ಯಾಗಳಮನಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಡಿಯಪ್ಪ ಹಂಚಿನಾಳ, ರಾಮಣ್ಣ ರುದ್ರಾಕ್ಷಿ, ಹಾಲಪ್ಪ, ಜಂಬಣ್ಣ ಮತ್ತಿತರರು ಇದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *